ಫಿಯೆಟ್ ಮುಂಬೈ ಶೋ ರೂಂ ತಲುಪಿದ ಅಬಾರ್ತ್ 500, ಅವೆಂಚ್ಯೂರಾ
ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್, ದಕ್ಷಿಣ ಮುಂಬೈನಲ್ಲಿ ತನ್ನ ಮೊದಲ ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್ ಅನ್ನು ತೆರೆದುಕೊಂಡಿದೆ. ಎಸ್‌ಕೇ ಮೋಟಾರ್ಸ್ (Esskay Motors) ಎಂದು ಹೆಸರಿಸಿಕೊಳ್ಳಲಿರುವ ಫಿಯೆಟ್ ಡೀಲರ್‌ಶಿಪ್, 8,500 ಚದರ ಅಡಿ ಪ್ರದೇಶದಲ್ಲಿ ವ್ಯಾಪಿಸಿದ್ದು, ಮೂರು ಕಾರುಗಳನ್ನು ಪ್ರದರ್ಶನ ಮಾಡುವ ಅವಕಾಶವಿದೆ. ಇದರ ಜತೆಗೆ 18,000 ಚದರ ಅಡಿ ವಿಸ್ತೀರ್ಣದ ಸರ್ವೀಸ್ ಸಂಟರ್ ಕೂಡಾ ಲಗತ್ತಿಸಲಾಗಿದೆ.
ಫಿಯೆಟ್ ಕ್ಲೈಸ್ಲರ್ ಆಟೋಮೊಬೈಲ್ ಇಂಡಿಯಾ ಕಾರ್ಯಾಚರಣೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ನಾಗೇಶ್ ಬಸವನಹಳ್ಳಿ ನೂತನ ಫಿಯೆಟ್ ಎಸ್‌ಕೇ ಮೋಟಾರ್ಸ್ ಶೋ ರೂಂ ಉದ್ಘಾಟಿಸಿದರು.

ಫಿಯೆಟ್ ನೂತನ ಶೋ ರೂಂನಲ್ಲಿ 2014 ಫಿಯೆಟ್ ಲಿನಿಯಾ ಫೇಸ್‌ಲಿಫ್ಟ್, 2014 ಪುಂಟೊ ತಲಹದಿಯ ಅವೆಂಚ್ಯೂರಾ ಹಾಗೂ ಅಬಾರ್ತ್ 500 ಪ್ರದರ್ಶಿಸಲಾಗಿದೆ.

ಇನ್ನು ಗ್ರಾಹಕರಿಗೆ ಹಾಗೂ ಕಾರು ಉತ್ಸಾಹಿಗಳಿಗಾಗಿ ಮಾರ್ಚ್ 20ರಿಂದ 23ರ ವರೆಗೆ ಮುಂಬೈನ ಈ ಶೋ ರೂಂನಲ್ಲಿ ಕಾರುಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುವುದು. ಇದು ಗ್ರಾಹಕರು ಫಿಯೆಟ್ ಕಾರು ಬಗ್ಗೆ ಇನ್ನು ಹತ್ತಿರದಿಂದ ತಿಳಿದುಕೊಳ್ಳಲು ಸಹಕಾರಿಯಾಗಲಿದೆ.

ನಿಮ್ಮ ಮಾಹಿತಿಗಾಗಿ ತಿಂಗಳಾರಂಭದಲ್ಲಷ್ಟೇ 2014 ಫಿಯೆಟ್ ಲಿನಿಯಾ ಭಾರತದಲ್ಲಿ ಲಾಂಚ್ ಕಂಡಿತ್ತು. ಇನ್ನುಳಿದಂತೆ ಅಬಾರ್ತ್ 500 ಹಾಗೂ ಅವೆಂಚ್ಯೂರಾ ಇನ್ನಷ್ಟೇ ಮಾರುಕಟ್ಟೆ ಆಗಮಿಸಬೇಕಾಗಿದ್ದು, ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸಮಕಾಲೀನ ನಗರದ ಕಾರು ಎನಿಸಿಕೊಂಡಿರುವ ಅವೆಂಚ್ಯೂರಾ, ಸಿಟಿ ಪ್ರದೇಶದಲ್ಲಿ ಸಕ್ರಿಯ ಜೀವನ ಇಷ್ಟಪಡುವವರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ.

ಇನ್ನೊಂದೆಡೆ ಅಬಾರ್ತ್ 500, ಕಂಪ್ಲೀಟ್ ಬಿಲ್ಡ್ ಯುನಿಟ್ ಮುಖಾಂತರ ದೇಶಕ್ಕೆ ಆಮದಾಗಲಿದ್ದು, ದುಬಾರಿ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಗುರುತಿಸಿಕೊಳ್ಳಲಿದೆ. ಪ್ರಸ್ತುತ ಅಬಾರ್ತ್ 500 ಕಾರಲ್ಲಿ, ಸನ್ ರೂಫ್, ಕ್ರಾಸ್ ಡ್ರಿಲ್ಡ್ ಬ್ರೇಕ್ ಡಿಸ್ಕ್, ಸ್ಪೋರ್ಟ್ಸ್ ಸೀಟ್, ಕೆಳಸ್ತರವಾಗಿ ಸಸ್ಪೆಷನ್, 17 ಇಂಚಿನ ಅಲಾಯ್ ವೀಲ್, 7 ಏರ್ ಬ್ಯಾಗ್, ಟರ್ಬೊ ಬೂಸ್ಟ್ ಗೇಜ್, ಟ್ವಿನ್ ಎಕ್ಸಾಸ್ಟ್ ಔಟ್ಲೆಟ್, ಎಬಿಎಸ್, ಇಬಿಡಿ, ಹೈಡ್ರಾಲಿಕ್ ಬ್ರೇಕ್ ಅಸಿಸ್ಟಂಟ್, ಪಾರ್ಕಿಂಗ್ ಸೆನ್ಸಾರ್ ಹಾಗೂ ಫಾಗ್ ಲೈಟ್‌ಗಳಂತಹ ವೈಶಿಷ್ಟ್ಯಗಳು ಸಿಗಲಿದೆ.


Click it and Unblock the Notifications








