2 ದಶಲಕ್ಷ ಮೈಲುಗಲ್ಲು ದಾಟಿದ ಫೋರ್ಡ್ ಇಕೊಬೂಸ್ಟ್

ದೇಶದಲ್ಲಿ ಎಂಜಿನ್ ತಲಹದಿಯಲ್ಲಿ ಮಾರಾಟ ಕಂಡುಕೊಂಡಿರುವ ಕೆಲವೇ ಕೆಲವು ಮಾಡೆಲ್‌ಗಳಲ್ಲಿ ಫೋರ್ಡ್‌ನ ಇಕೊಸ್ಪೋರ್ಟ್ ಕೂಡಾ ಒಂದಾಗಿದೆ. ಇದರಲ್ಲಿ ಆಳವಡಿಸಲಾಗಿರುವ 1.0 ಲೀಟರ್ ಇಕೊಬೂಸ್ಟ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಈಗಾಗಲೇ ಜನಮನ್ನಣೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ನಾಲ್ಕು ವರ್ಷಗಳ ಹಿಂದೆ ಜಾಗತಿಕ ಪ್ರವೇಶ ಪಡೆದಿದ್ದ ಫೋರ್ಡ್ ಇಕೊಬೂಸ್ಟ್ ಎಂಜಿನ್ ಸದ್ಯ ವಿಶ್ವದೆಲ್ಲೆಡೆ ಭಾರಿ ಬೇಡಿಕೆ ಕಂಡುಕೊಂಡಿದೆ. ಅಷ್ಟೇ ಅಲ್ಲದೆ 2013ನೇ ಸಾಲಿನ ಅಂತರಾಷ್ಟ್ರೀಯ ವರ್ಷದ ಎಂಜಿನ್ ಗೌರವಕ್ಕೂ ಪಾತ್ರವಾಗಿತ್ತು.

ಅಷ್ಟಕ್ಕೂ ಫೋರ್ಡ್ ಇಕೊಬೂಸ್ಟ್ ಎಂಜಿನ್ ವೈಶಿಷ್ಟ್ಯಗಳೇನು? ತಿಳಿದುಕೊಳ್ಳಲು ಫೋಟೊ ಸ್ಲೈಡರ್‌ನತ್ತ ಮುಂದುವರಿಯಿರಿ...

ವೈಶಿಷ್ಟ್ಯ

ವೈಶಿಷ್ಟ್ಯ

ಹೆಚ್ಚು ಶಕ್ತಿಶಾಲಿ ಜತೆಗೆ ಗರಿಷ್ಠ ಇಂಧನ ಕ್ಷಮತೆ ನೀಡುವುದೇ ( 123 HP, 170 Nm) ಇಕೊಬೂಸ್ಟ್ ಎಂಜಿನ್‌ನ ಪ್ರಮುಖ ವೈಶಿಷ್ಟ್ಯತೆಯಾಗಿದೆ. ಇದುವೇ ದೇಶದಲ್ಲಿ ಇಕೊಸ್ಪೋರ್ಟ್ ಯಶಸ್ಸಿಗೆ ಕಾರಣವಾಗಿದೆ.

ಮೈಲುಗಲ್ಲು

ಮೈಲುಗಲ್ಲು

ಇದೀಗ ವಿಶ್ವದ್ಯಾಂತ 2 ದಶಲಕ್ಷ ಇಕೊಬೂಸ್ಟ್ ಎಂಜಿನ್‌ ಉತ್ಪಾದಿಸಿರುವ ಫೋರ್ಡ್ ಇನ್ನೊಂದು ಮೈಲುಗಲ್ಲು ಸ್ಥಾಪಿಸಿದೆ. ನಿಮ್ಮ ಮಾಹಿತಿಗಾಗಿ, ದೇಶದಲ್ಲಿ ಇಕೊಸ್ಪೋರ್ಟ್ ಆವೃತ್ತಿಗೆ ಭಾರಿ ಬೇಡಿಕೆ ಕಂಡುಬಂದಿದ್ದರ ಹಿನ್ನಲೆಯಲ್ಲಿ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಇಕೊಸ್ಪೋರ್ಟ್

ಇಕೊಸ್ಪೋರ್ಟ್

ದೇಶದಲ್ಲಿ ಇಕೊಸ್ಪೋರ್ಟ್ ಆವೃತ್ತಿಯಲ್ಲಿ ಮಾತ್ರ ಇಕೊಬೂಸ್ಟ್ ಎಂಜಿನ್ ಲಭ್ಯವಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಫೋರ್ಡ್ ಫಿಯೆಸ್ಟಾದಲ್ಲೂ ಇಕೊಬೂಸ್ಟ್ ಎಂಜಿನ್ ಲಭ್ಯವಿರುವ ಸಾಧ್ಯತೆಗಳಿವೆ.

ಮೈಲೇಜ್

ಮೈಲೇಜ್

ಫೋರ್ಡ್ ಇಕೊಸ್ಪೋರ್ಟ್‌ನ 1.0 ಲೀಟರ್ ಪೆಟ್ರೋಲ್ ಇಕೊಬೂಸ್ಟ್ ಎಂಜಿನ್ ಪ್ರತಿ ಲೀಟರ್‌ಗೆ 18.9 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದು ದೇಶದ ಪರಿಸ್ಥಿತಿಯಲ್ಲಿ ಅತ್ಯುತ್ತಮ ಮೈಲೇಜ್ ಆಗಿದೆ.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

ಇನ್ನು ಇತರ ಎಂಜಿನ್‌ಗಳಿಗೆ ಹೋಲಿಸಿದರೆ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿರುವ ಫೋರ್ಡ್ ಇಕೊಸ್ಪೋರ್ಟ್ ಕಡಿಮೆ ಹೊಗೆಯನ್ನು ಹೊರಸೂಸುತ್ತಿದೆ. ಇದು ಕೂಡಾ ಪ್ಲಸ್ ಪಾಯಿಂಟ್ ಆಗಿದೆ.

More from DriveSpark

Article Published On: Wednesday, September 18, 2013, 16:09 [IST]
English summary
Ford EcoSport was one of those few models in India which sold well because of the name of the engine associated with it. The 1.0 liter EcoBoost 3 cylinder petrol engine. A lot has been said about Ford's EcoBoost engines since there launch four years back, almost all of them positive. The 1.0 liter unit was even awarded the 2013 International Engine Of The Year title.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+