ದೇಶದ ರಸ್ತೆಗೆ 2014 ಫೋರ್ಡ್ ಫಿಯೆಸ್ಟಾ ಭರ್ಜರಿ ಎಂಟ್ರಿ
ನಿರೀಕ್ಷೆಯಂತೆಯೇ ಬಹುನಿರೀಕ್ಷಿತ 2014 ಫೋರ್ಡ್ ಫಿಯೆಸ್ಟಾ ಭಾರತದಲ್ಲಿ ಭರ್ಜರಿ ಲಾಂಚ್ ಕಂಡಿದೆ. ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿರುವ ಫೋರ್ಡ್‌ನ ಹೊಸ ಕಾರಿನ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ದರ 7.69 ಲಕ್ಷ ರು.ಗಳಾಗಿವೆ.
ಹಳೆಯ ಫಿಯೆಸ್ಟಾ ಮಾದರಿಗೆ ಹೋಲಿಸಿದಾಗ ಹೊಸ ವೆರಿಯಂಟ್ ಸಂಪೂರ್ಣವಾಗಿಯೂ ಭಿನ್ನವಾಗಿದ್ದು, ಗ್ರಾಹಕರಿಗೆ ಗರಿಷ್ಠ ಸೌಲಭ್ಯ ಒದಗಿಸುವಲ್ಲಿ ಅಮೆರಿಕ ಮೂಲದ ಫೋರ್ಡ್ ಸಂಸ್ಥೆ ಯಶ ಕಂಡಿದೆ. ಅತ್ಯಾಧುನಿಕ ಸೌಲಭ್ಯವುಳ್ಳ ಒಳಮೈ, ಸೆಗ್ಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ವಿಜೇತ ಸಿಂಕ್ (SYNC) ಮಾಹಿತಿ ಮನರಂಜನಾ ವ್ಯವಸ್ಥೆ ಮತ್ತು ಹ್ಯಾಂಡ್ ಫ್ರಿ ಕಾರು ತಂತ್ರಜ್ಞಾನವು ಚಾಲಕರ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ.

ವೆರಿಯಂಟ್
ಆಂಬಿಯೆಂಟ್, ಟ್ರೆಂಡ್ ಹಾಗೂ ಟೈಟಾನಿಯಂಗಳೆಂಬ ಮೂರು ವೆರಿಯಂಟ್‌ಗಳಲ್ಲಿ 2014 ಫೋರ್ಡ್ ಫಿಯೆಸ್ಟಾ ಲಭ್ಯವಾಗಲಿದೆ. ಇವೆಲ್ಲವೂ 1.5 ಲೀಟರ್ ಡ್ಯುರಟಾರ್ಕ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಮೈಲೇಜ್
ಸಂಸ್ಥೆಯ ಪ್ರಕಾರ ನೂತನ ಫಿಯೆಸ್ಟ್ ಪ್ರತಿ ಲೀಟರ್‌ಗೆ 25.01 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)
ಎಂಟ್ರಿ ಲೆವೆಲ್ ಆಂಬಿಯೆಂಟ್ ಡೀಸೆಲ್ ವೆರಿಯಂಟ್ ಪ್ರಾರಂಭಿಕ ದರ 7.69 ಲಕ್ಷ ರು.ಗಳಾಗಿವೆ. ಅದೇ ರೀತಿ ಟ್ರೆಂಡ್ ಹಾಗೂ ಟಾಪ್ ಎಂಡ್ ಟೈಟಾನಿಯಂ ಡೀಸೆಲ್ ವೆರಿಯಂಟ್‌ಗಳು ಅನುಕ್ರಮವಾಗಿ 8.55 ಹಾಗೂ 9.29 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಸಿಂಕ್ ತಂತ್ರಜ್ಞಾನ
ಫೋರ್ಡ್‌ನ ಸಿಂಕ್ (SYNC) ತಂತ್ರಗಾರಿಕೆಯನ್ನು ಮೊದಲ ಬಾರಿಗೆ ಇಕೊಸ್ಪೋರ್ಟ್‌ನಲ್ಲಿ ಪರಿಚಯಿಸಲಾಗಿತ್ತು. ಇದೀಗ ಫಿಯೆಸ್ಟಾದಲ್ಲೂ ಇದನ್ನು ಮುಂದುವರಿಸಲಾಗಿದೆ. ಇದು ಮಾಲಿಕರಿಗೆ ಸ್ಮಾರ್ಟ್‌ಫೋನಲ್ಲೇ ವಾಯ್ಸ್ ಕಂಟ್ರೋಲ್ ಸೇವೆಯನ್ನು ನೀಡುತ್ತದೆ.

ವೈಶಿಷ್ಟ್ಯ
ಟಿಲ್ಟ್ ಸ್ಟೀರಿಂಗ್, ಎಲೆಕ್ಟ್ರಿಕ್ ಮಿರರ್, ರಿಯರ್ ಡಿಫಾಗರ್, ಗೈಡ್ ಮಿ ಹೋಮ್ ಹೆಡ್‌ಲ್ಯಾಂಪ್, ಎಲೆಕ್ಟ್ರಿಕ್ ಬೂಟ್ ರಿಲೀಸ್, ಹೊಂದಾಣಿಸಬಹುದಾದ ರಿಯರ್ ಹೆಡ್ ರೆಸ್ಟ್, ಮಡಚಬಹುದಾದ ಹಿಂದುಗಡೆ ಸೀಟು, ಎತ್ತರ ಹೊಂದಾಣಿಸಬಹುದಾದ ಸೀಟು ಬೆಲ್ಟ್, 15 ಇಂಚು ಅಲಾಯ್ ವೀಲ್, ರೈನ್ ಸೆನ್ಸಿಂಗ್ ವೈಪರ್, ಆಟೋ ಹೆಡ್‌ಲ್ಯಾಂಪ್, ಫುಶ್ ಬಟನ್ ಸ್ಟಾರ್ಟ್, ಸ್ಮಾರ್ಟ್ ಕೀಲೆಸ್ ಎಂಟ್ರಿ ಮುಂತಾದ ವೈಶಿಷ್ಟ್ಯಗಳನ್ನು ನೂತನ ಫಿಯೆಸ್ಟ್ ಮಾದರಿ ಪಡೆದುಕೊಳ್ಳಲಿದೆ.

ಸುರಕ್ಷತೆ
ಇನ್ನು ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದ್ದು, ಎಬಿಎಸ್, ಇಬಿಡಿ, ಚಾಲಕ ಬದಿಯ ಏರ್ ಬ್ಯಾಗ್ ಎಲ್ಲ ವೆರಿಯಂಟ್‌ಗಳಲ್ಲೂ ಲಭ್ಯವಾಗಲಿದೆ. ಹಾಗೆಯೇ ಟಾಪ್ ಎಂಡ್ ವೆರಿಯಂಟ್ ಸಿಂಕ್ ಮಾಹಿತಿ ಮನರಂಜನಾ ಸಿಸ್ಟಂ ಜತೆ ಎಮರ್ಜನ್ಸಿ ಅಸಿಸ್ಟ್ ಸೇಫ್ಟಿ ತಂತ್ರಜ್ಞಾನ ಲಭ್ಯವಿರಲಿದೆ.

ಸ್ಟಾಂಡರ್ಡ್ ವೈಶಿಷ್ಟ್ಯ
ಟಿಲ್ಟ್ ಸ್ಟೀರಿಂಗ್,
ಎಲೆಕ್ಟ್ರಿಕ್ ಮಿರರ್,
ರಿಯರ್ ಡಿಫಾಗರ್,
ಗೈಡ್ ಮಿ ಹೋಮ್ ಹೆಡ್‌ಲ್ಯಾಂಪ್,
ಎಲೆಕ್ಟ್ರಿಕ್ ಬೂಟ್ ರಿಲೀಸ್,
ಹೊಂದಾಣಿಸಬಹುದಾದ ರಿಯರ್ ಹೆಡ್ ರೆಸ್ಟ್, ಮಡಚಬಹುದಾದ ಹಿಂದುಗಡೆ ಸೀಟು,
ಎತ್ತರ ಹೊಂದಾಣಿಸಬಹುದಾದ ಸೀಟು ಬೆಲ್ಟ್,
15 ಇಂಚು ಅಲಾಯ್ ವೀಲ್

ಮಿಡ್ ವೆರಿಯಂಟ್
ಇವೆಲ್ಲದರ ಜೊತೆಗೆ ಮಿಡ್ ವೆರಿಯಂಟ್‌ನಲ್ಲಿ ಕ್ರೂಸ್ ಕಂಟ್ರೋಲ್, ಫೂಟ್‌ವೆಲ್ ಲ್ಯಾಂಪ್, ದೇಹ ಬಣ್ಣದ ಸೈಡ್ ವ್ಯೂ ಮಿರರ್, ಡೋರ್ ಹ್ಯಾಂಡಲ್, ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್, ಆರು ಸ್ಪೀಕರ್ ಸಿಡಿ, ಯುಎಸ್‌ಬಿ ಮತ್ತು ಆಕ್ಸ್ ಆಡಿಯೋ ಸಿಸ್ಟಂ ಸೌಲಭ್ಯವಿರಲಿದೆ.

ಟಾಪ್ ವೆರಿಯಂಟ್
ಅಂತೆಯೇ ಟಾಪ್ ಎಂಡ್ ವೆರಿಯಂಟ್‌ನಲ್ಲಿ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್‌ಸೈಡ್ ರಿಯರ್ ವ್ಯೂ ಮಿರರ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಆಂಬಿಯೆಂಟ್ ಲೈಟಿಂಗ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಪಡ್ಲ್ ಲ್ಯಾಂಪ್, ಸುಧಾರಿತ ಡಿಜಿಟಲ್ ಟ್ರಿಪ್ ಕಂಪ್ಯೂಟರ್ ಜತೆ ರಿಯಲ್ ಟೈಮ್ ಫ್ಯೂಯಲ್ ಎಕಾನಮಿ, ಡಿಸ್ಟಾನ್ಸ್ ಟು ಎಂಟ್ರಿ ಮೀಟರ್ ಮತ್ತು ಅಲಾಯ್ ವೀಲ್ ಇರಲಿದೆ.


Click it and Unblock the Notifications








