ಪ್ರಸಕ್ತ ತಿಂಗಳಲ್ಲೇ 2014 ಫೋರ್ಡ್ ಫಿಯೆಸ್ಟಾ ಲಾಂಚ್

By Nagaraja

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಫೋರ್ಡ್ ಫಿಯೆಸ್ಟಾ ಫೇಸ್‌ಲಿಫ್ಟ್ ಆವೃತ್ತಿಯು ಪ್ರಸಕ್ತ ತಿಂಗಳಲ್ಲೇ ಲಾಂಚ್ ಆಗಲಿದೆ. ವರದಿಗಳ ಪ್ರಕಾರ ಅಮೆರಿಕ ಮೂಲದ ಫೋರ್ಡ್ ಇಂಡಿಯಾ ಸಂಸ್ಥೆಯು ಫಿಯೆಸ್ಟಾ ಡೀಸೆಲ್ ಮಾದರಿಯನ್ನು ಮೊದಲು ಬಿಡುಗಡೆ ಮಾಡಲಿದೆ.

ಅದೇ ಹೊತ್ತಿಗೆ ಪೆಟ್ರೋಲ್ ವೆರಿಯಂಟ್ ವರ್ಷಾಂತ್ಯದಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ. ಹಾಗಿದ್ದರೂ ಪೆಟ್ರೋಲ್‌ಗಿಂತಲೂ ಮೊದಲು ಡೀಸೆಲ್ ಮಾದರಿಗೆ ಆದ್ಯತೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. 2014ನೇ ಮಾದರಿಯ ಫಿಯೆಸ್ಟಾದ ಬಾಹ್ಯ ರೂಪದಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ಅದೇ ರೀತಿ ಕ್ಯಾಬಿನ್ ಒಳಗಡೆಯೂ ಪರಿಷ್ಕೃತ ವೈಶಿಷ್ಟ್ಯ ತರಲಾಗಿದೆ.

Ford Fiesta 2014

ಕಾರಿನೊಳಗೆ ಸ್ಟಾರ್ಟ್/ಸ್ಟಾಪ್ ಬಟನ್, ಡ್ರೈವರ್ ಸೀಟ್ ಎತ್ತರ ಹೊಂದಾಣಿಕೆ, ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಗೈಡ್ ಮಿ ಹೋಮ್ ಲ್ಯಾಂಪ್ ಮುಂತಾದ ಸೌಲಭ್ಯಗಳು ಲಭಿಸಲಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಜತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಎಸ್‌ವೈಎನ್‌ಸಿ ಜತೆ ಎಮರ್ಜನ್ಸಿ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಇನ್ನಿತರ ಅಗತ್ಯ ಸುರಕ್ಷತಾ ವೈಶಿಷ್ಟ್ಯಗಳನ್ನು ಅನುಸರಿಸಲಾಗಿದೆ.

ford fiesta 2014

ಅಂತೆಯೇ ಹೊರಗಡೆ ಪರಿಷ್ಕೃತ ಬಂಪರ್ ಕ್ರೀಡಾತ್ಮಕ ಲುಕ್ ಪ್ರದಾನ ಮಾಡಲಿದೆ. ಅದೇ ರೀತಿ ಹೆಡ್‌ಲ್ಯಾಂಪ್ ಮತ್ತು ಫಾಗ್‌ಲ್ಯಾಂಪ್ ಸ್ಥಾನಪಲ್ಲಟದೊಂದಿಗೆ ಪರಿಷ್ಕೃತಗೊಳಿಸಲಾಗಿದೆ. ಇನ್ನುಳಿದಂತೆ ದಿಟ್ಟವಾದ ಫ್ರಂಟ್ ಗ್ರಿಲ್‌ನಲ್ಲಿ ಕ್ರೋಮ್ ಫಿನಿಶ್ ಕಂಡುಬರಲಿದೆ. ಅಂತೆಯೇ ಸ್ಫೋರ್ಟಿ ನೋಟದ ಅಲಾಯ್ ವೀಲ್ ಕೂಡಾ ಇರಲಿದೆ. ಅಂತಿಮವಾಗಿ ಹಿಂದುಗಡೆ ಟೈಲ್‌ಲೈಟ್ ಕ್ಲಸ್ಟರ್ ರೂಪದಲ್ಲಿ ಬದಲಾವಣೆ ಕಂಡುಬರಲಿದೆ.

2014 ಫೋರ್ಡ್ ಫಿಯೆಸ್ಟಾ ಫೇಸ್‌ಲಿಫ್ಟ್ ಮಾದರಿಯು 1.5 ಲೀಟ್ರ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 90 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸೇರ್ಪಡೆಯಾಗಲಿರುವ ಪೆಟ್ರೋಲ್ ವೆರಿಯಂಟ್ 1.5 ಜೊತೆಗೆ 1.0 ಲೀಟರ್ ಇಕೊಬೂಸ್ಟ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.

Most Read Articles

Kannada
English summary
Ford India had revealed its plan to launch a facelift for its Fiesta sedan at the 2014 Auto Expo held in New Delhi. we now hear that the American based manufacturer is planning to launch the 2014 version of Fiesta in June, 2014.
Story first published: Tuesday, June 17, 2014, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X