ಫೋರ್ಡ್ ಫಿಗೊ ಸೆಲೆಬ್ರೇಷನ್ ಆವೃತ್ತಿ ಬಿಡುಗಡೆ

By Nagaraja

ಭಾರತದಲ್ಲಿ ಹ್ಯಾಚ್‌ಬ್ಯಾಕ್ ಆವೃತ್ತಿ ಬಿಡುಗಡೆಯ ಮೂರನೇ ವರ್ಷ ಆಚರಿಸಿಕೊಳ್ಳುತ್ತಿರುವ ಪ್ರತಿಷ್ಠಿತ ಫೋರ್ಡ್ ಕಂಪನಿಯು, ಇದೀಗ ಅತಿ ನೂತನ ಫಿಗೊ ಸೆಲೆಬ್ರೇಷನ್ ಅಡಿಷನ್ ಕಾರನ್ನು ಲಾಂಚ್ ಮಾಡಿದೆ.

ಈ ಹಿಂದೆ 2010ರಲ್ಲಿ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಫೋರ್ಡ್ ಫಿಗೊ, ಅಮೆರಿಕ ಕಾರು ತಯಾರಕರ ಪೈಕಿ ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರೆಂಬ ಗೌರವಕ್ಕೂ ಪಾತ್ರವಾಗಿತ್ತು.

ಅಂತೆಯೇ ಕಳೆದ ವರ್ಷ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಿದ್ದ ಫೋರ್ಡ್ ಉತ್ತಮ ಮಾರುಕಟ್ಟೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗಿನ ಸಂಭ್ರಮದ ಆವೃತ್ತಿಯಲ್ಲಿ ಕಾಸ್ಮೆಟಿಕ್ ಬದಲಾವಣೆ ಜತೆ ಇಂಟಿರಿಯರ್ ಬದಲಾವಣೆ ಕೂಡಾ ಕಂಡುಬಂದಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಪೆಟ್ರೋಲ್ ಆವೃತ್ತಿ: 4.15 ಲಕ್ಷ ರು.
  • ಡೀಸೆಲ್ ವೆರಿಯಂಟ್: 5.15 ಲಕ್ಷ ರು.

ಎಕ್ಸ್‌ಟೀರಿಯರ್ ಭಾಗದಲ್ಲಿ ಸಹಿ ಬಾಡ್ಜಿಂಗ್, ನ್ಯೂ ಡೆಕಾಲ್ಸ್ ಹಾಗೂ ರಿಯರ್ ಸ್ಪಾಯ್ಲರ್ ಹೊಂದಿರಲಿದೆ. ಹಾಗೆಯೇ ಒಳ ಭಾಗದಲ್ಲಿ ಸ್ಕಫ್ ಪ್ಲೇಟ್, ಲಿಮಿಟೆಡ್ ಅಡಿಷನ್ ಸೀಟ್ ಕವರ್, ಸ್ಯಾಟಲೈಟ್ ನೇವಿಗೇಷನ್ ಹಾಗೂ ರಿವರ್ಸ್ ಪಾರ್ಕ್ ಅಸಿಸ್ಟ್ ಹೊಂದಿರಲಿದೆ.

ಹಾಗಿದ್ದರೂ ಎಂಜಿನ್ ನಿರ್ವಹಣೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಫೋರ್ಡ್ ಫಿಗೊ 1.2 ಲೀಟರ್ ಪೆಟ್ರೋಲ್ (75 ಬಿಎಚ್‌ಪಿ) ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ (70 ಬಿಎಚ್‌ಪಿ) ಹೊಂದಿರಲಿದೆ. ಈ ಎರಡು ಎಂಜಿನ್‌ಗಳು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

ಇನ್ನು ದರ ಗಮನಿಸಿದರೆ ಸಾಮಾನ್ಯ ಆವೃತ್ತಿಗಿಂತ ಸ್ಪೆಷಲ್ ಅಡಿಷನ್ ಸ್ವಲ್ಪ ದುಬಾರಿಯಾಗಿರಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಪೆಷಲ್ ಅಡಿಷನ್ ದರ 3.85 ಲಕ್ಷ ರು.ಗಳಿಂದ ಆರಂಭವಾಗಲಿದೆ. ಆದರೆ ಸೆಲೆಬ್ರೇಷನ್ ಆವೃತ್ತಿಯ ಪೆಟ್ರೋಲ್ ವೆರಿಯಂಟ್ ದರ 4.15 ಹಾಗೂ ಡೀಸೆಲ್ ವೆರಿಯಂಟ್ ದರ 5.16 ಲಕ್ಷ ರು.ಗಳಾಗಿರಲಿದೆ.

Ford Figo Celebration Edition

ದೇಶದ ಮಾರುಕಟ್ಟೆಯಲ್ಲಿ ಸಣ್ಣ ಕಾರು ವಿಭಾಗದಲ್ಲಿ ಫೋರ್ಡ್ ಪಾತ್ರ ಮಹತ್ತರವಾಗಿದೆ. ಇದೀಗ ಸೆಲೆಬ್ರೇಷನ್ ಆವೃತ್ತಿ ಬಿಡುಗಡೆ ಮೂಲಕ ಫೋರ್ಡ್ ಯಶಸ್ಸನ್ನು ಆಚರಿಸಲಾಗುತ್ತಿದೆ ಎಂದು ಫೋರ್ಡ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷರಾಗಿರುವ ಜೊಂಗಿಧರ್ ಸಿಂಗ್ ತಿಳಿಸಿದ್ದಾರೆ.

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

ಅಂದ ಹಾಗೆ ಸೆಲೆಬ್ರೇಷನ್ ಅಡಿಷನ್ ಕಾರು ಡೈಮಂಡ್ ವೈಟ್ ಕಲರ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಿರಲಿದೆ.

Ford Figo Celebration Edition

ಇದರ ರಿಯರ್ ಸ್ಪಾಯ್ಲರ್ ಸ್ಪೋರ್ಟಿ ಅನುಭವಕ್ಕೆ ಕಾರಣವಾಗಲಿದೆ.

Ford Figo Celebration Edition

ಇನ್ನು ಇಂಟಿರಿಯರ್ ಭಾಗ ನೋಡಿದರೆ ಬ್ರಾಂಡಡ್ ಸ್ಕಫ್ ಪ್ಲೇಟ್ಸ್ ಹೊಂದಿರಲಿದೆ.

Ford Figo Celebration Edition

ಹಾಗೆಯೇ ಲಿಮಿಟೆಡ್ ಅಡಿಷನ್ ಸೀಟ್ ಕವರ್ ಪ್ರೀಮಿಯಂ ಅನುಭವ ನೀಡಲಿದೆ.

Ford Figo Celebration Edition

ಇನ್ನು ಸ್ಟಾಂಡರ್ಡ್ ರಿವರ್ಸ್ ಪಾರ್ಕ್ ಅಸಿಸ್ಟ್ ಕೂಡಾ ಕೊಡಲಾಗಿದೆ.

Ford Figo Celebration Edition

ಇದರ ಜತೆ ಸ್ಯಾಟಲೈಟ್ ನೇವಿಗೇಷನ್ ಸೌಲಭ್ಯ ಕೂಡಾ ಲಭ್ಯವಿದೆ.

More from DriveSpark

Article Published On: Tuesday, March 5, 2013, 14:35 [IST]
English summary
Ford has launched the Figo Celebration Edition at a special event. The Celebration Edition has been brought out to celebrate three successful years of the Figo model India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+