ಇಕೊಸ್ಪೋರ್ಟ್ ಬಳಿಕ ಫಿಗೊ ಸಂಭ್ರಮದಲ್ಲಿ ಫೋರ್ಡ್
ದೇಶಕ್ಕೆ ಲಗ್ಗೆಯಿಟ್ಟಿದ್ದ ಕಾಂಪಾಕ್ಟ್ ಎಸ್‌ಯುವಿ ಇಕೊಸ್ಪೋರ್ಟ್ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ಫೋರ್ಡ್ ಕಂಪನಿಗೆ ಸಂತಸಪಡಲು ಇನ್ನಷ್ಟು ಕಾರಣಗಳಿವೆ. ಕೆಲವು ವರ್ಷಗಳ ಹಿಂದೆ ದೇಶದ ರಸ್ತೆಗೆ ಪ್ರವೇಶಿಸಿದ್ದ ಫೋರ್ಡ್ ಫಿಗೊ ಮೂರು ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದ ಯಶಸ್ಸನ್ನು ಆಚರಿಸಿಕೊಳ್ಳುತ್ತಿದೆ.
ಬುಕ್ಕಿಂಗ್ ಆರಂಭವಾದ ಕೇವಲ 17 ದಿನಗಳೊಳಗೆ ಇಕೊಸ್ಪೋರ್ಟ್ ಬುಕ್ಕಿಂಗ್ 30,000 ಸಂಖ್ಯೆಯನ್ನು ದಾಟಿತ್ತಲ್ಲದೆ ಕಾಯುವಿಕೆ ಅವಧಿಯು ಆರು ತಿಂಗಳ ಮೀರಿತ್ತು. ಇದರ ಬೆನ್ನಲ್ಲೇ ಮತ್ತೊಂದು ಯಶಸ್ವಿ ಮಾಡೆಲ್‌ನ ಸಂಭ್ರಮವನ್ನು ಫೋರ್ಡ್ ಆಚರಿಸಿಕೊಳ್ಳುತ್ತಿದೆ.
ನಿಮ್ಮ ಮಾಹಿತಿಗಾಗಿ 2009ರ ಸೆಪ್ಟೆಂಬರ್ ತಿಂಗಳಲ್ಲಿ ಫಿಗೊ ಮೊದಲ ಬಾರಿಗೆ ದೇಶದಲ್ಲಿ ಅನಾವರಣಗೊಂಡಿತ್ತು. ಇದನ್ನು ಫೋರ್ಡ್‌ನ ಚೆನ್ನೈನ ಘಟಕದಿಂದ ಉತ್ಪಾದಿಸಲಾಗುತ್ತಿತ್ತು. ಇಲ್ಲಿಂದಲೇ ಸುಮಾರು 37 ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು.

ಅತ್ಯುತ್ತಮ ಕಾರು
2013 ಜೂನ್ ತಿಂಗಳಲ್ಲಿ ಇಕೊಸ್ಪೋರ್ಟ್ ಲಾಂಚ್ ಆಗುವ ತನಕ ಫೋರ್ಡ್ ಪಾಲಿಗೆ ಫಿಗೊ ಅತ್ಯುತ್ತಮ ಮಾರಾಟ ಗಳಿಸಿದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ನೂತನ ಡೀಲರ್‌ಶಿಪ್
ಈ ಸಂಭ್ರಮವನ್ನು ಆಚರಿಸುವ ಗುಂಗಿನಲ್ಲಿರುವ ಫೋರ್ಡ್, ಮುಂಬರುವ ಆಗಸ್ಟ್ ತಿಂಗಳಲ್ಲಿ ಐದು ನೂತನ ಡೀಲರ್‌ಶಿಪ್‌ಗಳನ್ನು ಆರಂಭಿಸಲಿದೆ.

ಗೇಮ್ ಚೇಂಜರ್
ಫೋರ್ಡ್ ಇಂಡಿಯಾ ಪಾಲಿಗೆ ನಿಜಕ್ಕೂ ಫಿಗೊ ಗೇಮ್ ಚೇಂಜರ್ ಎನಿಸಿಕೊಂಡಿತ್ತು. ಇದು ದೇಶದ ಮಧ್ಯ ಮರ್ಗದ ಜನರ ಬೇಡಿಕೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿತ್ತು.

ಸಣ್ಣ ಕಾರು ಮಾರುಕಟ್ಟೆ
ದೇಶದ ಸಣ್ಣ ಕಾರು ವಿಭಾಗದ ಮಾರುಕಟ್ಟೆಯಲ್ಲಿ ಫೋರ್ಡ್ ಫಿಗೊ ದೊಡ್ಡ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿತ್ತು. ಇದು ಭಾರತ ಮಾರುಕಟ್ಟೆ 2010 ಮಾರ್ಚ್ ತಿಂಗಳಲ್ಲಿ ಆಗಮವಾಗಿತ್ತು. ಈ ಮೂಲಕ ಮೂರು ವರ್ಷಗಳಲ್ಲೇ 3 ಲಕ್ಷ ಗ್ರಾಹಕರನ್ನು ಗಿಟ್ಟಿಸಿಕೊಂಡಿರುವ ಸಾಧನೆಯನ್ನು ಮಾಡಿದೆ.

ಮೈಲೇಜ್
ದೇಶದಲ್ಲಿ ಫಿಗೊ ಆವೃತ್ತಿಯು ಪೆಟ್ರೋಲ್ ಸೇರಿದಂತೆ ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದೆ. ಇದು ಪ್ರತಿ ಲೀಟರ್‌ಗೆ 19 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.


Click it and Unblock the Notifications








