ವಿವಾದಕ್ಕೀಡಾದ ಫೋರ್ಡ್ ಫಿಗೊ ಅಶ್ಲೀಲ ಜಾಹೀರಾತು
ಮೊದಲ ನೋಟಕ್ಕೆ ಜಗತ್ತಿನ ವಾಹನ ತಯಾರಕ ಸಂಸ್ಥೆಗಳಲ್ಲಿ ಒಳ್ಳೆಯ ಹೆಸರು ಪಡೆದಿರುವ ಫೋರ್ಡ್‌ಗಳಂತಹ ಕಂಪನಿಗಳಿಗೆ ಇಷ್ಟೊಂದು ಕೆಟ್ಟದಾದ ಜಾಹೀರಾತುವೊಂದರ ಅಗತ್ಯವಿತ್ತೇ ಎಂಬ ಪ್ರಶ್ನೆ ಮೂಡುತ್ತಿರುವುದು ಸಹಜವೇ ಸರಿ. ಸ್ವಲ್ಪ ವ್ಯವಹಾರ ಪ್ರಜ್ಞೆಯಿಂದ ವರ್ತಿಸಿದ್ದರೆ ಇಂತಹ ಅನಗತ್ಯ ವಿಚಾರಗಳನ್ನು ತಪ್ಪಿಸಬಹುದಿತ್ತು.
ವಿಶೇಷ ಏನೆಂದರೆ ಫೋರ್ಡ್ ಇಂಡಿಯಾದ ಜಾಹೀರಾತು ಹಾಗೂ ಮಾರ್ಕೆಟಿಂಗ್ ಪಾಟ್ನರ್ ಆಗಿರುವ ಜೆಡಬ್ಲ್ಯುಟಿ ಇಂಡಿಯಾ ಇತ್ತೀಚೆಗಷ್ಟೇ ಅಶ್ಲೀಲ ಜಾಹೀರಾತುವೊಂದನ್ನು ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಫೋರ್ಡ್ ಫಿಗೊ ಬೂಟ್ ಸ್ಪೇಸ್ ತೋರಿಸಲು ಸೆಕ್ಸಿ ಬೆಬೋಗಳನ್ನು ಕೂಡಿಹಾಕಿದಂತಹ ಅಶ್ಲೀಲ ಚಿತ್ರಣವನ್ನು ತೋರಿಸಿರುವುದು ರಾದ್ಧಾಂತಕ್ಕೆ ಕಾರಣವಾಗಿದೆ. ಅಷ್ಟೇ ಯಾಕೆ 'ಲೀವ್ ಯುವರ್ ವರೀಸ್ ಬಿಹೈಂಡ್' ಎಂಬ ಟ್ಯಾಗ್ ಇನ್ನಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಒಟ್ಟಿನಲ್ಲಿ ಡಿಕ್ಕಿ ತೋರಿಸಲು ಹೋಗಿ ಕಾರೇ ಪಲ್ಟಿ ಹೊಡೆದಂತಹ ಅವಮಾನಕರ ಪರಿಸ್ಥಿತಿ ಫೋರ್ಡ್‌ಗೆ ಎದುರಾದರೂ ಕೂಡಲೇ ಇಂತಹದೊಂದು ಹೀನಾಯ ಜಾಹೀರಾತಿಗೆ ಕ್ಷಮೆಯಾಚಿಸಿಕೊಂಡಿದೆ.

ಈ ಪ್ರಿಂಟ್ ಜಾಹೀರಾತಿನಲ್ಲಿ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲೂಸ್ಕೊನಿ ವಿಜಯದ ಸಂಕೇತ ನೀಡುತ್ತಿದ್ದು, ಕಾರಿನ ಢಿಕ್ಕಿಯಲ್ಲಿ ಮೂವರು ಬೆಬೋಗಳನ್ನು ಕೂಡಿ ಹಾಕಲಾಗಿದೆ.

ಮತ್ತೊಂದು ಚಿತ್ರದಲ್ಲಿ ಪ್ಯಾರಿಸ್ ಹಿಲ್ಟನ್ ಒಂದು ಕಣ್ಣು ಮುಚ್ಚಿಕೊಂಡು ಸನ್ನೆ ಮಾಡುತ್ತಿದ್ದು, ಬೂಟ್ ಸ್ಪೇಸ್‌ನಲ್ಲಿ ಕರ್ದಿಶಿಯಾನ್ ಸೋದರಿರನ್ನು ಕಟ್ಟಿ ಹಾಕಲಾಗಿದೆ.

ಇನ್ನು ಮೂರನೇ ಚಿತ್ರ ಸೆಕ್ಸಿ ಅಲ್ಲದಿದ್ದರೂ ಫಾರ್ಮುಲಾ ಒನ್ ದಿಗ್ಗಜ ಮೈಕಲ್ ಶೂಮೆಕರ್ ಕಾರು ಚಾಲಕನ ಸ್ಥಾನದಲ್ಲಿದ್ದು, ಹಿಂದುಗಡೆ ಸೆಬಾಸ್ಟಿಯನ್ ವೆಟಲ್, ಫೆರ್ನಾಂಡೊ ಅಲೊನ್ಸೊ ಹಾಗೂ ಲೆವಿಟ್ ಹ್ಯಾಮಿಲ್ಟನ್ ಅವರನ್ನು ಕೂಡಿ ಹಾಕಲಾಗಿದೆ.


Click it and Unblock the Notifications








