2014 ಫೋರ್ಡ್ ಎಂಡೋವರ್ ಲಾಂಚ್
ಮಗದೊಂದು ಬಿಡುಗಡೆ ಸುದ್ದಿ ಹೊರಬಂದಿದೆ. ಇದೀಗ ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್, ಭಾರತದಲ್ಲಿ ನೂತನ 2014 ಎಂಡೋವರ್ ಮಾದರಿಯನ್ನು ಬಿಡುಗಡೆಗೊಳಿಸಿದೆ.
ಇವನ್ನೂ ಓದಿ: ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ
ವಿಶ್ವದ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿರುವ ಎಂಡೋವರ್, ಪರಿಷ್ಕೃತ ವಿನ್ಯಾಸದೊಂದಿಗೆ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಪಡೆದುಕೊಳ್ಳಲಿದೆ. ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರುವ ಎಂಡೋವರ್ ಎಸ್‌ಯುವಿ, ಬೇಸ್ ವೆರಿಯಂಟ್ ಪ್ರಾರಂಭಿಕ ದರ 19.83 ಲಕ್ಷ ರು.ಗಳಾಗಿರಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಫೋರ್ಡ್ ಇಂಡಿಯಾ ಅಧ್ಯಕ್ಷ ನಿಗೆಲ್ ಹ್ಯಾರಿಸ್, ನಾವು ನಮ್ಮ ಉತ್ಪನ್ನಗಳಲ್ಲಿ ನಿರಂತರ ಸುಧಾರಣೆ ತರುವ ಮೂಲಕ ಗ್ರಾಹಕರನ್ನು ಸಂತೋಷಪಡಿಸುವುದರಲ್ಲಿ ಬದ್ಧರಾಗಿರುತ್ತೇವೆ ಎಂದಿದ್ದಾರೆ.

ಆರಾಮದಾಯಕ, ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಶಕ್ತಿಯುತ ಎಸ್‌ಯುವಿ ಬಯಸುವ ಗ್ರಾಹಕರಿಗೆ ಎಂಡೋವರ್ ಸೂಕ್ತವೆನಿಸಲಿದೆ. 2014 ಎಂಡೋವರ್ ಮೂಲಕ ಆಲ್ ಟರೈನ್ ವೆಹಿಕಲ್ ಡಿಎನ್‌ಎ ಕಾಯ್ದುಕೊಳ್ಳಲಾಗಿದೆ ಎಂದಿದ್ದಾರೆ.

ನೂತನ 2014 ಎಂಡೋವರ್‌ನಲ್ಲಿ ಹೊಸ ಹೆಡ್‌ಲೈಟ್, ಫಾಗ್ ಲ್ಯಾಂಪ್ ಬಿಜೆಲ್, ಫ್ರಂಟ್ ಗ್ರಿಲ್, ಬಂಪರ್ ಹಾಗೂ 16 ಇಂಚಿನ ಅಲಾಯ್ ವೀಲ್ ಪ್ರಮುಖವಾಗಿರಲಿದೆ.

ಇದೇ ಸಂದರ್ಭದಲ್ಲಿ ಪ್ರಯಾಣಿಕ ಸೈಡ್ ಮಿರರ್‌ನಲ್ಲಿ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಫೋರ್ಡ್ ಪ್ರದಾನ ಮಾಡುತ್ತಿದೆ. ಈ ಮೂಲಕ ಚಾಲಕರ ಗೋಚರತೆಯನ್ನು ಹೆಚ್ಚಿಸಿದೆ.

ಕಾರಿನ ಒಳಮೈ ಬಗ್ಗೆ ಮಾತನಾಡುವುದಾದ್ದಲ್ಲಿ ಹೊಸತಾದ ಲೆಥರ್ ಸೀಟು ಪಡೆದುಕೊಳ್ಳಲಿದೆ. ಹಾಗೆಯೇ ಹೈ ಎಂಡ್ ಟಚ್ ಮನರಂಜನಾ ಸಿಸ್ಟಂ ಜತೆಗೆ ನೇವಿಗೇಷನ್ ಸೌಲಭ್ಯವಿರುತ್ತದೆ.

ಇದರ ಹೊರತಾಗಿ ತಾಂತ್ರಿಕ ವೈಶಿಷ್ಟ್ಯಗಳು ಹಿಂದಿನ ಆವೃತ್ತಿಗೆ ಸಮಾನವಾಗಿರುತ್ತದೆ. ಅಂದರೆ 2014 ಫೋರ್ಡ್ ಎಂಡೋವರ್, 3.0 ಲೀಟರ್ ಡ್ಯೂರಟಾರ್ಕ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 156 ಪಿಎಸ್ ಪವರ್ (380 ಎನ್‌ಎಂ ಪೀಕ್ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ ಜತೆಗೆ 2.5 ಲೀಟರ್ ಎಂಜಿನ್ ಕೂಡಾ ಇರಲಿದೆ.

ವೆರಿಯಂಟ್, ದರ ಮಾಹಿತಿ
2.5 ಲೀಟರ್, 4x2 ಮ್ಯಾನುವಲ್ ಟ್ರಾನ್ಸ್‌ಮಿಷನ್ - 19.83 ಲಕ್ಷ ರು.
3.0 ಲೀಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ - 21.28 ಲಕ್ಷ ರು.
3.0 ಲೀಟರ್ 4x4 ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ - 23.06 ಲಕ್ಷ ರು.


Click it and Unblock the Notifications








