ಫೋರ್ಡ್ ಮಸ್ಟಾಂಗ್ ಅತ್ಯಂತ ಶಕ್ತಿಶಾಲಿ ಕಾರು ಭಾರತಕ್ಕೆ?

By Nagaraja

ವಾಹನ ಪ್ರಿಯರು ಸಂಭ್ರಮಪಡುವಂತಹ ಸುದ್ದಿ ಬಂದಿದ್ದು, ನಿಕಟ ಭವಿಷ್ಯದಲ್ಲೇ ಫೋರ್ಡ್ ಮಸ್ಟಾಂಗ್ ಅತ್ಯಂತ ಶಕ್ತಿಶಾಲಿ ಸ್ಪೋರ್ಟ್ ಕೂಪೆ ಕಾರು ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಅಮೆರಿಕದ ಐಕಾನಿಕ್ ಕಾರು ಆಗಿರುವ ಫೋರ್ಡ್ ಮಸ್ಟಾಂಗ್, ಎಡಬದಿಯ ಡ್ರೈವಿಂಗ್ ವ್ಯವಸ್ಥೆ ಹೊಂದಿದೆ. ಇದರಿಂದಾಗಿ ಭಾರತ ಸೇರಿದಂತೆ ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಲಾಂಚ್ ವಿಳಂಬವಾಗಿತ್ತು.

ಪ್ರಸ್ತುತ ನಿಕಟ ಭವಿಷ್ಯದಲ್ಲೇ ಆಸ್ಟ್ರೇಲಿಯಾ ಹಾಗೂ ಬ್ರಿಟನ್‌ನಲ್ಲಿ ಫೋರ್ಡ್ ಮಸ್ಟಾಂಗ್ ಕಾರನ್ನು ಪರಿಚಯಿಸುವ ಯೋಜನೆಯನ್ನು ಕಂಪನಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಭಾರತ ರಸ್ತೆಯನ್ನು ಪ್ರವೇಶಿಸಲಿದೆ.

ಸ್ಪೋರ್ಟ್ಸ್ ಕಾರು

ಸ್ಪೋರ್ಟ್ಸ್ ಕಾರು

ಸದ್ಯ ಮಸ್ಟಾಂಗ್ ಬಲಬದಿಯ ಡ್ರೈವಿಂಗ್ ಅಭಿವೃದ್ಧಿಯಲ್ಲಿ ಫೋರ್ಡ್ ತೊಡಗಿದೆ. 2+2 ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವ ಈ ಎರಡು ಡೋರಿನ ಕೂಪೆ ಕಾರು ಅತ್ಯಾಕರ್ಷಕ ವಿನ್ಯಾಸ ಪಡೆದುಕೊಂಡಿದೆ.

ಶಕ್ತಿಶಾಲಿ ಎಂಜಿನ್

ಶಕ್ತಿಶಾಲಿ ಎಂಜಿನ್

ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ಮಸ್ಟಾಂಗ್ ಲಭ್ಯವಿರುತ್ತದೆ. ಇದರಲ್ಲಿ 3.7 ಲೀಟರ್ ವಿ6, 5.0 ಲೀಟರ್ ಮಸ್ಟಾಂಗ್ ಜಿಟಿ ಮತ್ತು 5.8 ಲೀಟರ್ ಸೂಪರ್ ಚಾರ್ಜ್ಡ್ ವಿ8 ಎಂಜಿನ್ ಆಳವಡಿಸಲಾಗಿದೆ.

ಕ್ಲಾಸ್ ಇಂಟಿರಿಯರ್

ಕ್ಲಾಸ್ ಇಂಟಿರಿಯರ್

ಮಸ್ಟಾಂಗ್ ಮೊದಲ ಬಾರಿಗೆ 1964ನೇ ಇಸವಿಯಲ್ಲಿ ಅಮೆರಿಕಕ್ಕೆ ಪರಿಚಯಿಸಲಾಗಿತ್ತು. ತದಾದ ಬಳಿಕ ಹಲವು ಬಾರಿ ಸ್ಪೆಷಲ್ ಎಡಿಷನ್ ಲಾಂಚ್ ಆಗಿದ್ದವು. ಇದೀಗ 50ನೇ ವರ್ಷಾಚರಣೆಯನ್ನು ಎದುರು ನೋಡುತ್ತಿರುವ ಮಸ್ಟಾಂಗ್ 2014ರ ನ್ಯೂಯಾರ್ಕ್ ಆಟೋ ಶೋದಲ್ಲಿ ಭರ್ಜರಿ ಪ್ರದರ್ಶನ ಕಾಣಲಿದೆ.

ಭಾರತಕ್ಕೆ ಲಗ್ಗೆಯಿಡುವ ಯೋಜನೆ

ಭಾರತಕ್ಕೆ ಲಗ್ಗೆಯಿಡುವ ಯೋಜನೆ

ಸದ್ಯ ಭಾರತೀಯ ಮಾರುಕಟ್ಟೆಗೆ ಮಸ್ಟಾಂಗ್ ಆಗಮನವಾಗಲಿದೆಯೇ ಎಂಬುದು ಖಚಿತಗೊಂಡಿಲ್ಲ. ಹಾಗೊಂದು ವೇಳೆ ಇದು ದೇಶಕ್ಕೆ ಪರಿಚಯವಾದ್ದಲ್ಲಿ ಅಮೆರಿಕದ ಈ ಕಾರು ತಯಾರಕ ಸಂಸ್ಥೆಯಿಂದ ದೇಶಕ್ಕೆ ಬಿಡುಗಡೆಯಾಗಲಿರುವ ಅತ್ಯಂತ ಶಕ್ತಿಶಾಲಿ ಕಾರು ಎನಿಸಿಕೊಳ್ಳಲಿದೆ.

ದುಬಾರಿ ಕಾರು

ದುಬಾರಿ ಕಾರು

ಎಲ್ಲವೂ ನಿಗದಿಯಂತೆ ನಡೆದ್ದಲ್ಲಿ ಫೋರ್ಡ್ ಮಸ್ಟಾಂಗ್ 2015ರಲ್ಲಿ ನಿರೀಕ್ಷಿಸಬಹುದಾಗಿದೆ. ಇನ್ನು ದರದ ಬಗ್ಗೆ ಮಾತನಾಡುವಾಗ ಸದ್ಯದ ರುಪಾಯಿ ಅಪಮೌಲ್ಯದ ಪರಿಸ್ಥಿತಿ ಇದೇ ರೀತಿ ಮುಂದುವರಿದ್ದಲ್ಲಿ 50 ಲಕ್ಷಕ್ಕೆ ಕಡಿಮೆ ದರದಲ್ಲಿ ಮಸ್ಟಾಂಗ್ ನಿರೀಕ್ಷಿಸುವುದು ತಪ್ಪಾದಿತು.

More from DriveSpark

Article Published On: Friday, September 6, 2013, 11:11 [IST]
English summary
The Mustang is an all American muscle car that is no less than a legend. The idea of bringing the Mustang to India has surfaced owing to the brand's 50th anniversary celebrations that begin next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+