ಜಿನೆವಾದಲ್ಲಿ ಅರಳಲಿರುವ ಬಣ್ಣ ಬಣ್ಣದ ಹೂಗಳು

By Nagaraja

ಸ್ವಿಜರ್ಲಂಡ್‌ನ ಐತಿಹಾಸಿಕ ನಗರವಾದ ಜಿನೆವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ವಾಹನ ಪ್ರದರ್ಶನ ಮೇಳವೇ 'ಇಂಟರ್ ನ್ಯಾಷನಲ್ ಜಿನೆವಾ ಮೋಟಾರು ಶೋ'. ಜಿನೆವಾ ಪಲೆಕ್ಸ್‌ಪೊ ಕನ್ವೆಷನಲ್ ಸೆಂಟರ್‌ನಲ್ಲಿ ಆಯೋಜನೆಯಾಗುತ್ತಿರುವ ಈ ಪ್ರಖ್ಯಾತ ಆಟೋ ಶೋದಲ್ಲಿ ತಮ್ಮ ತಮ್ಮ ಹೊಸ ಮಾದರಿಗಳನ್ನು ಪ್ರದರ್ಶಿಸಲು ವಿಶ್ವದ ಮುಂಚೂಣಿಯ ಸಂಸ್ಥೆಗಳು ತುದಿಗಾಲಲ್ಲಿ ನಿಂತಿದೆ.

1905ನೇ ಇಸವಿಯಲ್ಲಿ ಮೊದಲ ಬಾರಿಗೆ ಆಯೋಜನೆಯಾಗಿರುವ ಈ ಇತಿಹಾಸ ಪ್ರಸಿದ್ಧ ಜಿನೆವಾ ಮೋಟಾರು ಶೋವನ್ನು ಇಂಟರ್‌ನ್ಯಾಷಲ್ ಡೆಸ್ ಕಸ್ಟ್ರಕ್ಟರ್ಸ್ ಡೆ ಆಟೋಮೊಬೈಲ್ ಆಯೋಜಿಸುತ್ತಿದೆ.

2015 ಜಿನೆವಾ ಮೋಟಾರು ಶೋ

ಕಳೆದ ಬಾರಿಯಂತೆ ಈ ಬಾರಿಯು ಹಲವಾರು ಹೊಸ ಮಾದರಿಗಳು ಜಿನೆವಾ ಮೋಟಾರು ಶೋದಲ್ಲಿ ಅರಳಲಿದೆ. ಆರು ಲಕ್ಷಕ್ಕೂ ಹೆಚ್ಚು ವಾಹನ ಪ್ರೇಮಿಗಳನ್ನು ಆಕರ್ಷಿಸುತ್ತಿರುವ ಜಿನೆವಾ ಮೋಟಾರು ಶೋ ಈ ಬಾರಿ ಮಾರ್ಚ್ 3ರಿಂದ 15ರ ವರೆಗೆ ಆಯೋಜನೆಯಾಗಲಿದೆ.

ಹೋಂಡಾ ಸಿವಿಕ್ ಟೈಪ್ ಆರ್

ಹೋಂಡಾ ಸಿವಿಕ್ ಟೈಪ್ ಆರ್

ಜಪಾನ್‌ನ ವಾಹನ ದೈತ್ಯ ಸಂಸ್ಥೆಯಾಗಿರುವ ಹೋಂಡಾ ಈ ಸಲ ಹೊಸತನದೊಂದಿಗೆ ಜಿನೆವಾ ಮೋಟಾರು ಶೋ ಬರಮಾಡಿಕೊಳ್ಳುತ್ತಿದ್ದು, ಬಹುನಿರೀಕ್ಷಿತ ಸಿವಿಕ್ ಟೈಪ್ ಆರ್ ಮಾದರಿಯನ್ನು ಪ್ರದರ್ಶಿಸುತ್ತಿದೆ. ಇದರ 2.0 ಲೀಟರ್ ವಿಟೆಕ್ ಎಂಜಿನ್ 276 ಅಶ್ವಶಕ್ತಿ ಉತ್ಪಾದಿಸಲಿದ್ದು, ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ.

ಹೋಂಡಾ ಎನ್‌ಎಸ್‌ಎಕ್ಸ್

ಹೋಂಡಾ ಎನ್‌ಎಸ್‌ಎಕ್ಸ್

ಹೋಂಡಾ ಬಹುನಿರೀಕ್ಷಿತ ಹೈಬ್ರಿಡ್ ಕಾರುಗಳಲ್ಲಿ ಒಂದಾಗಿರುವ ಎನ್‌ಎಸ್‌ಎಕ್ಸ್ ಯುರೋಪ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗುತ್ತಿದೆ. ಈ ಹಿಂದೆ ಉತ್ತರ ಅಮೆರಿಕದಲ್ಲಿ ನಡೆದ ಡೆಟ್ರಾಯ್ಟ್ ಆಟೋ ಶೋದಲ್ಲಿ ಪ್ರದರ್ಶನ ಕಂಡಿದ್ದ ಹೋಂಡಾ ಎನ್‌ಎಸ್‌ಎಕ್ಸ್ ಈಗ ಜಿನೆವಾದತ್ತ ದಾಪುಗಾಲನ್ನಿಡುತ್ತಿದೆ.

ಸ್ಕೋಡಾ ಸೂಪರ್ಬ್

ಸ್ಕೋಡಾ ಸೂಪರ್ಬ್

ಫೋಕ್ಸ್‌ವ್ಯಾಗನ್ ಎಂಕ್ಯೂಬಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಹೊಸ ಸ್ಕೋಡಾ ಸೂಪರ್ಬ್ ಜಿನೆವಾದಲ್ಲಿ ತೆರೆ ಕಾಣಲಿದೆ.

ವಾಕ್ಸ್‌ಹಾಲ್ ವೈವಾ

ವಾಕ್ಸ್‌ಹಾಲ್ ವೈವಾ

ನೂತನ ವಾಕ್ಸ್‌ಹಾಲ್ ವೈವಾ ಸಹ ಜಿನೆವಾದಲ್ಲಿ ಎಂಟ್ರಿ ಕೊಡಲಿದೆ. ಇದು 1.0 ಲೀಟರ್ ಎಂಜಿನ್ ಪಡೆದುಕೊಳ್ಳಲಿದ್ದು, 74 ಅಶ್ವಶಕ್ತಿ ಉತ್ಪಾದಿಸಲಿದೆ.

ಸ್ಯಾಂಗ್ಯೊಂಗ್ ಟಿವೊಲಿ

ಸ್ಯಾಂಗ್ಯೊಂಗ್ ಟಿವೊಲಿ

ದಕ್ಷಿಣ ಕೊರಿಯೊದ ಎಸ್‌ಯುವಿ ದೈತ್ಯ ಸ್ಯಾಂಗ್ಯೊಂದ್ ಪ್ರಖ್ಯಾತ ಜಿನೆವಾ ಮೋಟಾರು ಶೋದಲ್ಲಿ ನೂತನ ಟಿವೊಲಿ ಮಾದರಿಯನ್ನು ಪ್ರದರ್ಶನಕ್ಕಿಡಲಿದೆ. ಇತ್ತೀಚೆಗಷ್ಟೇ ಟಿವೊಲಿ ತವರೂರಿನಲ್ಲಿ ಬಿಡುಗಡೆಗೊಂಡಿತ್ತು.

ಮರ್ಸಿಡಿಸ್ ಬೆಂಝ್ ಸಿಎಲ್‌ಇ ಶೂಟಿಂಗ್ ಬ್ರೇಕ್

ಮರ್ಸಿಡಿಸ್ ಬೆಂಝ್ ಸಿಎಲ್‌ಇ ಶೂಟಿಂಗ್ ಬ್ರೇಕ್

ಸ್ವಿಜರ್ಲೆಂಡ್ ನಗರಕ್ಕೆ ಗ್ರಾಂಡ್ ಎಂಟ್ರಿ ಕೊಡಲಿರುವ ಮರ್ಸಿಡಿಸ್ ಬೆಂಝ್ ಸಿಎಲ್‌ಇ ಕ್ಲಾಸ್ ತದಾ ಬಳಿಕ ಮಾರಾಟ ಆರಂಭಿಸಲಿದೆ.

ರೆನೊ ಕಡ್ಜಾರ್

ರೆನೊ ಕಡ್ಜಾರ್

ವರ್ಷಾಂತ್ಯದಲ್ಲಿ ಮಾರಾಟ ಆರಂಭದ ನಿರೀಕ್ಷೆಯಲ್ಲಿರುವ ಹೊಸ ರೆನೊ ಕಡ್ಜಾರ್ ಮಾದರಿಯು ಜಿನೆವಾದಲ್ಲಿ ಪ್ರದರ್ಶನ ಕಾಣಲಿದೆ. ಪ್ರಸ್ತುತ ಕಾರು ಫೆಬ್ರವರಿ 2ರಂದು ಅನಾವರಣಗೊಳ್ಳಲಿದೆ.

ಮೆಕ್‌ಲ್ಯಾರೆನ್ 675ಎಲ್‌ಟಿ

ಮೆಕ್‌ಲ್ಯಾರೆನ್ 675ಎಲ್‌ಟಿ

ಮೆಕ್‌ಲ್ಯಾರೆನ್ ಕೂಪೆ ಕಾರಿನ ಬಗ್ಗೆ ಸಾಕಷ್ಟು ಭರವಸೆಯಿದೆ. ಇದು 1997 ಎಫ್1 ಜಿಟಿಆರ್ ಲಾಂಗ್ಟೈಲ್ ರೇಸರ್ ಗೌರವಾರ್ಥ ನಿರ್ಮಾಣವಾಗಲಿದೆ. ಇದು ಬರೋಬ್ಬರಿ 666 ಅಶ್ವಶಕ್ತಿ ಉತ್ಪಾದಿಸಲಿದೆ.

ಮಿಟ್ಸುಬಿಸಿ ಎಸ್‌ಯುವಿ ಕಾನ್ಸೆಪ್ಟ್

ಮಿಟ್ಸುಬಿಸಿ ಎಸ್‌ಯುವಿ ಕಾನ್ಸೆಪ್ಟ್

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಮಿಟ್ಸುಬಿಸಿ ಹೈಬ್ರಿಡ್ ಎಸ್‌ಯುವಿ ಕಾನೆಪ್ಟ್ ವರ್ಷನ್ ಸಹ ಜಿನೆವಾದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.

More from DriveSpark

Article Published On: Friday, January 30, 2015, 15:05 [IST]
English summary
Come March 3rd and every automobile maker's calendar will be blocked for the 2015 Geneva Motor Show to showcase their shiniest and newest models to the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+