ಸದ್ದಿಲ್ಲದೆ ಷೆವರ್ಲೆ ಕ್ಯಾಪ್ಟಿವಾ ಪ್ರೀಮಿಯಂ ಎಸ್‌ಯುವಿ ಲಾಂಚ್

By Nagaraja

ಜನಪ್ರಿಯ ತವೆರಾ ಆವೃತ್ತಿಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಬಳಿಕ ತೀವ್ರ ಮುಜುಗರಕ್ಕೊಳಗಾಗಿರುವ ಅಮೆರಿಕ ಮೂಲದ ಜನರಲ್ ಮೋಟಾರ್ಸ್, ಯಾವುದೇ ಸದ್ದು ಸಡಗರವಿಲ್ಲದೆ ನೂತನ ಷೆವರ್ಲೆ ಕ್ಯಾಪ್ಟಿವಾ ಫೇಸ್‌ಲಿಫ್ಟ್ ಪ್ರೀಮಿಯಂ ಎಸ್‌ಯುವಿ ಕಾರನ್ನು ಲಾಂಚ್ ಮಾಡಿದೆ. ಈ ಹಿಂದೆ ಷೆವರ್ಲೆ ತವೆರಾ ಆವೃತ್ತಿಯಲ್ಲಿ ತೊಂದರೆಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಒಂದು ಲಕ್ಷದಷ್ಟು ಆವೃತ್ತಿಗಳನ್ನು ರಿ ಕಾಲ್ ಮಾಡುವಲ್ಲಿ ಷೆವರ್ಲೆ ಪ್ರೇರಿತವಾಗಿತ್ತು.

2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ನೂತನ ಷೆವರ್ಲೆ ಕ್ಯಾಪ್ಟಿವಾ ಎಕ್ಸ್ ಶೋ ರೂಂ ದರ 23.49 ಲಕ್ಷ ರು.ಗಳಿಂದ (ಮ್ಯಾನುವಲ್) 26.49 ಲಕ್ಷ ರು.ಗಳ (ಆಟೋಮ್ಯಾಟಿಕ್) ವರೆಗಿದೆ.

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

ಹಿಂದಿನ ಆವೃತ್ತಿಯನ್ನು ಹೋಲಿಸಿದರೆ ಹೊಸ ಕಾರಿನ ಎಕ್ಸ್‌ಟೀರಿಯರ್ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ತರಲಾಗಿದೆ. ಇದರ ಫಾಗ್ ಹಾಗೂ ಎಲ್‌ಇಡಿ ಲೈಟ್‌ಗಳು ಹೆಚ್ಚು ಆಕರ್ಷಕವಾಗಿದೆ.

ಇಂಟಿರಿಯರ್

ಇಂಟಿರಿಯರ್

ಇನ್ನು ಕಾರಿನ ಒಳಗೂ ಪ್ರೀಮಿಯಂ ಲುಕ್ ನೀಡಲಾಗಿದೆ. ಇದು ಪ್ರಯಾಣಿಕರಿಗೆ ಲಗ್ಷುರಿ ಪ್ರಯಾಣದ ಅನುಭವ ನೀಡುತ್ತದೆ. ಕಂಪ್ಲೀಟ್ ಬಿಲ್ಡ್ ಯುನಿಟ್ (ಸಿಬಿಯು) ಮುಖಾಂತರ ಇದು ದೇಶವನ್ನು ಪ್ರವೇಶಿಸಲಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ರೈನ್ ಸೆನ್ಸಿಂಗ್ ವೈಪರ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಎಂಟು ಸ್ಪೀಕರ್ ಆಡಿಯೋ ಸಿಸ್ಟಂ, ಆಟೋಮ್ಯಾಟಿಕ್ ಲೆವೆಲ್ ರೈಡ್ ಸಸ್ಫೆಷನ್‌ಗಳಂತಹ ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.

ಮೈಲೇಜ್

ಮೈಲೇಜ್

ಇನ್ನು ಷೆವರ್ಲೆ ಕ್ಯಾಪ್ಟಿವಾ ಪ್ರತಿ ಲೀಟರ್‌ಗೆ 14.6 ಲೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಸೇಫ್ಟಿ ಫೀಚರ್ಸ್

ಸೇಫ್ಟಿ ಫೀಚರ್ಸ್

ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಮುಂದಿನ ಚಾಲಕ ಹಾಗೂ ಪ್ರಮಾಣಿಕರಿಗೆ ಏರ್ ಬ್ಯಾಗ್ ಸೌಲಭ್ಯ, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್, ಡಿಸೆಂಟ್ ಕಂಟ್ರೋಲ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಹಾಗೂ ಇತರ ಸುರಕ್ಷಾ ಫೀಚರ್‌ಗಳನ್ನು ಆಳವಡಿಸಲಾಗಿದೆ.

ದರ

ದರ

ಒಟ್ಟಾರೆಯಾಗಿ ವೈಶಿಷ್ಟ್ಯಗಳ ದೃಷ್ಟಿಕೋನದಲ್ಲಿ ಇಂದೊಂದು ಹೊಸ ಕಾರಲ್ಲ, ಇದರ ಎಲ್ 6 ಸ್ಪೀಡ್ ಮ್ಯಾನುವಲ್ ವರ್ಷನ್ ದೆಹಲಿ ಎಕ್ಸ್ ಶೋ ರೂಂ ದರ 23.49 ಲಕ್ಷ ರು.ಗಳಾಗಿವೆ. ಹಾಗೆಯೇ ಟಾಪ್ ಎಂಡ್ ಎಲ್‌ಟಿಝಡ್ 6 ಸ್ಪೀಡ್ ಆಟೋಮ್ಯಾಟಿಕ್ ಜತೆಗೆ ಆಲ್ ವೀಲ್ ಡ್ರೈವ್ ಇದಕ್ಕಿಂತಲೂ ದುಬಾರಿಯಾಗಿರಲಿದೆ.

Article Published On: Friday, August 16, 2013, 10:58 [IST]
English summary
Amidst all the troubles GM India is presently facing it has managed to introduce the Chevrolet Captiva facelift in India, but it decided to do so with zero fanfare.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+