ಹೋಂಡಾ ಅಮೇಜ್ ಯಶಸ್ಸಿನ ಹಿಂದಿರುವ ಗುಟ್ಟೇನು?

ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಹೋಂಡಾ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು, ಬಿಡುಗಡೆಯಾದ ನಾಲ್ಕು ತಿಂಗಳೊಳಗೆ 30,000ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಪ್ರಕಾರ ಈ ವರೆಗೆ 30,000 ಹೋಂಡಾ ಅಮೇಜ್ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದ್ದು, ಬೇಡಿಕೆ ಇನ್ನು ಹೆಚ್ಚುತ್ತಲೇ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೂಲಕ ಕಂಪನಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಕೆಲವೇ ತಿಂಗಳುಗಳಲ್ಲಿ ಇಷ್ಟೊಂದು ಪ್ರಯಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಹೆಗ್ಗಳಿಕೆಗೆ ಅಮೇಜ್ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನಿಂದ ಜುಲೈ ಅವಧಿಯಲ್ಲಿ ಒಟ್ಟಾರೆಯಾಗಿ ಶೇಕಡಾ 65ರಷ್ಟು ವೃದ್ಧಿ ದರ ದಾಖಲಿಸಿದೆ.

ಭಾರತೀಯ ಗ್ರಾಹಕರು ಬಯಿಸಿದ ಸೌಲಭ್ಯಗಳನ್ನು ಅಮೇಜ್ ಮುಖಾಂತರ ಒದಗಿಸಲು ಸಾಧ್ಯವಾಗಿರುವುದೇ ಹೋಂಡಾ ಯಶಸ್ಸಿಗೆ ಕಾರಣವಾಗಿದೆ. ಸ್ಮರ್ಧಾತ್ಮಕ ದರ, ಆರಾಮದಾಯಕ ಪಯಣದ ಜತೆ ಗರಿಷ್ಠ ಇಂಧನ ಕ್ಷಮತೆಯನ್ನು ಅಮೇಜ್ ಒದಗಿಸುತ್ತಿದೆ. ಎಆರ್‌ಎಐ ಮಾನ್ಯತೆ ಪ್ರಕಾರ 1.5 Li-DTEC ಡೀಸೆಲ್ ಎಂಜಿನ್ ಹೊಂದಿರುವ ಹೋಂಡಾ ಅಮೇಜ್ ಪ್ರತಿ ಲೀಟರ್‌ಗೆ 25.8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಅಷ್ಟಕ್ಕೂ ಹೋಂಡಾ ಅಮೇಜ್ ಸಾಧಿಸಿರುವ ಯಶಸ್ಸಿನ ಹಿಂದಿರುವ ಗುಟ್ಟೇನು ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ.

ಸ್ಮರ್ಧಾತ್ಮಕ ದರ

ಸ್ಮರ್ಧಾತ್ಮಕ ದರ

ದೇಶದ ಕಾರು ಮಾರುಕಟ್ಟೆಗೆ ಸ್ಮರ್ಧಾತ್ಮಕ ದರಗಳಲ್ಲಿ ಪರಿಚಯಿಸಿರುವುದೇ ಹೋಂಡಾ ಅಮೇಜ್ ಯಶಸ್ಸಿಗೆ ಮೊದಲ ಕಾರಣವಾಗಿದೆ. ಇದರ ಪ್ರಾರಂಭಿಕ ದರ 5.15 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್‌ಗೆ 7.83 ಲಕ್ಷ ರು.ಗಳಿವೆ.

ಪೆಟ್ರೋಲ್ ಮತ್ತು ಪೆಟ್ರೋಲ್ ವೆರಿಯಂಟ್ ಹಾಗೂ ದರ ಮಾಹಿತಿಗಾಗಿ ಮುಂದಿನ ಸ್ಲೈಡರ್ ಕ್ಲಿಕ್ಕಿಸಿರಿ...

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್ ವೆರಿಯಂಟ್:

  • EMT- 629,600 ಲಕ್ಷ ರು.
  • EXMT- 657,080 ಲಕ್ಷ ರು.
  • SMT- 689,940 ಲಕ್ಷ ರು.
  • VXMT- 783,140 ಲಕ್ಷ ರು.
  • ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

    ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

    ಪೆಟ್ರೋಲ್ ವೆರಿಯಂಟ್:

    • EMT- 515,100 ಲಕ್ಷ ರು.
    • EX MT- 543,600 ಲಕ್ಷ ರು.
    • SMT- 582,940 ಲಕ್ಷ ರು.
    • VXMT- 679,740 ಲಕ್ಷ ರು.
    • SAT- 683,590 ಲಕ್ಷ ರು.
    • VXAT- 775,390 ಲಕ್ಷ ರು.
    • ಮೈಲೇಜ್

      ಮೈಲೇಜ್

      ಹೋಂಡಾ ಅಮೇಜ್ ಡೀಸೆಲ್ ಸೇರಿದಂತೆ ಪೆಟ್ರೋಲ್ ಆವೃತ್ತಿಯು ಆಗಮನವಾಗಿದೆ. ಕಂಪನಿಯ ಪ್ರಕಾರ ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 25.8 ಕೀ.ಮೀ. ಹಾಗೂ ಪೆಟ್ರೋಲ್ ಎಂಜಿನ್ 18 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

      ಎಂಜಿನ್

      ಎಂಜಿನ್

      ಗರಿಷ್ಠ ನಿರ್ವಹಣೆಯ ಜತೆಗೆ ಉತ್ತಮ ಮೈಲೇಜ್ ನೀಡುತ್ತಿರುವ ಹೋಂಡಾ ಅಮೇಜ್ ಎಂಜಿನ್ ವೈಶಿಷ್ಟ್ಯವಾಗಿದೆ. ಇದರಲ್ಲಿ 1.5 ಲೀಟರ್ 4 ಸಿಲಿಂಡರ್ ಡಿಒಎಚ್‌ಸಿ ಐ-ಡಿಟೆಕ್ ಡೀಸೆಲ್ ಹಾಗೂ 1.2 ಲೀಟರ್ 4 ಸಿಲಿಂಡರ್ ಎಸ್‌ಒಎಚ್‌ಸಿ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ.

      ಸ್ಥಳಾವಕಾಶ

      ಸ್ಥಳಾವಕಾಶ

      ಈ 1.5 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಕಾರಿನಲ್ಲಿ ಹೆಚ್ಚಿನ ಲೆಗ್ ರೂಂ ಸಹಿತ ಹೆಡ್ ರೂಂ ಕೂಡಾ ಒದಗಿಸಲಾಗಿದೆ.

      ಬೂಟ್ ಸ್ಪೇಸ್

      ಬೂಟ್ ಸ್ಪೇಸ್

      ಬ್ರಿಯೊ ತಲಹದಿಯಲ್ಲಿ ನೂತನ ಅಮೇಜ್ ತಯಾರಿಸಲಾಗಿದೆ. ಆದರೆ ಬ್ರಿಯೊ ಅಂತ ಅಲಕ್ಷ್ಯ ಮಾಡಬೇಡಿರಿ. ಯಾಕೆಂದರೆ ಹೋಂಡಾ ಅಮೇಜ್ ಹೆಚ್ಚುವರಿ 400 ಲೀಟರ್ ಬೂಟ್ ಸ್ಪೇಸ್ ಪಡೆದಿದೆ.

      ಹೋಂಡಾ ಬ್ರಾಂಡ್ ಮೌಲ್ಯ

      ಹೋಂಡಾ ಬ್ರಾಂಡ್ ಮೌಲ್ಯ

      ಹೋಂಡಾ ಬ್ರಾಂಡ್ ಮೌಲ್ಯ ಕೂಡಾ ಗ್ರಾಹಕರನ್ನು ಆಕರ್ಷಿಸುವಲ್ಲಿ ಅಮೇಜ್‌ಗೆ ನೆರವಾಗಿದೆ. ಹೋಂಡಾ ಈಗಾಗಲೇ ಭಾರತದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ.

      ವೆರಿಯಂಟ್ ಆಪ್ಷನ್

      ವೆರಿಯಂಟ್ ಆಪ್ಷನ್

      ಇನ್ನು ತನ್ನ ಸೆಗ್ಮೆಂಟ್‌ನ ಇತರ ಕಾರುಗಳಿಗೆ ಹೋಲಿಸಿದರೆ ಹೋಂಡಾ ಅಮೇಜ್ ಹಲವು ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ. ಇದು ಗ್ರಾಹಕರಿಗೆ ಬಜೆಟ್ ಅನುಸಾರವಾಗಿ ವೆರಿಯಂಟ್ ಆಯ್ಕೆ ಮಾಡುವ ಅವಕಾಶವೊದಗಿಸುತ್ತಿದೆ.

      ಕಲರ್ ವೆರಿಯಂಟ್

      ಕಲರ್ ವೆರಿಯಂಟ್

      ಒಟ್ಟು ಆರು ಕಲರ್ ವೆರಿಯಂಟ್‌ಗಲ್ಲಿ ಹೋಂಡಾ ಅಮೇಜ್ ಲಭ್ಯವಿರುತ್ತದೆ. ಈ ಎಲ್ಲ ಮಾನದಂಡಗಳು ಹೋಂಡಾ ಅಮೇಜ್ ಅಮೇಜಿಂಗ್ ಎನಿಸಿಕೊಳ್ಳಲು ನೆರವು ಮಾಡಿದೆ.

More from DriveSpark

Article Published On: Thursday, August 29, 2013, 16:04 [IST]
English summary
Honda Cars India Ltd. (HCIL), leading manufacturer of premium cars in India, hasachieveda new sales milestone with the delivery of 30,000 Honda Amaze in the country. The latest family sedan from Honda in the Indian market, Honda Amaze, has clocked the fastest 30,000 sales for any new model in the company’s history in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+