ಹೋಂಡಾ ಅಮೇಜ್ ವಾರ್ಷಿಕ ಆವೃತ್ತಿ ಲಾಂಚ್
ಇದೀಗಷ್ಟೇ ದೇಶದ ಮೂರನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯೆಂಬ (ಮಾರಾಟದಲ್ಲಿ) ಪಟ್ಟ ಕಟ್ಟಿಕೊಂಡಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್, ಭಾರತಕ್ಕೆ ತನ್ನ ಜನಪ್ರಿಯ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರಿನ ವಾರ್ಷಿಕ ಮಾದರಿಯನ್ನು ಪರಿಚಯಿಸಿದೆ.
ಹೋಂಡಾ ಅಮೇಜ್ ಯಶಸ್ಸಿನ ಗುಟ್ಟೇನು?
ಹೋಂಡಾ ಅಮೇಜ್ ವಾರ್ಷಿಕ ವಿಶೇಷ ಆವೃತ್ತಿಯು ಸ್ಟಾಂಡರ್ಡ್ ವಿಎಕ್ಸ್ ಹಾಗೂ ಎಸ್ ವೆರಿಯಂಟ್‌ಗಿಂತಲೂ 71,861 ರು.ಗಳಷ್ಟು ದುಬಾರಿಯೆನಿಸಲಿದೆ. ಕಳೆದೊಂದು ವರ್ಷದಲ್ಲಿ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಅಮೇಜ್, ಹೋಂಡಾ ಪ್ರಗತಿಯಲ್ಲಿ ಬಹುದೊಡ್ಡ ಪಾತ್ರವಹಿಸಿತ್ತು.

ಪ್ರೀಮಿಯಂ ಸೌಲಭ್ಯಗಳು
- ಫ್ರಂಟ್ ಸ್ಪಾಯ್ಲರ್,
- ಟ್ರಂಕ್ ಆಂಡ್ ರಿಯರ್ ಸ್ಪಾಯ್ಲರ್,
- ಸೈಡ್ ಸ್ಪಾಯ್ಲರ್,
- ಎಕ್ಸಾಸ್ಟ್ ಪೈಪ್ ಫಿನಿಶರ್,
- ಡೋರ್ ವೈಸರ್ಸ್,
- ವುಡಿ ಪ್ಯಾನೆಲ್,
- ಎಲೆಗಂಟ್ ಸೀಟ್ ಕವರ್

ಇವೆಲ್ಲದರ ಜತೆಗೆ ವಾರ್ಷಿಕ ಎಡಿಷನ್ ಲೆಗೊವನ್ನು ನೂತನ ಅಮೇಜ್ ವಿಶೇಷ ಆವೃತ್ತಿಯು ಪಡೆದುಕೊಳ್ಳಲಿದೆ.

ಡೀಸೆಲ್ ಸೇರಿದಂತೆ ಪೆಟ್ರೋಲ್ ವೆರಿಯಂಟ್‌ಗಳಲ್ಲಿ ಅಮೇಜ್ ವಿಶೇಷ ಆವೃತ್ತಿಯು ದೊರಕಲಿದೆ. ಇದು ಸ್ಟಾಂಡರ್ಡ್ ವಿಎಕ್ಸ್ ಹಾಗೂ ಎಸ್ ವೆರಿಯಂಟ್‌ಗಿಂತಲೂ ರು. 71,861 ರು.ಗಳಷ್ಟು ದುಬಾರಿಯೆನಿಸಲಿದೆ. ಇದರ ಮುಂಬೈ ಎಕ್ಸ್ ಶೋ ದರ 7.08 ಲಕ್ಷ ರು.ಗಳಿಂದ 8.03 ಲಕ್ಷ ರು.ಗಳ ವರೆಗಿದೆ.

ನೂತನ ಹೋಂಡಾ ಅಮೇಜ್ 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಹಾಗೂ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಪ್ರತಿ ಲೀಟರ್‌ಗೆ 25.8 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿದೆ.

ಅಂದ ಹಾಗೆ ದೇಶದ್ಯಾಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿರುವ ಹೋಂಡಾ ಅಮೇಜ್ ಕಳೆದೊಂದು ವರ್ಷದ ಅವಧಿಯಲ್ಲಿ 80,000ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟಗೈದಿದೆ.


Click it and Unblock the Notifications








