ಹೋಂಡಾ ಅಮೇಜ್ ಬುಕ್ಕಿಂಗ್ ಭರಾಟೆ; 16ಕ್ಕೆ ಪಕ್ಕಾ ಲಾಂಚ್

ಬಹುನಿರೀಕ್ಷಿತ ಹೋಂಡಾ ಅಮೇಜ್ ಕಾಂಪಾಕ್ಟ್ ಸೆಡಾನ್ ಡೀಸೆಲ್ ಕಾರು ಇನ್ನಷ್ಟೇ ಲಾಂಚ್ ಆಗಲಿರುವಂತೆಯೇ ಈಗಾಗಲೇ 2,500ಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ದೇಶದ ಕಾರು
ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ನಿರೀಕ್ಷೆಗೆ ಕಾರಣವಾಗಿರುವ ಹೋಂಡಾ ಅಮೇಜ್ ಅತ್ಯುತ್ತಮ ಇಂಧನ ದಕ್ಷತೆ ಹೊಂದಿರುವ ಕಾರು ಎಂದೇ ಬಣ್ಣಿಸಲ್ಪಟ್ಟಿದೆ.

ಎಆರ್‌ಎಐನಿಂದ (ARAI) ಮಾನ್ಯತೆ ಪಡೆದಿರುವ ಹೋಂಡಾ ಅಮೇಜ್ ಐ-ಡಿಟೆಕ್ (i-DTEC) ಡೀಸೆಲ್ ಎಂಜಿನ್ ಕಾರು ಪ್ರತಿ ಲೀಟರ್‌ಗೆ 25.8 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಎಪ್ರಿಲ್ 16ಕ್ಕೆ ಲಾಂಚ್..?
ಈ ನಡುವೆ ಹೋಂಡಾ ಅಮೇಜ್ ಲಾಂಚ್ ದಿನಾಂಕ ಮುಂದೂಡಲಾಗಿದ್ದು, ಬಲ್ಲ ಮೂಲಗಳ ಪ್ರಕಾರ ಎಪ್ರಿಲ್ 16ರಂದು ದೇಶದ ರಸ್ತೆಯನ್ನು ಪ್ರವೇಶಸಲಿದೆ. ಈ ಹಿಂದೆ ಎಪ್ರಿಲ್ 11ಕ್ಕೆ ಆಗಮಿಸಲಿದೆ ಎಂಬ ಬಗ್ಗೆ ಮಾಹಿತಿಗಳಿದ್ದವು. ದೇಶದ ಬಹುತೇಕ ಹೋಂಡಾ ಡೀಲರ್‌ಗಳು ಅಮೇಜ್ ಡೀಸೆಲ್ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿರುವುದು ಇದರ ಬೇಡಿಕೆಗೆ ಕಾರಣವಾಗಿದೆ.

ಮಾರಾಟ ಕುಸಿತ...
ಏತನ್ಮಧ್ಯೆ ಮಾರ್ಚ್ ತಿಂಗಳಲ್ಲಿ ಹೋಂಡಾ ಮಾರಾಟವು ಶೇಕಡಾ 8ರಷ್ಟು ಕುಸಿತ ದಾಖಲಿಸಿದೆ. ಹಾಗಿದ್ದರೂ 2011-12 ಆರ್ಥಿಕ ಸಾಲಿಗೆ ಹೋಲಿಸಿ ನೋಡಿದಾಗ ಕಳೆದ ವರ್ಷ ಒಟ್ಟಾರೆಯಾಗಿ ಶೇಕಡಾ 35ರಷ್ಟು ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇವನ್ನೂ ಓದಿ: 2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

ಹೋಂಡಾ ಅಮೇಜ್ ಬುಕ್ಕಿಂಗ್ ಭರಾಟೆ

ಈ ಜಪಾನ್ ಕಾರು ತಯಾರಕ ಕಂಪನಿಯು ಹೋಂಡಾ ಸೆಡಾನ್ ಮೂಲಕ ಕುಸಿದಿರುವ ಮಾರುಕಟ್ಟೆಗೆ ಉತ್ತೇಜನ ನೀಡುವ ನಿರೀಕ್ಷೆಯಲ್ಲಿದೆ.

ಹೋಂಡಾ ಅಮೇಜ್ ಬುಕ್ಕಿಂಗ್ ಭರಾಟೆ

ಇದು ಜಪಾನ್ ಕಾರು ತಯಾರಕ ಕಂಪನಿಯಾದ ಹೋಂಡಾದಿಂದ ದೇಶದಲ್ಲಿ ಪರಿಚಯವಾಗುತ್ತಿರುವ ಮೊದಲ ಡೀಸೆಲ್ ಕಾರಾಗಿದೆ. ಇದರಂತೆ ದೇಶದ ಎಂಟ್ರಿ ಲೆವೆಲ್ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಹೋಂಡಾ ಅಮೇಜ್ ಬುಕ್ಕಿಂಗ್ ಭರಾಟೆ

ಬ್ರಿಯೊ ಸಣ್ಣ ಕಾರಿನ ತಲಹದಿಯಲ್ಲಿ ರೂಪುಗೊಂಡಿರುವ ಹೋಂಡಾ ಅಮೇಜ್, ಪರಿಷ್ಕೃತ ಫ್ರಂಟ್ ಗ್ರಿಲ್ ಹಾಗೂ ಫಾಗ್ ಲ್ಯಾಂಪ್ ಆಕರ್ಷಣೆಗೆ ಕಾರಣವಾಗಿದೆ.

ಹೋಂಡಾ ಅಮೇಜ್ ಬುಕ್ಕಿಂಗ್ ಭರಾಟೆ

ಇನ್ನು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್‌ಗೆ ಹೋಲಿಸಿದರೆ ಹೋಂಡಾ ಅಮೇಜ್ ಇಂಟಿರಿಯರ್‌ನಲ್ಲಿ ಹೆಚ್ಚು ಸ್ಥಳಾವಕಾಶ ಹೊಂದಿದೆ. ಪ್ರಸ್ತುತ ಕಾರು 1.5 ಡಿಸೆಲ್ ಹಾಗೂ 1.2 ಲೀಟರ್ ಪೆಟ್ರೋಲ್ ಆವೃತ್ತಿಗಳಲ್ಲಿ ಆಗಮನವಾಗಲಿದೆ.

ಹೋಂಡಾ ಅಮೇಜ್ ಬುಕ್ಕಿಂಗ್ ಭರಾಟೆ

ಹಾಗಿದ್ದರೂ ಇತ್ತೀಚೆಗಿನ 2013-14 ಕೇಂದ್ರ ಬಜೆಟ್‌ನಲ್ಲಿ 1500ಸಿಸಿಗಿಂತಲೂ ಮೇಲ್ಪಟ್ಟ ವಾಹನಗಳಿಗೆ ಹೆಚ್ಚಿನ ತೆರಿಗೆ ವಿಧಿಸಿರುವುದರಿಂದ ಹೋಂಡಾ ಅಮೇಜ್ ದರ ನಿರೀಕ್ಷೆ ಮಾಡಿರುವುದಕ್ಕಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ.

More from DriveSpark

Article Published On: Friday, April 5, 2013, 9:21 [IST]
English summary
As per Honda India's sales report for the 2012-13 financial year, the automaker received 2552 bookings for the Amaze compact sedan during the month of March. Honda is set to launch its new compact sedan on April 16.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+