ಹೋಂಡಾ ಜಾಝ್ 2015 ವರ್ಷಾರಂಭದಲ್ಲಿ ಲಾಂಚ್
ಕಳೆದ ಕೆಲವು ಸಮಯಗಳಿಂದ ದೇಶದ ವಾಹನೋದ್ಯಮದಲ್ಲಿ ತೀವ್ರ ಕುತೂಹಲ ಮನೆ ಮಾಡುವಲ್ಲಿ ಹೋಂಡಾ ಜಾಝ್ ಯಶಸ್ವಿಯಾಗಿರುವುದಂತೂ ನಿಜ. ತವರೂರಾದ ಜಪಾನ್‌ನಲ್ಲಿ ಲಭಿಸಿದ ಅದೇ ಯಶಸ್ಸು ಹೋಂಡಾ ಜಾಝ್‌ಗೆ ಭಾರತದಲ್ಲೂ ಲಭಿಸಲಿದೆಯೇ ಎಂಬುದು ಚರ್ಚೆಯ ವಿಷಯವಾಗಿದೆ.
ವಿಷಯ ಏನೇ ಇರಲಿ ಜಾಝ್ ಭಾರತ ಮಾರುಕಟ್ಟೆ ಪ್ರವೇಶಿಸಲು ಇನ್ನು ಸ್ವಲ್ಪ ಸಮಯ ಕಾಯಬೇಕಾಗಿದೆ. ಅಂದರೆ ಮುಂಬರುವ ಹೊಸ ವರ್ಷಾರಂಭದಲ್ಲಿ ಬಹುನಿರೀಕ್ಷಿತ ಹೋಂಡಾ ಜಾಝ್ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಸೆಗ್ಮೆಂಟ್ ಲೀಡರ್ ಎನಿಸಿಕೊಳ್ಳಲಿರುವ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಅತ್ಯುತ್ತಮ ವಿನ್ಯಾಸ ಕಾಪಾಡಿಕೊಂಡಿದೆ. ಈ ಮೂಲಕ ಹೋಂಡಾ ಅಮೇಜ್, ಸಿಟಿ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯನ್ನು ಸಂಸ್ಥೆ ಹೊಂದಿದೆ.

ಜಾಗತಿಕವಾಗಿ ಬಿಡುಗಡೆಯಾಗಿರುವ ಹೋಂಡಾ ಜಾಝ್ ಪೆಟ್ರೋಲ್ ಎಂಜಿನ್ ಮಾತ್ರ ಪಡೆದುಕೊಂಡಿದೆ. ಇದು 1.2 ಲೀಟರ್ ಹಾಗೂ 1.4 ಲೀಟರ್ ಐ-ವಿಟೆಕ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಇದಕ್ಕೂ ಮಿಗಿಲಾಗಿ ಅಂತರಾಷ್ಟ್ರೀಯವಾಗಿ ಹೈಬ್ರಿಡ್ ಎಂಜಿನ್ ಸಹ ನೀಡಲಾಗುತ್ತಿದೆ. ಆದರೆ ಭಾರತಕ್ಕಿದು ಪರಿಚಯವಾಗುವುದು ಬಹುತೇಕ ಅನುಮಾನವಾಗಿದೆ. ಇದರ ಬದಲು ಎರಡು ಪೆಟ್ರೋಲ್ ಜತೆ ಡೀಸೆಲ್ ಎಂಜಿನ್ ಇರುವ ಸಾಧ್ಯತೆಯಿದೆ.

2014ರಲ್ಲಿ ಅತ್ಯಂತ ವಿಸ್ವಾಸಾರ್ಹ ಕಾರೆಂಬ ಪ್ರಶಸ್ತಿಗೆ ಭಾಜನವಾಗಿರುವ ಹೋಂಡಾ ಜಾಝ್‌ಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ದೊರಕುವ ಸಾಧ್ಯತೆಯಿದೆ. ಹಾಗಿದ್ದರೂ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಬೆಲೆ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಹಿಂದಿನ ಮಾದರಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಜಾಝ್ ಉತ್ಪಾದನೆಯನ್ನು ಸ್ಥಳೀಯವಾಗಿಸಿರುವುದು ಇದಕ್ಕಿರುವ ಪ್ರಮುಖ ಕಾರಣವಾಗಲಿದೆ.


Click it and Unblock the Notifications








