ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ ಜನಪ್ರಿಯ ಜಾಝ್ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಜಾಝ್ ಪೆಟ್ರೋಲ್ ಕಾರುಗಳು ವಿ , ವಿಎಕ್ಸ್ ಎಂಬ ಎರಡು ವೇರಿಯಂಟ್‍‍ಗಳಲ್ಲಿ ಲಭ್ಯವಿದೆ.

By Rahul Ts

ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ ಜನಪ್ರಿಯ ಜಾಝ್ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಜಾಝ್ ಪೆಟ್ರೋಲ್ ಕಾರುಗಳು ವಿ , ವಿಎಕ್ಸ್ ಎಂಬ ಎರಡು ವೇರಿಯಂಟ್‍‍ಗಳಲ್ಲಿ ಲಭ್ಯವಿದ್ದು, ಇನ್ನು ಡೀಸೆಲ್ ಕಾರುಗಳು ಎಸ್, ವಿ, ವಿಎಕ್ಸ್ ಎಂಬ ಮೂರು ವೇರಿಯಂಟ್‍‍ನಲ್ಲಿ ಖರೀದಿಗೆ ಲಭ್ಯವಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಬಿಡುಗಡೆಗೊಂಡ ಹೊಸ ಜಾಝ್ ಫೇಸ್‍‍ಲಿಫ್ಟ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7.35 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪದೆದುಕೊಂದಿದ್ದು, ತನ್ನ ಹಳೆಯ ಮಾದರಿಯಂತೆಯೆ ವಿನ್ಯಾಸ ಹಾಗು ತಾಂತ್ರಿಕತೆಯನ್ನು ಪಡೆದುಕೊಂಡಿದೆ. ಆದರೆ ಹಿಂದಿನ ತಲೆಮಾರಿನ ಜಾಝ್ ಕಾರಿಗಿಂತ ಹೊಸ ವೈಶಿಷ್ಟ್ಯತೆಗಳನ್ನು ಮಾತ್ರ ಪಡೆದುಕೊಂಡಿರಲಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರಿನ ವೇರಿಯಂಟ್‍‍ಗಳು ಹಾಗು ಬೆಲೆಗಳು ಈ ಕೆಳಗಿನಂತಿವೆ..

ವೇರಿಯಂಟ್ಸ್ ಪೆಟ್ರೋಲ್ ಡೀಸೆಲ್
ಎಸ್ (ಮ್ಯಾನುವಲ್ ಗೇರ್‍‍ಬಾಕ್ಸ್) ಲಭ್ಯವಿಲ್ಲ ರೂ. 8.05 ಲಕ್ಷ
ವಿ(ಮ್ಯಾನುವಲ್ ಗೇರ್‍‍ಬಾಕ್ಸ್) ರೂ. 7.35 ಲಕ್ಷ ರೂ. 8.85 ಲಕ್ಷ
ವಿಎಕ್ಸ್(ಮ್ಯಾನುವಲ್ ಗೇರ್‍‍ಬಾಕ್ಸ್) ರೂ. 7.79 ಲಕ್ಷ ರೂ. 9.29 ಲಕ್ಷ
ವಿ (CVTಗೇರ್‍‍ಬಾಕ್ಸ್) ರೂ. 8.55 ಲಕ್ಷ ಲಭ್ಯವಿಲ್ಲ
ವಿಎಕ್ಸ್(CVT ಗೇರ್‍‍ಬಾಕ್ಸ್) ರೂ. 8.99 ಲಕ್ಷ ಲಭ್ಯವಿಲ್ಲ
ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಎಂಟ್ರಿ ಲೆವೆಲ್ ಜಾಝ್ 'ಎಸ್' ಟ್ರಿಮ್ ವೇರಿಯಂಟ್ ಕಾರು ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್‍‍ನೊಂದಿಗೆ ಇಬಿಡಿ, 4 ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ವಿದ್ಯುತ್‍‍ನಿಂದ ನಿಯಂತ್ರಿಸಬಹುದಾದ ಒಆರ್‍‍ವಿಎಮ್, ಎಲ್‍ಇಡಿ ಟೈಲ್‍‍ಲ್ಯಾಂಪ್ಸ್, ರಿಯರ್ ಡಿಫಾಗರ್, ಸೆಂಟ್ರಲ್ ಆರ್ಮ್ ರೆಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ಸ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಹೋಂಡಾ ಜಾಝ್ ಕಾರಿನ ಮಿಡ್ ಸ್ಪೆಕ್ 'ವಿ' ವೇರಿಯಂಟ್ ಕಾರುಗಳಲ್ಲಿ 15 ಇಂಚಿನ ಅಲಾಯ್ ಚಕ್ರಗಳು, 5 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲರ್, ಕೀಲೆಸ್ ಎಂಟ್ರಿ, ಫಾಗ್ ಲ್ಯಾಂಪ್ಸ್, ರಿಯರ್ ವೈಪರ್ ಮತ್ತು ಬೈಗ್ ಇಂಟೀರಿಯರ್ ಅನ್ನು ಪಡೆದಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಇನ್ನು ಕ್ರೂಸ್ ಕಂಟ್ರೋಲ್ ಆನ್ನು ಡೀಸೆಲ್ ಹಾಗು ಸಿವಿಟಿ 'ವಿ' ಟ್ರಿಮ್ ಕಾರುಗಳಲ್ಲಿ ಅಳವಡಿಸಲಾಗಿದ್ದು, ಪ್ಯಾಡಲ್ ಶಿಫ್ಟರ್‍‍ಗಳನ್ನು ಪೆಟ್ರೋಲ್ ಮಾದರಿಯ ಜಾಝ್ 'ವಿ' ವೇರಿಯಂಟ್ ಕಾರುಗಳಲ್ಲಿ ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಹೋಂಡಾ ಜಾಝ್ ಕಾರಿನ ಟಾಪ್ ಸ್ಪೆಕ್ ಮಾಡಲ್ ಆದ 'ವಿಎಕ್ಸ್' ವೇರಿಯಂಟ್ ಕಾರು ಆಂಡ್ರಾಯ್ಡ್ ಆಟೊ, ನ್ಯಾವಿಗೇಷನ್ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ವಿದ್ಯುತ್‍ನಿಂದ ಅಡ್ಜಸ್ಟ್ ಹಾಗು ಮಡಚಬಹುದಾದ ಒಆರ್‍‍ವಿಎಮ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍‍ಗಳು ಮತ್ತು ಲೆಧರ್‍‍ನಿಂದ ಸಜ್ಜುಗೊಳಿಸಲಾದ ಸ್ಟೀರಿಂಗ್ ವೀಲ್ ಹಾಗು ಗೇರ್ ಕ್ನಾಬ್ ಅನ್ನು ಪಡೆದಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಮಾದರಿಯಲ್ಲಿ ದೊರೆಯಲಿದೆ. ಪೆಟ್ರೋಲ್ ಮಾದರಿಯ ಜಾಝ್ ಕಾರು 1.2 ಲೀಟರ್ ಎಂಜಿನ್ ಸಹಾಯದಿಂದ 88ಬಿಹೆಚ್‍‍ಪಿ 110ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದೆ. ಹಾಗು ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಇನ್ನು ಡೀಸೆಲ್ ಮಾದರಿಯ ಜಾಝ್ ಫೇ‍ಸ್‍‍ಲಿಫ್ಟ್ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಯದಿಂದ 38ಬಿಹೆಚ್‍‍ಪಿ ಮತ್ತು 200ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರು..

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಹೋಂಡಾ ಸಂಸ್ಥೆಯು ಇಂದು ತಮ್ಮ ಜನಪ್ರಿಯ ಜಾಝ್ ಕಾರಿನ ಫೇ‍‍ಸ್‍‍ಲಿಫ್ಟ್ ಮಾದರಿಯನ್ನು ನವೀಕರಣಗೊಳಿಸಿ ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಮಾರುತಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on jazz new launches new car
English summary
2018 Honda Jazz Facelift Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X