ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್..

ಹೋಂಡಾ ಅಮೇಜ್ ಕಾರಿನ ಆಧೂರಿ ಬಿಡುಗಡೆಯ ನಂತರ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯು ಇದೀಗ ಹೋಂಡಾ ಜಾಝ್ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಇದೇ ತಿಂಗಳ 19ರಂದು ಬಿಡುಗಡೆಗೊಳಿಸಲಿದ್ದು, ಇದೀಗ ಕಾರುಗಳು ಡೀಲರ್‍‍ಗಳ ಯಾರ್ಡ್ ಅನ್ನು ತಲುಪಿದೆ.

By Rahul Ts

ಹೋಂಡಾ ಅಮೇಜ್ ಕಾರಿನ ಆಧೂರಿ ಬಿಡುಗಡೆಯ ನಂತರ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯು ಇದೀಗ ಹೋಂಡಾ ಜಾಝ್ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಇದೇ ತಿಂಗಳ 19ರಂದು ಬಿಡುಗಡೆಗೊಳಿಸಲಿದ್ದು, ಇದೀಗ ಕಾರುಗಳು ಡೀಲರ್‍‍ಗಳ ಯಾರ್ಡ್ ಅನ್ನು ತಲುಪಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಡೀಲರ್‍ ಯಾರ್ಡ್ ತಲುಪಿದ ಹೊಂಡಾ ಜಾಝ್ ಫೇಸ್‍‍ಲಿಫ್ಟ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದ್ದು, ಇಷ್ಟೆ ಅಲ್ಲದೆ ಬಿಡುಗಡೆಗು ಮುನ್ನವೆ ಹೊಸ ಜಾಝ್ ಫೇಸ್‍‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆಯು ಮಾಹಿತಿ ಬಹಿರಂಗಗೊಂಡಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು ಕಳೆದ ತಿಂಗಳು ಯುಕೆ ರಾಷ್ಟ್ರದಲ್ಲಿ ಬಿಡುಗಡೆಗೊಂಡಿದ್ದು, ಒಳಭಾಗದ ಹಾಗು ಒಳಭಾಗದ ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡಿದಿದೆ. ಮತ್ತು ಹೊಸದಾಗಿ 16 ಇಂಚಿನ ಅಲಾಯ್ ವ್ಹೀಲ್ಸ್ ಹಾಗು ಹೊಸ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಎಂಜಿನ್ ಆಯ್ಕೆಯನ್ನು ತನ್ನ ಹಿಂದಿನ ತಲೆಮಾರಿನ ಕಾರಿನಿಂದಲೇ ಪಡೆಯಲಿದ್ದು, 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಕಾರಿನ 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ 89 ಬಿಹೆಚ್‍‍ಪಿ ಮತ್ತು 110ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಹೋಂಡಾ ಜಾಝ್ ಕಾರು 6 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‍‍ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಸಿವಿಟಿ ಗೇರ್‍‍ಬಾಕ್ಸ್ ಅನ್ನು ಕಾರಿನ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಅಳವಡಿಸಲಾಗಿರುತ್ತದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಮಾಹಿತಿಗಳ ಪ್ರಕಾರ ಹೊಸ ಹೋಂಡಾ ಜಾಝ್ ಕಾರು ಎಸ್‍, ವಿ, ವಿಎಕ್ಸ್ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಪೆಟ್ರೋಲ್ ಎಂಜಿನ್ ಕಾರುಗಳು ವಿ ಮತ್ತು ವಿಎಕ್ಸ್ ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿರಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಕಾರಿನ ಬೇಸ್ ವೇರಿಯಂಟ್ ಆದ ಎಸ್ ಮಾದರಿಯು ಡೀಸೆಲ್ ಎಂಜಿನ್‍‍ನಲ್ಲಿ ಮಾತ್ರ ದೊರೆಯಲಿದ್ದು, 'ಎಸ್' ವೇರಿಯಂಟ್ ಕಾರಿನಲ್ಲಿ ಫ್ರಂಟ್ ಸೆಂಟರ್ ಆರ್ಮ್‍‍ರೆಸ್ಟ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ರಿಯರ್ ಪಾರ್ಕಿಂಗ್ ಸೆನ್ಸಾರ್‍ ಮತ್ತು ಡ್ರೈವರ್ ಅಸ್ಸಿಸ್ಟ್ ಸೈಡ್ ವ್ಯಾನಿಟ್ ಮಿರರ್ ಎಂಬ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಇದಲ್ಲದೆ 'ಎಸ್' ವೇರಿಯಂಟ್ ಕಾರಿನಲ್ಲಿ ದೇಹ ಬಣ್ಣದ ಒಆರ್‍‍‍ವಿಅಮ್ ಮತ್ತು ಡೋರ್ ಹ್ಯಾಂಡಲ್, ರಿಯರ್ ವಿಂಡ್‍‍ಶಿಲ್ಡ್ ಡೀಫಾಗರ್, ಎಲ್ಇಡಿ ಟೈಲ್ ಲ್ಯಾಂಪ್ಸ್, ಫ್ರಂಟ್ ಮತ್ತು ರಿಯರ್ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ, ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್‍‍ನೊಂದಿಗೆ ಇಬಿಡಿ ಮತ್ತು ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ ಅನ್ನು ಹೊಂದಿರಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಹೋಂಡಾ ಜಾಝ್ 'ವಿ' ವೇರಿಯಂಟ್ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಲಭ್ಯವಿರಲಿದ್ದು, ಈ ಕಾರಿನ ಪೆಟ್ರೋಲ್ ಮಾದರಿಯು ಸಿವಿಟಿ ಗೇರ್‍‍ಬಾಕ್ಸ್ ಅನ್ನು ಹೊಂದಿರಲಿದೆ.'ವಿ' ವೇರಿಯಂಟ್ ಕಾರುಗಳಲ್ಲಿ ಒನ್ ಟಚ್ ಪುಶ್/ಸ್ಟಾಪ್ ಬಟನ್, ಸ್ಮಾರ್ಟ್ ಟ್ರಾಂಕ್ ಲಾಕ್, ಕೀಲೆಸ್ ಟ್ರಂಕ್ ರಿಲೀಸ್, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಜಾಝ್ 'ವಿ' ವೇರಿಯಂಟ್ ಕಾರುಗಳಲ್ಲಿ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್‍‍ನೊಂದಿಗೆ ವಿದ್ಯುತ್‍ ಸಹಾಯದಿಂದ ಮಡಿಚಬಹುದಾದ ಒಆರ್‍‍ವಿಎಮ್, 5 ಇಂಚಿನ ಇನ್ಫೋಟೈನ್ಮೇಂಟ್ ಸೆಸ್ಟಮ್, ಮಲ್ತಿ ವ್ಯೂ ಕ್ಯಾಮೆರಾ, ಫ್ರಂಟ್ ಫಾಗ್ ಲ್ಯಾಂಪ್ಸ್, ರಿಯರ್ ವೈಪರ್ಸ್ ಮತ್ತು ಕಾರಿನ ಒಳಭಾಗವನ್ನು ಪ್ರೀಮಿಯಮ್ ಲೆಧರ್‍‍ನಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಹೋಂಡಾ ಜಾಝ್ ಕಾರಿನ ಟಾಪ್ ವೇರಿಯಂಟ್ ಆದ 'ವಿಎಕ್ಸ್' ಮಾದರಿಯು 6.9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕನೆಕ್ಟಿವಿಟಿಯನ್ನು ಹೊಂದಿರುವ ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿಯನ್ನು ಪಡೆಸುಕೊಂಡಿರಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಇದಲ್ಲದೆ ಈ ಜಾಝ್ 'ವಿಎಕ್ಸ್' ವೇರಿಯಂಟ್‍‍ನಲ್ಲಿ ವಾಯ್ಸ್ ಕಮಾಂಡ್, ಸ್ಟೀರಿಂಗ್ ಮೌಂಟೆಡ್ ವಾಯ್ಸ್ ಕಂಟ್ರೋಲ್ಸ್, ಸಿಗ್ನೇಚರ್ ರಿಯರ್ ಎಲ್ಇಡಿ ಎಕ್ಸ್ಟೆಂಡೆಡ್ ಟೈಲ್ ಲ್ಯಾಂಪ್ಸ್ ಮತ್ತು ಲೆಧರ್‍‍ನಿಂಡ ಸಜ್ಜುಗೊಳಿಸಲಾದ ಸ್ಟೀರಿಂಗ್ ವ್ಹೀಲ್ ಅನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಹೊಂಡಾ ಜಾಸ್ ಫೇಸ್‍ಲಿಫ್ಟ್ ಕಾರಿನ ಎಸ್, ವಿ, ವಿಎಕ್ಸ್ ವೇರಿಯಂಟ್ ಕಾರುಗಳು ರೇಡಿಯಂಟ್ ರೆಡ್, ಲುನಾರ್ ಸಿಲ್ವರ್, ಆರ್ಚರ್ಡ್ ವೈಟ್, ಗೋಲ್ಡನ್ ಬ್ರೌನ್ ಮತ್ತು ಮಾಡರ್ನ್ ಸ್ಟೀಲ್ ಎಂಬ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಜಾಝ್ ಕಾರಿನ ಬಗ್ಗೆ ಕಂಪ್ಲೀಟ್ ಡೀಟೆಲ್ಸ್...

ಹೊಸ ತಲೆಮಾರಿನ 2018ರ ಹೊಸ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರುಗಳು ಇದೇ ತಿಂಗಳು ಬಿಡುಗಡೆಗೊಳ್ಳಲಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಈ ಕಾರು ರೂ. 5.30 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆಯಲಿದೆ ಎಂದು ಊಹಿಸಲೈಗಿದ್ದು, ಒಮ್ಮೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದಲ್ಲಿ ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on honda jazz new car price
English summary
2018 Honda Jazz Facelift Variants In Detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X