ಬಿಡುಗಡೆಗೂ ಮುನ್ನವೇ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಹೋಂಡಾ ಸಂಸ್ಥೆಯು ತಮ್ಮ 2018ರ ಹೊಸ ಜಾಝ್ ಹ್ಯಾಚ್‍‍‍ಬ್ಯಾಕ್ ಕಾರನ್ನು ಇದೇ 19ರಂದು ಬಿಡುಗಡೆಗೊಳಿಸಲಿದ್ದು, ಇದೀಗ ಜಾಝ್ ಫೇಸ್‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆಯಾಗಿದೆ.

By Rahul Ts

ಹೋಂಡಾ ಸಂಸ್ಥೆಯು ತಮ್ಮ 2018ರ ಹೊಸ ಜಾಝ್ ಹ್ಯಾಚ್‍‍‍ಬ್ಯಾಕ್ ಕಾರನ್ನು ಇದೇ 19ರಂದು ಬಿಡುಗಡೆಗೊಳಿಸಲಿದ್ದು, ಇದೀಗ ಜಾಝ್ ಫೇಸ್‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆಯಾಗಿದೆ. ತನ್ನ ಹಳೆಯ ಮಾದರಿಗಿಂತ ವಿನ್ಯಾಸದಲ್ಲಿ ಅಷ್ಟೇನು ವಿಶೇಷ ನವೀಕರಣವನ್ನು ಪಡೆದಿಲ್ಲ ಎನ್ನಲಾಗಿದೆ.

ಬಿಡುಗಡೆಗು ಮುನ್ನವೆ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಈಗಾಗಲೇ ಡೀಲರ್ಸ್ ಯಾರ್ಡ್ ತಲುಪಿರುವ ಹೊಂಡಾ ಜಾಝ್ ಫೇಸ್‍‍ಲಿಫ್ಟ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದ್ದು, ಇಷ್ಟೇ ಅಲ್ಲದೆ ಬಿಡುಗಡೆಗೂ ಮುನ್ನವೆ ಹೊಸ ಜಾಝ್ ಫೇಸ್‍‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆಯು ಮಾಹಿತಿ ಬಹಿರಂಗಗೊಂಡಿದೆ.

ಬಿಡುಗಡೆಗು ಮುನ್ನವೆ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಬಿಡುಗಡೆಗೊಳ್ಳಲ್ಲಿರುವ ಹೊಸ ಜಾಝ್ ಫೇಸ್‍‍‍ಲಿಫ್ಟ್ ಕಾರಿನ ಚಿತ್ರಗಳನ್ನು ಗಮನಿಸಿದ್ದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರಿನ ಮಾದರಿಯ ಹಾಗೆ ಸ್ಪೋರ್ಟಿ ಲುಕ್ ಮತ್ತು ಹೊಸ ಬಂಪರ್ ಅನ್ನು ಪಡೆದಿದ್ದು, ಭಾರತದಲ್ಲಿ ಬಿಡುಗಡೆಗೊಳ್ಳುವ ಹೊಸ ಜಾಝ್ ಕಾರುಗಳು ಈ ಯಾವುದೇ ಹೊಸ ವೈಶಿಷ್ಟ್ಯತೆಗಳನ್ನು ಪಡೆದಿರುವುದಿಲ್ಲ.

ಬಿಡುಗಡೆಗು ಮುನ್ನವೆ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಬದಲಾಗಿ 2018ರ ಹೊಸ ಮಾದರಿಯ ವಿನ್ಯಾಸಗಳನ್ನು ಮಾತ್ರವೇ ಪರಿಚಯಿಸುತ್ತಿದ್ದು, ಫೇ‍ಸ್‍‍ಲಿಫ್ಟ್ ಮಾದರಿಯ ಕಾರನ್ನು ಹೋಂಡಾ ದೇಶಿಯ ಮಾರುಕಟ್ಟೆಗೆ ಬದಲಾಗಿ ಮುಂದುವರಿದ ರಾಷ್ಟ್ರಗಳಲ್ಲಿ ಮಾತ್ರ ಪರಿಚಯಿಸುತ್ತಿದೆ.

ಬಿಡುಗಡೆಗು ಮುನ್ನವೆ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಎಂಜಿನ್ ಆಯ್ಕೆಯನ್ನು ತನ್ನ ಹಿಂದಿನ ತಲೆಮಾರಿನ ಕಾರಿನಿಂದಲೇ ಪಡೆಯಲಿದ್ದು, 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಕಾರಿನ 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ 89 ಬಿಹೆಚ್‍‍ಪಿ ಮತ್ತು 110ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಗು ಮುನ್ನವೆ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಹೋಂಡಾ ಜಾಝ್ ಕಾರು 6 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‍‍ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಸಿವಿಟಿ ಗೇರ್‍‍ಬಾಕ್ಸ್ ಅನ್ನು ಕಾರಿನ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಅಳವಡಿಸಲಾಗಿರುತ್ತದೆ.

ಬಿಡುಗಡೆಗು ಮುನ್ನವೆ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಮಾಹಿತಿಗಳ ಪ್ರಕಾರ ಹೊಸ ಹೋಂಡಾ ಜಾಝ್ ಕಾರು ಎಸ್‍, ವಿ, ವಿಎಕ್ಸ್ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಪೆಟ್ರೋಲ್ ಎಂಜಿನ್ ಕಾರುಗಳು ವಿ ಮತ್ತು ವಿಎಕ್ಸ್ ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿರಲಿದೆ.

ಬಿಡುಗಡೆಗು ಮುನ್ನವೆ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಹೊಸ ತಲೆಮಾರಿನ 2018ರ ಹೊಸ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರುಗಳು ಇದೇ ತಿಂಗಳು ಬಿಡುಗಡೆಗೊಳ್ಳಲಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಈ ಕಾರು ರೂ. 5.30 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಹೊಸ ಕಾರು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದಲ್ಲಿ ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on honda jazz
English summary
2018 Honda Jazz Images Revealed Ahead Of Launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X