ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಮೊಬಿಲಿಯೊ ಶೋ

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೋಂಡಾ ಮೊಬಿಲಿಯೊ ಎಂಪಿವಿ ಬಿಡುಗಡೆಗೆ ಸರ್ವ ಸನ್ನದ್ಧವಾಗಿ ನಿಂತಿದೆ. ಇದರಂತೆ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಕ್ರಮದ ಅಂಗವಾಗಿ ದೇಶದ ಪ್ರಮುಖ ನಗರಗಳ ಶಾಪಿಂಗ್ ಮಾಲ್‌ಗಳಲ್ಲಿ ಮೊಬಿಲಿಯೊ ಪ್ರದರ್ಶನ ನಡೆಯಲಿದೆ.

ಇದರಂತೆ ಮುಂದಿನ ತಿಂಗಳಲ್ಲಿ ಬೆಂಗಳೂರಿನ ಪ್ರಮುಖ ಮಾಲ್‌ಗಳಿಗೂ ಮೊಬಿಲಿಯೊ ಪ್ರದರ್ಶನವಾಗಲಿದೆ. ಈ ನಡುವೆ ಹೋಂಡಾ ವೆಬ್‌ಸೈಟ್‌ನಲ್ಲಿ ಮೊಬಿಲಿಯೊ ಸಂಬಂಧ ಹೆಚ್ಚಿನ ಚಿತ್ರಗಳನ್ನು ಬಿಡುಗಡೆಗೊಳಿಸಿರುವುದು ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ. ಬೆಂಗಳೂರಿನ ಯಾವ ಯಾವ ಮಾಲ್‌ನಲ್ಲಿ ಪ್ರದರ್ಶನ ನಡೆಯಲಿದೆ? ಹೆಚ್ಚುವರಿ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಮೊಬಿಲಿಯೊ ಶೋ

ಪ್ರಮುಖವಾಗಿಯೂ ವಿಕೆಂಡ್‌ಗಳಲ್ಲಿ ಶಾಪಿಂಗ್ ಮಾಲ್‌ಗಳಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಭೇಟಿ ಕೊಡುತ್ತಾರೆ. ಇದರಂತೆ ಫ್ಯಾಮಿಲಿ ಗ್ರಾಹಕರನ್ನು ಹೋಂಡಾ ಗುರಿಯಾಗಿರಿಸಿಕೊಂಡಿದೆ. ಅಷ್ಟೇ ಅಲ್ಲದೆ ಗ್ರಾಹಕರಿಗೂ ತಮ್ಮ ನೆಚ್ಚಿನ ಕಾರನ್ನು ಹತ್ತಿರದಿಂದ ನೋಡುವ ಅವಕಾಶವೂ ಸಿಗಲಿದೆ.

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಮೊಬಿಲಿಯೊ ಶೋ

ನಿಮ್ಮ ಮಾಹಿತಿಗಾಗಿ, ಬಹುನಿರೀಕ್ಷಿತ ಹೋಂಡಾ ಮೊಬಿಲಿಯೊ ಮುಂಬರುವ ಜುಲೈ ತಿಂಗಳಲ್ಲಿ ಲಾಂಚ್ ಆಗಲಿದೆ. ಬ್ರಿಯೊ ತಲಹದಿಯಲ್ಲಿ ರೂಪುಗೊಂಡಿರುವ ಮೊಬಿಲಿಯೊ, ಹೋಂಡಾದಿಂದ ಬಿಡುಗಡೆಯಾಗುತ್ತಿರುವ ಮೂರನೇ ಡೀಸೆಲ್ ಮಾದರಿಯಾಗಿದೆ.

ಮೊಬಿಲಿಯೊ ಬೆಂಗಳೂರು ಪ್ರದರ್ಶನ

ಮೊಬಿಲಿಯೊ ಬೆಂಗಳೂರು ಪ್ರದರ್ಶನ

ಮಾಲ್ ಹೆಸರು: ಬ್ರಿಗೇಡ್ ಒರಿಯನ್ ಮಾಲ್, ಸ್ಥಳ: ಮಲ್ಲೇಶ್ವರಂ, ರಾಜಾಜಿನಗರ, ದಿನಾಂಕ: ಜುಲೈ 11ರಿಂದ 13ರ ತನಕ

ಮಾಲ್ ಹೆಸರು: ಮಂತ್ರಿ ಮಾಲ್, ಸ್ಥಳ: ಮಲ್ಲೇಶ್ವರಂ, ದಿನಾಂಕ: ಜುಲೈ 11ರಿಂದ 13ರ ತನಕ

ಮಾಲ್ ಹೆಸರು: ಗರುಡ ಮಾಲ್, ಸ್ಥಳ: ಮೆಗ್ರಾತ್ ರಸ್ತೆ, ದಿನಾಂಕ: ಜುಲೈ 18ರಿಂದ 20ರ ತನಕ

ಮಾಲ್ ಹೆಸರು: ಫೋನಿಕ್ಸ್ ಮಾರ್ಕೆಟ್‌ಸಿಟಿ, ಸ್ಥಳ: ವೈಟ್‌ಫೀಲ್ಡ್, ದಿನಾಂಕ: ಜುಲೈ 18ರಿಂದ 20ರ ತನಕ

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಮೊಬಿಲಿಯೊ ಶೋ

ಬೆಂಗಳೂರು ಸೇರಿದಂತೆ ದೆಹಲಿ, ಚಂಡೀಗಡ, ಮುಂಬೈ, ಅಹಮದಾಬಾದ್, ಜೈಪುರ, ಕೊಚ್ಚಿ, ಕೋಲ್ಕತ್ತಾ, ಸೂರತ್, ಹೈದರಾಬಾದ್, ಸಿಕಂದರಾಬಾದ್, ಲುಧಿಯಾನಾ, ಕೊಯಂಬತ್ತೂರು, ಪುಣೆ ಹಾಗೂ ಚೆನ್ನೈ ನಗರಗಳಲ್ಲೂ ಪ್ರದರ್ಶನ ಕಾಣಲಿದೆ.

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಮೊಬಿಲಿಯೊ ಶೋ

ಪ್ರಮುಖವಾಗಿಯೂ ಮಾರುತಿ ಎರ್ಟಿಗಾಗೆ ಪ್ರತಿಸ್ಪರ್ಧಿಯಾಗಲಿರುವ ಮೊಬಿಲಿಯೊ, ಎರ್ಟಿಗಾ ಹಾಗೂ ಇನ್ನೋವಾ ನಡುವೆ ಕಾಣಿಸಿಕೊಳ್ಳಲಿದೆ. ಇದು 1.5 ಲೀಟರ್ ಐ-ವಿಟೆಕ್ ಮೋಟಾರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 119 ಪಿಎಸ್ ಪವರ್ (145 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆದುಕೊಳ್ಳಲಿದೆ.

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಮೊಬಿಲಿಯೊ ಶೋ

ಅದೇ ಹೊತ್ತಿಗೆ ಡೀಸೆಲ್ ಮೊಬಿಲಿಯೊ, 1.5 ಲೀಟರ್ ಐ-ಡಿಟೆಕ್ ಎಂಜಿನ್ ಪಡೆದುಕೊಳ್ಳಲಿದೆ. ಸಂಸ್ಥೆಯ ಪ್ರಕಾರ ಮೊಬಿಲಿಯೊ, ಹೋಂಡಾದ ಗರಿಷ್ಠ ಇಂಧನ ಕ್ಷಮತೆಯ ಆವೃತ್ತಿಗಳಾದ ಅಮೇಜ್ ಹಾಗೂ ಸಿಟಿ ಮೈಲೇಜ್ ಕಾಯ್ದುಕೊಳ್ಳಲಿದೆ.

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಮೊಬಿಲಿಯೊ ಶೋ

ಇನ್ನು ಹೊರಂಗಣ ಸೇರಿದಂತೆ 360 ಡಿಗ್ರಿ ಸುತ್ತಳತೆಯಲ್ಲಿ ಬಿಂಬಿಸುವ ಹೋಂಡಾ ಮೊಬಿಲಿಯೊ ಇಂಟಿರಿಯರ್ ಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಫಾಗ್ ಲ್ಯಾಂಪ್, ದೇಹ ಬಣ್ಣದ ಬಂಪರ್, ನಡ್ಜ್ ಗಾರ್ಡ್ ಮತ್ತು ಔಟ್‌ಸೈಡ್ ರಿಯರ್ ವ್ಯೂ ಮಿರರ್, ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್ ಮತ್ತು ರಿಯರ್ ವ್ಯೂ ವೈಪರ್ ಸೌಲಭ್ಯವಿರಲಿದೆ.

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಮೊಬಿಲಿಯೊ ಶೋ

ಕಾರಿನ ಒಳಾಂಗಣದ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ಬ್ರಿಯೊ ಹಾಗೂ ಅಮೇಜ್‌ಗೆ ಸಾಮತ್ಯೆಯನ್ನು ಪಡೆದುಕೊಂಡಿದೆ. ಅಂತೆಯೇ ಟಾಪ್ ಎಂಡ್ ವೆರಿಯಂಟ್ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ ಪಡೆದುಕೊಳ್ಳಲಿದೆ.

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಮೊಬಿಲಿಯೊ ಶೋ

ಹೋಂಡಾ ಮೊಬಿಲಿಯೊ 2+2+2 ಮತ್ತು 2+3+2 ಆಸನ ವ್ಯವಸ್ಥೆಯನ್ನು ಪಡೆಯಲಿದೆ. ಅದೇ ರೀತಿ ಎರಡನೇ ಹಾಗೂ ಮೂರನೇ ಸಾಲಿನ ಸೀಟುಗಳನ್ನು ಮಡಚಬಹುದಾಗಿದ್ದು, ಈ ಮೂಲಕ ನಿಮ್ಮ ಅಗತ್ಯಗಳಿಗಾನುಸಾರವಾಗಿ ಹೆಚ್ಚು ಸ್ಥಳಾವಕಾಶ ಪಡೆದುಕೊಳ್ಳಬಹುದಾಗಿದೆ.

More from DriveSpark

Article Published On: Tuesday, June 17, 2014, 17:38 [IST]
English summary
Honda has updated its website for India with new images of the Mobilio MPV ahead of its scheduled launch in July. The website shows two images of the top spec diesel variant of the Mobilio and provides 360 degree view of the interior.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+