ಭಾರತದತ್ತ ಮುಖ ಮಾಡಿದ ಹೋಂಡಾ ವೆಜೆಲ್ ಎಸ್‌ಯುವಿ

Written By:

ಕೆಲವು ವಾರಗಳ ಹಿಂದೆಯಷ್ಟೇ ಟೊಕಿಯೊ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದ ಹೋಂಡಾ ವೆಜೆಲ್ ಕಾಂಪಾಕ್ಟ್ ಎಸ್‌ಯುವಿ/ಕ್ರಾಸೋವರ್, ಇದೀಗ ತವರೂರಾದ ಜರ್ಮನಿಯಲ್ಲಿ ಭರ್ಜರಿ ಲಾಂಚ್ ಕಂಡಿದೆ. ಪ್ರಸ್ತುತ ಕಾಂಪಾಕ್ಟ್ ಎಸ್‌ಯುವಿ ಮುಂದಿನ ಸಾಲಿನಲ್ಲಿ ಭಾರತ ಪ್ರವೇಶ ಪಡೆಯಲಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಸಿಆರ್-ವಿ ಕೆಳಗಡೆ ಗುರುತಿಸಿಕೊಳ್ಳಲಿರುವ ಪ್ರಸ್ತುತ ಕಾರು, ಸ್ಥಿರತೆ, ಆರಾಮದಾಯಕ, ಕೂಪೆ ಸ್ವರೂಪದ ವಿನ್ಯಾಸ ಮತ್ತು ಎಂಪಿವಿ ಇಂಟಿರಿಯರ್ ಸ್ಥಳಾವಕಾಶವನ್ನು ಪ್ರದಾನ ಮಾಡಲಿದೆ. ಇನ್ನು ವೆಜೆಲ್ ನಾಮಕರಣದ ಬಗ್ಗೆ ಮಾತನಡಾವುದಾದ್ದಲ್ಲಿ 'ವಿ' ಎಂಬುದು ವೆಹಿಕಲ್ ಎಂಬ ಪದದ ಸಂಕ್ಷಿಪ್ತ ರೂಪವಾಗಿದ್ದು ಜಾಝ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ. ಇದು ಆಫ್ ರೋಡ್‌ಗಿಂತಲೂ ಮಿಗಿಲಾಗಿ ಸಿಟಿ ಕ್ರಾಸೋವರ್ ಎಂದೆನಿಸಿಕೊಳ್ಳಲಿದೆ.

To Follow DriveSpark On Facebook, Click The Like Button
ಭಾರತದತ್ತ ಮುಖ ಮಾಡಿದ ಹೋಂಡಾ ವೆಜೆಲ್ ಎಸ್‌ಯುವಿ

ತವರೂರಾದ ಜಪಾನ್ ಮಾರುಕಟ್ಟೆಯಲ್ಲಿ ಎರಡು ಎಂಜಿನ್ ಆಯ್ಕೆಗಳಲ್ಲಿ ಹೋಂಡಾ ವೆಜೆಲ್ ಲಭ್ಯವಿರುತ್ತದೆ. ಅವುಗಳಲ್ಲಿ ಪೆಟ್ರೋಲ್ ಹಾಗೂ ಪೆಟ್ರೋಲ್ ಹೈಬ್ರಿಡ್ ಪ್ರಮುಖವಾಗಿದೆ. ಇದು 2 ಡಬ್ಲ್ಯುಡಿ ಹಾಗೂ 4 ಡಬ್ಲ್ಯುಡಿ ಸಿವಿಟಿ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಈ ಪೈಕಿ ಹೈಬ್ರಿಡ್ ವೆರಿಯಂಟ್ ಪ್ರತಿ ಲೀಟರ್‌ಗೆ 27 ಕೀ.ಮೀ. ಮೈಲೇಜ್ ನೀಡಲಿದೆ. ಹಾಗೆಯೇ 1.5 ಲೀಟರ್ ಪೆಟ್ರೋಲ್ ಪ್ರತಿ ಲೀಟರ್‌ಗೆ 20.6 ಕೀ.ಮೀ. ಮತ್ತು 2ಡಬ್ಲ್ಯುಡಿ ಮತ್ತು 4 ಡಬ್ಲ್ಯುಡಿ ವೆರಿಯಂಟ್‌ಗಳು ಪ್ರತಿ ಲೀಟರ್‌ಗೆ 19 ಕೀ.ಮೀ. ಮೈಲೇಜ್ ನೀಡಲಿದೆ.

ಭಾರತದತ್ತ ಮುಖ ಮಾಡಿದ ಹೋಂಡಾ ವೆಜೆಲ್ ಎಸ್‌ಯುವಿ

ಇನ್ನು ಹಿಂದುಗಡೆ ಕೂಪೆ ರೀತಿಯ ವಿನ್ಯಾಸ ಕಲ್ಪಿಸುವಲ್ಲಿಯೂ ಹೋಂಡಾ ವೆಜೆಲ್ ಯಶಸ್ವಿಯಾಗಿದೆ. ಇದು 2014ರ ಮಧ್ಯಂತರ ಅವಧಿಯಲ್ಲಿ ಭಾರತ ಮಾರುಕಟ್ಟೆ ತಲುಪುವ ಸಾಧ್ಯತೆಯಿದೆ.

ಭಾರತದತ್ತ ಮುಖ ಮಾಡಿದ ಹೋಂಡಾ ವೆಜೆಲ್ ಎಸ್‌ಯುವಿ

ಜಪಾನ್‌ನಲ್ಲಿ ಹೋಂಡಾ ವೆಜೆಲ್ 11.14 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಹಾಗೆಯೇ 2 ಡಬ್ಲ್ಯುಡಿ ಹಾಗೂ 4 ಡಬ್ಲ್ಯುಡಿ ವೆರಿಯಂಟ್‌ಗಳಿಗೆ ಅನುಕ್ರಮವಾಗಿ 12.39 ಹಾಗೂ 13.04 ಲಕ್ಷ ರು.ಗಳನ್ನು ಪಾವತಿಸಬೇಕಾಗಿದೆ. ಇನ್ನು ಟಾಪ್ ಹೈಬ್ರಿಡ್ ವೆರಿಯಂಟ್ 15.96 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

English summary
Honda Vezel, a compact SUV/crossover model that was revealed a few weeks back at the Tokyo Motor Show, has been launched in Japan. The compact SUV sits below the CR-V and is said to offer SUV like lower body stability, coupe like styling and MPV like interior space.
Story first published: Saturday, December 21, 2013, 15:52 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark