ಅಮೇಜ್‌ಗೆ ಸವಾಲೊಡ್ಡಲು ಅಗ್ಗದ ದರದಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಲಾಂಚ್
ದೇಶದ ನಂ.2 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ, ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ಲಾಂಚ್ ಮಾಡಿದೆ. ನೂತನ ಹ್ಯುಂಡೈ ಎಕ್ಸ್‌ಸೆಂಟ್ ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವ ಮೂಲಕ ದಕ್ಷಿಣ ಕೊರಿಯಾ ಮೂಲದ ಈ ವಾಹನ ತಯಾರಕ ಸಂಸ್ಥೆಯು ಎಲ್ಲರನ್ನು ಅಚ್ಚರಿಗೊಳಿಸಿದೆ.
ಪ್ರಾರಂಭಿಕ ದರ: 4.66 ಲಕ್ಷ ರು.
ಗ್ರಾಂಡ್ ಐ10 ತಲಹದಿಯಲ್ಲಿ ನಿರ್ಮಾಣಗೊಂಡಿರುವ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು, ಪ್ರಮುಖವಾಗಿ ಹೋಂಡಾ ಅಮೇಜ್ ಹಾಗೂ ಮಾರುತಿ ಸ್ವಿಫ್ಟ್ ಡಿಜೈರ್ ಕಾರುಗಳಿಗೆ ಪ್ರತಿಸ್ಪರ್ಧೆ ಒಡ್ಡಲಿದೆ.

ದರ ಮಾಹಿತಿ
ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಾಂಚ್ ಆಗಿರುವ ಹ್ಯುಂಡೈ ಎಕ್ಸೆಸೆಂಟ್ ಕಾರಿನ ದರ 4.66 ಲಕ್ಷ ರು.ಗಳಿಂದ 7.38 ಲಕ್ಷ ರು.ಗಳ ವರೆಗೆ ನಿಗದಿಯಾಗಿದೆ. (ಎಕ್ಸ್ ಶೋ ರೂಂ ದೆಹಲಿ). ಈ ಪೈಕಿ ಪೆಟ್ರೋಲ್ ವೆರಿಯಂಟ್ 4.66 ಲಕ್ಷ ರು.ಗಳಿಂದ ಆರಂಭವಾಗಿ 6.47 ಲಕ್ಷ ರು.ಗಳ ವರೆಗಿರಲಿದೆ. ಹಾಗೆಯೇ ಡೀಸೆಲ್ ವೆರಿಯಂಟ್ 5.56 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ 7.38 ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ.

ಎಂಜಿನ್
ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಲಭ್ಯವಿರಲಿದೆ. ಅವುಗಳೆಂದರೆ 1.1 ಲೀಟರ್ ಸೆಕೆಂಡ್ ಜನರೇಷನ್ ಯು2 ಯುಆರ್‌ಡಿಐ ಡೀಸೆಲ್ ಮತ್ತು 1.2 ಲೀಟರ್ ಕಪ್ಪ ಡೀಸೆಲ್ ವಿಟಿವಿಟಿ ಪೆಟ್ರೋಲ್. ಈ ಪೈಕಿ ಡೀಸೆಲ್ ಎಂಜಿನ್ 72 ಪಿಎಸ್ ಹಾಗೆಯೇ ಪೆಟ್ರೋಲ್ ಎಂಜಿನ್ 83 ಪಿಎಸ್ ಪವರ್ ಉತ್ಪಾದಿಸಲಿದೆ.

ಮೈಲೇಜ್
ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆ ನೀಡಿರುವ ಪ್ರಕಾರ ನೂತನ ಹ್ಯುಂಡೈ ಎಕ್ಸ್‌ಸೆಂಟ್ ಡೀಸೆಲ್ ವೆರಿಯಂಟ್ ಪ್ರತಿ ಲೀಟರ್‌ಗೆ 24.4 ಕೀ.ಮೀ. ಮೈಲೇಜ್ ನೀಡಲು ಸಕ್ಷಮವಾಗಿರಲಿದೆ. ಹಾಗೆಯೇ ಪೆಟ್ರೋಲ್ ವೆರಿಯಂಟ್ ಪ್ರತಿ ಲೀಟರ್‌ಗೆ 19.1 ಲೀಟರ್ ಮೈಲೇಜ್ ನೀಡಲಿದೆ.

ಟ್ರಾನ್ಸ್‌ಮಿಷನ್
ಹ್ಯುಂಡೈ ಎಕ್ಸ್‌ಸೆಂಟ್ ಡೀಸೆಲ್ ವೆರಿಯಂಟ್ 5 ಸ್ಪೀಡನ್ ಮ್ಯಾನುವಲ್ ಹಾಗೆಯೇ ಪೆಟ್ರೋಲ್ 5 ಸ್ಪೀಡ್ ಮ್ಯಾನುವಲ್ ಜತೆಗೆ 4 ಸ್ಪೀಡ್ ಆಟೋಮ್ಯಾಟಿಕ್ ಹೊಂದಿರಲಿದೆ.

ಗ್ರಾಂಡ್ ಐ10 ಸೆಡಾನ್ ಕಾರು
ಒಟ್ಟಿನಲ್ಲಿ ಗ್ರಾಂಡ್ ಐ10 ಸೆಡಾನ್ ಎಂದೇ ಬಿಂಬಿಸಲ್ಪಟ್ಟಿರುವ ಹ್ಯುಂಡೈ ಎಕ್ಸ್‌ಸೆಂಟ್, ಕಾಂಪಾಕ್ಟ್ ಸೆಡಾನ್ ವಿಭಾಗಕ್ಕೆ ಹ್ಯುಂಡೈನ ಮೊದಲ ಪ್ರವೇಶವಾಗಿರಲಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಭರ್ಜರಿ ಪ್ರದರ್ಶನ ಕಂಡಿತ್ತು.

ವಿಶಿಷ್ಟತೆಗಳು
ಕಿಲೇಸ್ ಫುಶ್ ಬಟನ್ ಸ್ಟಾರ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಆಂಡ್ ಸೆನ್ಸಾರ್, ಆಟೋ ಫೋಲ್ಡಿಂಗ್ ಮಿರರ್, ಎಲೆಕ್ಟ್ರೊ ಕ್ರೋಮ್ ರಿಯರ್ ವ್ಯೂ ಮಿರರ್, ಕ್ರೋಮ್ ಫಿನಿಶ್, ಡ್ಯುಯಲ್ ಟೋನ್ ಬಂಪರ್, ಡೈಮಾಂಡ್ ಕಟ್ ಅಲಾಯ್ ವೀಲ್‌ಗಳಂತಹ ಹಲವಾರು ವೈಶಿಷ್ಟ್ಯಗಳನ್ನು ನೂತನ ಹ್ಯುಂಡೈ ಎಕ್ಸ್‌ಸೆಂಟ್ ಹೊಂದಿರಲಿದೆ.

ವೆರಿಯಂಟ್
ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಆಗಮನವಾಗಲಿದೆ. ಅವುಗಳೆಂದರೆ ಎಂಟ್ರಿ, ಎಸ್ ಮತ್ತು ಎಸ್‌ಎಕ್ಸ್. ಈ ಪೈಕ್ ಎಸ್ ಮತ್ತು ಎಸ್‌ಎಕ್ಸ್ ಮಾದರಿಗೆ ಐಚ್ಛಿಕ ಪ್ಯಾಕೇಜ್ ಲಭ್ಯವಿರಲಿದೆ. ಇದು ಸಂಪೂರ್ಣವಾದ ಆಟೋಮ್ಯಾಟಿಕ್ ಎಸಿ, ರಿಯರ್ ಆರ್ಮ್ ರೆಸ್ಟ್, ಗ್ಲೋವ್ ಬಾಕ್ಸ್ ಕೂಲಿಂಗ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಡ್ಯುಯಲ್ ಏರ್ ಬ್ಯಾಕ್ ಮತ್ತು ರಿಯರ್ ಡಿಫಾಗರ್ ಸೌಲಭ್ಯಗಳನ್ನು ಹೊಂದಿರಲಿದೆ.

ಕಲರ್ ವೆರಿಯಂಟ್
ಒಟ್ಟು ಆರು ಕಲರ್ ವೆರಿಯಂಟ್‌ಗಳಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಆರು ಕಲರ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಒಟ್ಟಾರೆಯಾಗಿ ಎಸ್‌ಯುವಿ ಸೇರಿದಂತೆ ಮುಂದಿನ ಎರಡು ವರ್ಷಗಳಲ್ಲಿ ನಾಲ್ಕು ಹೊಸ ಮಾದರಿಗಳನ್ನು ಲಾಂಚ್ ಮಾಡುವ ಕಂಪನಿ ಯೋಜನೆಯ ಭಾಗವಾಗಿ ಹ್ಯುಂಡೈ ಎಕ್ಸ್‌ಸೆಂಟ್ ಇದೀಗ ಮಾರುಕಟ್ಟೆ ಪ್ರವೇಶಿಸಿದೆ.

ದರ ಮಾಹಿತಿ - ಎಕ್ಸ್ ಶೋ ರೂಂ (ಲಕ್ಷಗಳಲ್ಲಿ)
- ವೆರಿಯಂಟ್ - ಎಂಟ್ರಿ, ಪೆಟ್ರೋಲ್ - 4.66, ಡೀಸೆಲ್ - 5.56
- ವೆರಿಯಂಟ್ - ಎಸ್, ಪೆಟ್ರೋಲ್ - 5.32, ಡೀಸೆಲ್ - 6.23
ವೆರಿಯಂಟ್ - ಎಸ್ (ಒ), ಪೆಟ್ರೋಲ್ - 5.57, ಡೀಸೆಲ್ - 6.48
ವೆರಿಯಂಟ್ - ಎಸ್‌ಎಕ್ಸ್, ಪೆಟ್ರೋಲ್ - 6.22, ಡೀಸೆಲ್ - 7.13
ವೆರಿಯಂಟ್ - ಎಸ್‌ಎಕ್ಸ್(ಒ), ಪೆಟ್ರೋಲ್ - 6.47, ಡೀಸೆಲ್ - 7.33
ವೆರಿಯಂಟ್ - ಎಸ್(ಎಟಿ), ಪೆಟ್ರೋಲ್ - 6.28, ಡೀಸೆಲ್ -
ವೆರಿಯಂಟ್ - ಎಸ್‌ಎಕ್ಸ್ (ಎಟಿ), ಪೆಟ್ರೋಲ್ - 7.19, ಡೀಸೆಲ್ -
- ರಿಯರ್ ಎಸಿ ವೆಂಟ್ಸ್,
- ಟ್ಯೂಬ್‌ಲೆಸ್ ಚಕ್ರ,
- ಕೂಲ್ಡ್ ಗ್ಲೋಬ್ ಬಾಕ್ಸ್,
- ಸ್ಮಾರ್ಟ್ ಕಿ ಜತೆಗೆ ಫುಶ್ ಬಟನ್ ಸ್ಟಾರ್ಟ್,
- ರಿಯರ್ ಪಾರ್ಕಿಂಗ್ ಕ್ಯಾಮೆರಾ ಜತೆ ಸೆನ್ಸಾರ್,
- 15 ಇಂಚು ಡೈಮಂಡ್ ಕಟ್ ಅಲಾಯ್ ವೀಲ್,
- 2 ಡಿನ್ ಆಡಿಯೋ ಜತೆಗೆ ಯುಎಸ್‌ಬಿ ಸಿಡಿ ಪ್ಲೇಯರ್, 1 ಜಿಬಿ ಇಂಟರ್ನಲ್ ಮೆಮರಿ,
- ಆಟೋ ಫೋಲ್ಡಿಂಗ್ ಮಿರರ್,
- ಒನ್ ಟಚ್ ಎಲೆಕ್ಟ್ರಿಕ್ ಟ್ರಂಕ್ ಒಪನಿಂಗ್,
- ಎಬಿಎಸ್ ಆಪ್ಷನಲ್ ಎಸ್ ಮತ್ತು ಎಸ್‌ಎಕ್ಸ್
- ಫ್ರಂಟ್ ಪ್ಯಾಸೆಂಜರ್ ಏರ್ ಬ್ಯಾಗ್ ಸ್ಟಾಂಡರ್ಡ್



Click it and Unblock the Notifications








