ಗ್ರಾಹಕ ತೃಪ್ತಿ- ದೇಶದ ಅತ್ಯುತ್ತಮ ಕಾರು ಬ್ರಾಂಡ್ ಯಾವುದು?
ಪ್ರತಿಯೊಬ್ಬ ನೂತನ ಕಾರು ಖರೀದಿಗಾರರು ಗ್ರಾಹಕ ಸಂತುಷ್ಟಿ ವಿಚಾರದಲ್ಲಿ ಯಾವ ಬ್ರಾಂಡ್ ಅತ್ಯುತ್ತಮ ಎಂಬುದನ್ನು ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿರುತ್ತಾರೆ. ಇದು ಕಾರು ಖರೀದಿಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ.
ಗ್ರಾಹಕರ ಭಾವನೆಗಳನ್ನು ಅರಿತುಕೊಂಡು ಗರಿಷ್ಠ ಸೇವೆಗಳನ್ನು ಒದಗಿಸಲು ಕಾರು ತಯಾರಕ ಸಂಸ್ಥೆಗಳು ಬದ್ಧವಾಗಿರುತ್ತದೆ. ಇದರಂತೆ ಜೆಡಿ ಪವರ್ ಏಷಿಯಾ ಫೆಸಿಫಿಕ್ ನಡೆಸಿರುವ ಮಾರಾಟದ ತೃಪ್ತಿ ಸೂಚ್ಯಂಕ ಸಮೀಕ್ಷೆಯಲ್ಲಿ ಹೋಂಡಾ ಹಾಗೂ ದೇಶದ ನಂ. 1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅಗ್ರಸ್ಥಾನ ಹಂಚಿಕೊಂಡಿವೆ.
ಭಾರತ ಕಾರು ಮಾರಾಟ ಸಂತುಷ್ಠಿ ಸೂಚಕವನ್ನು ಅವಲಂಬಿಸಿ ಈ ಪಟ್ಟಿ ತಯಾರಿಸಲಾಗಿದೆ. ಇದರ ಜತೆಗೆ ನೂತನ ಕಾರು ಖರೀದಿ ಗ್ರಾಹಕರು ಕಾರು ತುಲನೆಗಾಗಿ ವೆಬ್‌ಸೈಟ್‌ಗಳನ್ನೇ ಹೆಚ್ಚು ನೆಚ್ಚಿಕೊಂಡಿರುತ್ತಾರೆ ಎಂಬುದು ಕಂಡುಬಂದಿದೆ. (ಡ್ರೈವ್ ಸ್ಪಾರ್ಕ್ ಕಾರು ಹೋಲಿಕೆ ಪೇಜ್). ಇದು ಕೇವಲ ಕಾರು ತುಲನೆಗೆ ಮಾತ್ರ ಸೀಮಿತವಾಗಿಲ್ಲ. ಯಾವುದು ಅತ್ಯುತ್ತಮ ಡೀಲರ್, ಹಣಕಾಸು ಯೋಜನೆ ಇನ್ನಿತರ ಕಾರಿಗೆ ಸಂಬಂಧಪಟ್ಟ ಅಗತ್ಯ ವಿವರಗಳನ್ನು ಅಂತರ್ಜಾಲದಲ್ಲೇ ಹುಡುಕಿಕೊಳ್ಳುತ್ತಾರೆ.
ನೂತನ ಕಾರು ಖರೀದಿ ಗ್ರಾಹಕರ ಒಟ್ಟು ಏಳು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಟ್ಟಿ ತಯಾರಿಸಲಾಗಿದೆ. ಇದರಲ್ಲಿ ವಿತರಣಾ ಪ್ರಕ್ರಿಯೆ, ವಿತರಣಾ ಸಮಯ, ಮಾರಾಟಗಾರ, ಮಾರಾಟ ಪ್ರವರ್ತನ, ಡೀಲರ್ ಸೌಲಭ್ಯ, ದಾಖಲೆ ಹಾಗೂ ಒಪ್ಪಂದಗಳು ಸೇರಿವೆ.

ಹೋಂಡಾ ಅಮೇಜಿಂಗ್
ಗರಿಷ್ಠ 1,000 ಅಂಕಗಳಲ್ಲಿ ಮಾರಾಟ ಸಂತುಷ್ಟಿ ಸೂಚಕವನ್ನು ತಯಾರಿಸಲಾಗಿದೆ. ಇದು ಸಂಪೂರ್ಣವಾಗಿ ಗ್ರಾಹಕ ತೃಪ್ತಿಯನ್ನು ಅವಲಂಬಿಸಿದೆ. ಈ ಹಿಂದಿನ ವರ್ಷಗಳಿಗಿಂತ ವಿರುದ್ಧವಾಗಿ ಟಾಪ್ 5 ಪಟ್ಟಿಯನ್ನು ಭೇದಿಸಿರುವ ಹೋಂಡಾ 849 ಅಂಕಗಳೊಂದಿಗೆ ಅಗ್ರಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೋಂಡಾ ಒಟ್ಟು ಮಾರಾಟದಲ್ಲಿ ಶೇ. 60ರಷ್ಟು ಆಕ್ರಮಿಸಿಕೊಂಡಿರುವ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು ಮಾರಾಟದಲ್ಲಿ ಭಾರಿ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದೆ.

ಮಾರುತಿ ನೆಚ್ಚಿನ ಬ್ರಾಂಡ್
ಈ ಪೈಕಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರೂ ರೇಟಿಂಗ್ ಆಧಾರದಲ್ಲಿ ಹೋಂಡಾ ನಂತರದ ಸ್ಥಾನದಲ್ಲಿರುವ ಮಾರುತಿ ಸುಜುಕಿ (849) ನೆಚ್ಚಿನ ಬ್ರಾಂಡ್ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.

ಬೇಡಿಕೆ ಕಾಯ್ದುಕೊಂಡ ಹ್ಯುಂಡೈ
ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಪ್ರಸಕ್ತ ಸಾಲಿನಲ್ಲೂ ಮಾರಾಟದ ಅಂಕಿಅಂಶದಲ್ಲಿ ಗ್ರಾಹಕರ ಸಂತುಷ್ಠಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಮುಖಾಂತರ 841 ಅಂಕಗಳೊಂದಿಗೆ ಎರಡನೇ ಸ್ಥಾನ ಆಲಂಕರಿಸಿದೆ.

ನಿರಾಸೆ ಮೂಡಿಸದ ಮಹೀಂದ್ರ
ಹಾಗೆಯೇ ಈ ಹಿಂದೆಯೂ ದೇಶದ ಟಾಪ್ 5 ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮಹೀಂದ್ರ (841) ಈ ಬಾರಿಯೂ ದೇಶದ ಗ್ರಾಹಕರನ್ನು ನಿರಾಸೆಗೊಳಪಡಿಸಿಲ್ಲ.

ಜನಪ್ರಿಯತೆ ಕಾಯ್ದುಕೊಂಡ ಟೊಯೊಟಾ
ಇನ್ನೋವಾ ಎಂಪಿವಿ ಮುಖಾಂತರ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿರುವ ಟೊಯೊಟಾ (841), ಹ್ಯುಂಡೈ, ಮಹೀಂದ್ರ ಜೊತೆ ಜಂಟಿ ಎರಡನೇ ಸ್ಥಾನ ಹಂಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟಾಟಾ ಮೀರಿಸಿದ ಫೋಕ್ಸ್‌ವ್ಯಾಗನ್
ಗ್ರಾಹಕ ಸಂತುಷ್ಠಿ ರೇಟಿಂಗ್‌ನಲ್ಲಿ 836 ಅಂಕಗಳೊಂದಿಗೆ ಮೂರನೇ ಸ್ಥಾನ ವಶಪಡಿಸಿಕೊಂಡಿರುವ ಫೋಕ್ಸ್‌ವ್ಯಾಗನ್ ಆಟೋ ಜಗತ್ತನ್ನು ಅಚ್ಚರಿಗೊಳಿಸುವಲ್ಲಿ ಯಶಸ್ವಿಯಾಗಿದೆ.

ಟಾಟಾಗೆ ಬೈ ಬೈ
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿದ್ದರೂ ಗ್ರಾಹಕರ ನಿರೀಕ್ಷೆ ಮುಟ್ಟುವಲ್ಲಿ ಟಾಟಾ ವಿಫಲವಾಗಿದೆ. ಕೇವಲ 825 ಅಂಕಗಳನ್ನು ಗಿಟ್ಟಿಸಿಕೊಂಡಿರುವ ಟಾಟಾ, ಟಾಪ್ ಐದು ಕಾರುಗಳ ಪಟ್ಟಿಯಿಂದ ಹೊರಬಿದ್ದಿದೆ.

ವಿದೇಶಿಗರ ಬೇಟೆ- ನಿಸ್ಸಾನ್
ಜಪಾನ್ ಮೂಲದ ನಿಸ್ಸಾನ್ (824) ಭಾರತ ಮಾರಾಟ ಸಂತೃಪ್ತಿ ಸೂಚ್ಯಂಕದಲ್ಲಿ ಅಂಕಗಳ ಆಧಾರದಲ್ಲಿ ಐದನೇ ಸ್ಥಾನದಲ್ಲಿದೆ.

ರೆನೊ ಕಮಾಲ್
ಡಸ್ಟರ್ ಕಾಂಪಾಕ್ಟ್ ಎಸ್‌ಯುವಿ ಮುಖಾಂತರ ದೇಶದ ಯುವ ಗ್ರಾಹಕರ ಮನ ಸೊರೆಗೈದಿರುವ ಇಟಲಿ ಮೂಲದ ರೆನೊ, ನಿಸ್ಸಾನ್ ಜತೆ ಜಂಟಿ ಐದನೇ ಸ್ಥಾನ ಹಂಚಿಕೊಂಡಿದೆ.

ಷೆವರ್ಲೆ
ಇನ್ನು ಅಮೆರಿಕ ಮೂಲದ ಜನರಲ್ ಮೋಟಾರ್ಸ್‌ನ ಷೆವರ್ಲೆ ಬ್ರಾಂಡ್ 821 ಅಂಕ ಗಿಟ್ಟಿಸಿಕೊಂಡಿದೆ.

ಸ್ಕೋಡಾ ವೈಫಲ್ಯ
ಇನ್ನೊಂದೆಡೆ ದೇಶದ ಗ್ರಾಹಕರನ್ನು ತೃಪ್ತಿ ಪಡಿಸುವಲ್ಲಿ ಸ್ಕೋಡಾ (817) ಮಗದೊಮ್ಮೆ ವೈಫಲ್ಯತೆಯನ್ನು ಕಂಡಿದೆ.

ಅಚ್ಚರಿ ಮೂಡಿಸಿದ ಫೋರ್ಡ್
ಹಾಗಿದ್ದರೂ ಅಂಕಪಟ್ಟಿಯಲ್ಲಿ 814 ಪಡೆದಿರುವ ಫೋರ್ಡ್ ಅಚ್ಚರಿ ಮೂಡಿಸಿದೆ. ಹಾಗಿದ್ದರೂ ಮುಂದಿನ ದಿನಗಳಲ್ಲಿ ಇಕೊಸ್ಪೋರ್ಟ್ ಉತ್ತೇಜಿಸುವ ನಿರೀಕ್ಷೆಯಲ್ಲಿದೆ ಫೋರ್ಡ್.

ಫಿಯೆಟ್ ಲೀಸ್ಟ್
ಇನ್ನು ಪಟ್ಟಿಯ ಅಂತಿಮದಲ್ಲಿ ಫಿಯೆಟ್ (808) ಬ್ರಾಂಡ್ ಕಾಣಿಸಿಕೊಂಡಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.


Click it and Unblock the Notifications








