ಸೂಪರ್ ಸ್ಟಾರ್ ರಜನಿ ಸ್ಟೈಲಲ್ಲಿ ಕಿಯಾ ಕಾರಿನ ಎಂಟ್ರಿ
ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಕಿಯಾ, ಸದ್ಯದಲ್ಲೇ ಪರಿಷ್ಕೃತ ಸೋಲ್ (Soul) ಕ್ರಾಸೋವರ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಇದರಂತೆ ಸೂಪರ್ ಸ್ಟಾರ್ ರಜನಿ ಸ್ಟೈಲ್‌ನಲ್ಲಿ ಪ್ರಚಾರ ಜಾಹೀರಾತುವೊಂದನ್ನು ತಯಾರಿಸಿದೆ.
ಮುಖ್ಯವಾಗಿಯೂ ಇಲಿ ಜಾತಿಗೆ ಸೇರಿದ ಮೂರು ಹ್ಯಾಮ್‌ಸ್ಟೆರ್ (hamster) ಪ್ರಾಣಿಗಳನ್ನು ಜಾಹೀರಾತಿನಲ್ಲಿ ಚಿತ್ರಿಕರಿಸಲಾಗಿದೆ. ಇದು ಸಂಪೂರ್ಣವಾಗಿ ಹೊಸ ಸ್ವರೂಪ ಪಡೆದಿರುವ ಕಿಯಾ ಕಾರುಗಳನ್ನು ಪ್ರದರ್ಶಿಸುತ್ತದೆ.
ಅಂದ ಹಾಗೆ ಮುಂಬರವ ಫ್ರಾಂಕ್ ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಾಣಲಿರುವ ಕಿಯಾ ಸೋಲ್ ಕ್ರಾಸೋವರ್ ಎಡಿಷನ್ ತದಾ ಬಳಿಕ ಯುರೋಪ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. (ರಜನಿ ಸ್ಟೈಲ್ ವೀಡಿಯೊಗಾಗಿ ಅಂತಿಮ ಸ್ಲೈಡರ್‌ನತ್ತ ಮುಂದುವರಿಯಿರಿ...)

ಟೋಟಲಿ ಟ್ರಾನ್ಸ್‌ಫ್ರಾರ್ಮ್ಡ್
ಕಿಯಾದ ಈ 'ಟೋಟಲಿ ಟ್ರಾನ್ಸ್‌ಫ್ರಾರ್ಮ್ಡ್' ಜಾಹೀರಾತಿಗೆ ಹಾಲಿವುಡ್‌ನ ಪಾಪ್ ಗಾಯಕಿ ಲೇಡಿ ಗಾಗಾ ಹಿನ್ನಲೆ ಗಾಯನ ನೀಡಿದ್ದಾರೆ. ಅಂದ ಹಾಗೆ 2009ರಲ್ಲಿ ಕಿಯಾ ಹ್ಯಾಮ್‌ಸ್ಟೆರ್ ಜಾಹೀರಾತನ್ನು ಮೊದಲ ಬಾರಿ ಚಿತ್ರಿಕರಿಸಲಾಗಿತ್ತು.

ಪರಿಷ್ಕೃತ ಆವೃತ್ತಿ
ಹಿಂದಿನ ಆವೃತ್ತಿಯ ಕೊರತೆಗಳನ್ನು ನೀಗಿಸಲು ಹೊಸ ಆವೃತ್ತಿಯ ಮೂಲಕ ಪ್ರಯತ್ನಿಸಲಾಗಿದೆ. ಇದು ಹೆಚ್ಚುವರಿ ಇಂಟಿರಿಯರ್ ಸ್ಪೇಸ್, ದೊಡ್ಡದಾದ ವಿನ್ಯಾಸ, ಎಸ್‌ಯುವಿ ಲುಕ್ ಹಾಗೂ ಕಲರ್‌ಫುಲ್ ಎಕ್ಸ್‌ಟೀರಿಯರ್ ವಿನ್ಯಾಸ ಪಡೆದುಕೊಂಡಿದೆ.

ಎಂಜಿನ್ ಮಾಹಿತಿ
ಕಿಯಾ ಸೋಲ್ ಎಡಿಷನ್‌ನಲ್ಲಿ 1.6 ಲೀಟರ್ ಜಿಡಿಐ ಪೆಟ್ರೋಲ್ ಹಾಗೂ ಸಿಆರ್‌ಡಿಐ (CRDi) ಡೀಸೆಲ್ ಎಂಜಿನ್ ಆಳವಡಿಸಲಾಗುತ್ತಿದ್ದು, ಸಿಕ್ಸ್ ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಮಾತೃಸಂಸ್ಥೆ
ನಿಮ್ಮ ಮಾಹಿತಿಗಾಗಿ ದಕ್ಷಿಣ ಕೊರಿಯಾ ಮೂಲದ ಕಿಯಾ ಮಾತೃಸಂಸ್ಥೆ ಹ್ಯುಂಡೈ ಆಗಿದೆ. ಹಾಗಾಗಿ ಹ್ಯುಂಡೈ ಮುಖಾಂತರ ಕಿಯಾ ಸೋಲ್ ಕಾರು ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ವ್ಯಾಗನಾರ್ ಪ್ರತಿಸ್ಪರ್ಧಿ
ಇದು ಪ್ರಮುಖವಾಗಿಯೂ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ವ್ಯಾಗನಾರ್ ಪ್ರತಿಸ್ಪರ್ಧಿಯೆನಿಸಲಿದೆ.
ಸೂಪರ್ ಸ್ಟಾರ್ ರಜನಿ ಸ್ಟೈಲ್‌ನಲ್ಲಿ ಕಿಯಾ ಕಾರಿನ ಎಂಟ್ರಿ- ವೀಡಿಯೊ ವೀಕ್ಷಿಸಿ


Click it and Unblock the Notifications