ಢಿಕ್ಕಿಯಾದ ರಭಸಕ್ಕೆ ಲಂಬೊರ್ಗಿನಿ ಇಬ್ಭಾಗ
ಜಗತ್ತಿನ ಮುಂಚೂಣಿಯ ಸೂಪರ್ ಸ್ಪೋರ್ಟ್ಸ್ ಕಾರುಗಳಲ್ಲಿ ಇಟಲಿಯ ಚಪ್ಪಟೆ ಸುಂದರಿ ಲಂಬೊರ್ಗಿನಿ ಕೂಡಾ ಒಂದು. ಆದರೆ ಈ ಹೈ ಸ್ಪೀಡ್ ಕಾರು ಢಿಕ್ಕಿಯಾದ ರಭಸಕ್ಕೆ ಇಬ್ಭಾಗಗೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಇನ್ನೊಂದು ಘಟನೆಯಲ್ಲಿ ರೇಸ್ ಟ್ರ್ಯಾಕ್‌ನಲ್ಲಿ ಅತ್ಯಂತ ರಭಸದಲ್ಲಿ ಸಾಗುತ್ತಿರುವ ಲಂಬೊರ್ಗಿಗೆ ಬೆಂಕಿ ಹಚ್ಚಿಕೊಂಡಿದೆ.
ನ್ಯೂಯಾರ್ಕ್ ನಗರದಲ್ಲಿ ಬಿಳಿ ಬಣ್ಣದ ಲಂಬೊರ್ಗಿನಿ ಅವೆಂಟಡಾರ್ ಕಾರು ಅಪಘಾತಕ್ಕೀಡಾಗಿದೆ. ಈ ದೃಶ್ಯ ಎಷ್ಟು ಭಯಾನಕವಾಗಿತ್ತೆಂದರೆ ಕಾರು ಕ್ಷಣಾರ್ಧದಲ್ಲಿ ಇಬ್ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.

ನಗರ ಬೀದಿಯಲ್ಲಿ ಅತಿ ವೇಗವಾಗಿ ಬಂದಿರುವ ಲಂಬೊರ್ಗಿನಿ ಚಾಲಕನ ನಿಯಂತ್ರಣ ತಪ್ಪಿ ತಡೆ ಗೋಡೆಗೆ ಢಿಕ್ಕಿಯಾಗಿದೆ.

ಕಾರು ಇಬ್ಭಾಗಗೊಂಡಿರುವುದು ಆಟೋ ವಲಯದಲ್ಲಿ ಆತಂಕಕಾರಿ ವಿಚಾರವಾಗಿ ಪರಿಣಮಿಸಿದೆ.

ಗರಿಷ್ಠ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಹೊರತಾಗಿಯೂ ಕಾರಿಗೆ ಹೆಚ್ಚಿನ ಏಟಾಗಿರುವುದು ಆತಂಕ ಸೃಷ್ಟಿ ಮಾಡುವಂತಾಗಿದೆ.

ಹಾಗಿದ್ದರೂ ಕಾರಿನ ಮುಂಭಾಗಕ್ಕೆ ಹೆಚ್ಚಿನ ಪೆಟ್ಟಾಗಿಲ್ಲ. ಅಂದರೆ ಸವಾರ ಪ್ರಾಣಪಾಯವಿಲ್ಲದೆ ಪಾರಾಗುವಲ್ಲಿ ಯಶಸ್ವಿಯಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೆತ್ತಿಗೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ರೇಸ್ ಟ್ರ್ಯಾಕಲ್ಲಿ ಗಂಟೆಗೆ 402 ಕೀ.ಮೀ. ವೇಗದಲ್ಲಿ ಚಲಿಸಿರುವ ಲಂಬೊರ್ಗಿನಿ ಗಲರ್ಡೊಗೆ ಅಗ್ನಿ ಸ್ಪರ್ಶವಾಗಿದೆ. ಈ ಘಟನೆಯು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇಟಲಿಯ ಐಷಾರಾಮಿ ಸ್ಪೋರ್ಟ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೊರ್ಗಿನಿ ಮಾತೃಸಂಸ್ಥೆ ಫೋಕ್ಸ್‌ವ್ಯಾಗನ್ ಗ್ರೂಪ್.


Click it and Unblock the Notifications








