ಮಹೀಂದ್ರ ಎಚ್-ಸಿರೀಸ್ ಕ್ಸೈಲೋ ಲಾಂಚ್; ಮೈಲೇಜ್ 14.02 kmpl

Posted By:

ದೇಶದ ಮುಂಚೂಣಿಯ ಕ್ರೀಡಾ ವಾಹನ ಉತ್ಪಾದಕ (ಎಸ್‌ಯುವಿ) ಸಂಸ್ಥೆಯಾದ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ (ಎಂ ಆಂಡ್ ಎಂ), ನೂತನ ಎಚ್-ಸಿರೀಸ್ ಕ್ಸೈಲೋ ಕಾರನ್ನು ಲಾಂಚ್ ಮಾಡಿದೆ. ಇದರಲ್ಲಿ ವಿಶ್ವದರ್ಜೆಯ ಎಂಹಾಕ್ (mHawk) ಎಂಜಿನ್ ತಂತ್ರಜ್ಞಾನ ಆಳವಡಿಸಿರುವುದು ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಆದರೆ ದರದಲ್ಲಿ ಯಾವುದೇ ಏರುಪೇರು ಕಂಡುಬಂದಿಲ್ಲ. ನೂತನ ಎಚ್-ಸಿರೀಸ್ ಬಿಎಸ್IV ದೆಹಲಿ ಎಕ್ಸ್ ಶೋ ರೂಂ ಆರಂಭಿಕ ದರ 8.23 ಲಕ್ಷ ರು.ಗಳಾಗಿವೆ. ಇದು ಎಚ್4 ರಿಂದ ಆರಂಭವಾಗಲಿದ್ದು, ಎಚ್8 ಹಾಗೂ ಟಾಪ್ ವೆರಿಯಂಟ್ ಎಚ್9 ಕೂಡಾ ಲಭ್ಯವಿರಲಿದೆ.

ಪ್ರಮುಖ ವೈಶಿಷ್ಟ್ಯಗಳು

 • ಹೊಸ ಎಚ್ ಸಿರೀಸ್ ಕ್ಸೈಲೋ,
 • mHawk ಎಂಜಿನ್
 • ಮೈಲೇಜ್ 14.02 kmpl
 • ದೆಹಲಿ ಎಕ್ಸ್ ಶೋ ರೂಂ ದರ 8.23 ಲಕ್ಷ ರು.

  ವೆರಿಯಂಟ್

  ವೆರಿಯಂಟ್

  ಎಚ್4- ಎಬಿಎಸ್ ಆಯ್ಕೆ

  ಎಚ್8- ಎಬಿಎಸ್ ಮತ್ತು ಏರ್ ಬ್ಯಾಗ್ ಆಯ್ಕೆ

  ಎಚ್9- ವಾಯ್ಸ್ ಕಮಾಂಡ್ ತಂತ್ರಜ್ಞಾನ (ವಿಸಿಟಿ), ಕ್ರೂಸ್ ಕಂಟ್ರೋಲ್, ಡಿಜಿಟಲ್ ಡ್ರೈವ್ ಅಸಿಸ್ಟ್ ಸಿಸ್ಟಂ

  ಮೈಲೇಜ್ 14.02 kmpl

  ಮೈಲೇಜ್ 14.02 kmpl

  ಹೊಸ ಎಚ್ ಸಿರೀಸ್ ಶಕ್ತಿಶಾಲಿ ಎಂಜಿನ್ 120 ಪಿಎಸ್ ಪವರ್ (280 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಪ್ರತಿ ಲೀಟರ್‌ಗೆ ಗರಿಷ್ಠ 14.02 ಮೈಲೇಜ್ ನೀಡಲಿದೆ.

  ಸುರಕ್ಷತಾ ಮಾನದಂಡ

  ಸುರಕ್ಷತಾ ಮಾನದಂಡ

  ಎಬಿಎಸ್ ಜತೆ ಇಬಿಡಿ,

  ಡ್ಯುಯಲ್ ಏರ್ ಬ್ಯಾಗ್,

  ಎಕ್ಸ್ಟ್ರಾ ಸ್ಟೆಬಿಲಿಟಿ ಟೆಕ್ನಾಲಜಿ ಸಸ್ಷೆಷನ್ (ಇಎಸ್‌ಟಿ),

  ರಿವರ್ಸ್ ಪಾರ್ಕಿಂಗ್ ಅಸಿಸ್ಟ್

  ಮಹೀಂದ್ರ ಎಚ್-ಸಿರೀಸ್ ಕ್ಸೈಲೋ ಲಾಂಚ್

  2009ರಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಕ್ಸೈಲೋ, ಉತ್ತಮ ಸ್ಥಳಾವಕಾಶ ಹಾಗೂ ಆರಾಮದಾಯ ಪಯಣವನ್ನು ಖಾತ್ರಿಪಡಿಸಿತ್ತು. ಇದೀಗ ನೂತನ ಎಂಹಾಕ್ ಎಂಜಿನ್ ತಂತ್ರಜ್ಞಾನವು ಮತ್ತಷ್ಟು ಉತ್ತಮ ನಿರ್ವಹಣೆಗೆ ನೆರವಾಗುವ ನಂಬಿಕೆಯನ್ನು ಕಂಪನಿ ಹೊಂದಿದೆ.

  ಮಹೀಂದ್ರ ಎಚ್-ಸಿರೀಸ್ ಕ್ಸೈಲೋ ಲಾಂಚ್

  ದೇಶದಲ್ಲಿರುವ ಎಂಪಿವಿ ಮಾಡೆಲ್‌ಗಳ ಪೈಕಿ ಕ್ಸೆಲೋ ಐಷಾರಾಮಿ ಸ್ಥಳಾವಕಾಶ ಹಾಗೂ ಆರಾಮದಾಯಕ ಪಯಣವನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಈ ವರೆಗೆ 1.25 ಲಕ್ಷ ಕ್ಸೈಲೋ ಯುನಿಟ್‌ಗಳು ಭಾರತೀಯ ರಸ್ತೆ ಪ್ರವೇಶಿಸಿದೆ.

  ಮಹೀಂದ್ರ ಎಚ್-ಸಿರೀಸ್ ಕ್ಸೈಲೋ ಲಾಂಚ್

  ಇದು ಈಗಾಗಲೇ ಎಕಾನಮಿ ಟೈಮ್ಸ್‌ನ ಜಿಗ್ ವೀಲ್ ಯುವಿ ಆಫ್ ದಿ ಇಯರ್, ಸಿಎನ್‌ಬಿಸಿ ಓವರ್‌ಡ್ರೈವ್ ಹಾಗೂ ಎನ್‌ಡಿಟಿವಿ ಫ್ರಾಫಿಟ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಅಷ್ಟೇ ಯಾಕೆ ಬಿಬಿಸಿ ಟಾಪ್ ಗೇರ್‌ನಿಂದ ಕುಟುಂಬ ಕಾರು ಹೆಗ್ಗಳಿಕೆಗೂ ಪಾತ್ರವಾಗಿತ್ತು.

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

  ಮಹೀಂದ್ರ ಕ್ಸೈಲೋ

                                                        

      

English summary
Mahindra & Mahindra Ltd. (M&M Ltd.), India’s leading SUV manufacturer, today announced the launch of the new H-Series Xylo, powered by the refined and world class mHawk engine.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark