ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಸೀಮಿತ ಆವೃತ್ತಿ ಲಾಂಚ್

By Nagaraja

ದೇಶದ ಅತಿ ದೊಡ್ಡ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು, ತನ್ನ ಜನಪ್ರಿಯ ಎಕ್ಸ್‌ಯುವಿ500 ಆವೃತ್ತಿಯ ಸೀಮಿತ ಸ್ಪೋರ್ಟ್ಸ್ ಎಡಿಷನ್ ಲಾಂಚ್ ಮಾಡಿದೆ.

ಹೆಸರಲ್ಲೇ ಸೂಚಿಸಿರುವಂತೆಯೇ ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಎಡಿಷನ್, ಸ್ಪೋರ್ಟಿ ಎಕ್ಸ್‌ಟೀರಿಯರ್ ಹಾಗೂ ಗರಿಷ್ಠ ಇಂಟಿರಿಯರ್‌ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ. ಅಷ್ಟಕ್ಕೂ ದರ ಎಷ್ಟು ಎಂಬುದು ಗೊತ್ತೇ? ಹೆಚ್ಚಿನ ವಿವರಗಳಿಗಾಗಿ ಫೋಟೊ ಸ್ಲೈಡರ್‌ನತ್ತ ಮುಂದುವರಿಯರಿ..

ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಸೀಮಿತ ಆವೃತ್ತಿ ಲಾಂಚ್

ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಎಡಿಷನ್ ಬೆಂಗಳೂರು ಎಕ್ಸ್ ಶೋ ರೂಂ ದರ 13.94 ಲಕ್ಷ ರು.ಗಳಾಗಿವೆ. ಇದು ನಿಜಕ್ಕೂ ವಾಹನ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.

ಎಕ್ಸ್‌ಕ್ಲೂಸಿವ್ ವೈಶಿಷ್ಟ್ಯಗಳು

ಎಕ್ಸ್‌ಕ್ಲೂಸಿವ್ ವೈಶಿಷ್ಟ್ಯಗಳು

  • ಸ್ಟೈಲಿಷ್ ಸ್ಪೋರ್ಟ್ಸ್ ಡಿಕಾಲ್ಸ್,
  • ಯೂನಿಕ್ ಅಲಾಯ್ ವೀಲ್ ಜತೆ ರೆಡ್ ಸಿಗ್ನೇಚರ್,
  • ರಿಯರ್ ವ್ಯೂ ಕ್ಯಾಮೆರಾ,
  • ಸ್ಪೋರ್ಟಿ ಲೆಥರ್ ಫ್ಯಾಬ್ರಿಕ್ ಸೀಟು,
  • ಫಾಗ್ ಲ್ಯಾಂಪ್ ಆಂಡ್ ಡೋರ್ ಹ್ಯಾಂಡಲ್ ಜೊತೆ ರೆಡ್ ಆಸೆಂಟ್,
  • ಕೆಂಪು ಬಣ್ಣದ ಸ್ಟೈಲಿಷ್ ರೂಫ್ ರೈಲ್,
  • ಸ್ಪೋರ್ಟ್ಸ್ ಬ್ಯಾಡ್ಜ್,
  • ಪ್ರೀಮಿಯಂ ಆರ್ಮ್‌ರೆಸ್ಟ್
  • ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಸೀಮಿತ ಆವೃತ್ತಿ ಲಾಂಚ್

    ಮಹೀಂದ್ರ ಎಕ್ಸ್‌ಯುವಿ500 ಡಬ್ಲ್ಯು8 ಮಾದರಿಯಲ್ಲಿ ಸ್ಪೋರ್ಟ್ಸ್ ಸೀಮಿತ ಆವೃತ್ತಿಯು ಆಗಮನವಾಗಿದೆ. ಇದು ನೂತನ ತಂತ್ರಗಾರಿಕೆ, ನಿರ್ವಹಣೆ, ಸುರಕ್ಷತೆ ಹಾಗೂ ಸ್ಟೈಲಿಷ್ ವಿಚಾರಗಳಲ್ಲಿ ವಾಹನ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

    ನಿರ್ವಹಣೆ

    ನಿರ್ವಹಣೆ

    140 ಬಿಎಚ್‌ಪಿ ಉತ್ಪಾದಿಸುವ (330 ಎನ್‌ಎಂ ಟಾರ್ಕ್) ಎಂಹಾಕ್ (mHawk) ಎಂಜಿನ್‌ನಿಂದ ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಎಡಿಷನ್ ನಿಯಂತ್ರಿಸಲ್ಪಡುತ್ತಿದ್ದು, 6 ಸ್ಪೀಡ್ ಟ್ರಾನ್ಸ್‌ಮಿಷನ್ ಕೂಡಾ ಪಡೆದುಕೊಂಡಿದೆ. ಹಾಗೆಯೇ ಐದನೇ ತಲೆಮಾರಿನ ಜಿಯೋಮೆಟ್ರಿ ಟರ್ಬೊಚಾರ್ಜರ್ ಕೂಡಾ ಇರಲಿದೆ.

    ತಂತ್ರಜ್ಞಾನ

    ತಂತ್ರಜ್ಞಾನ

    ಆರು ಇಂಚುಗಳ ಟಚ್‌ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ ಜೊತೆ ಜಿಪಿಎಸ್, ಡಿವಿಡಿ, ಸಿಡಿ, ಎಂಪಿ3, ಎಫ್‌ಎಂ, ಯುಎಸ್‌ಬಿ, ಐಪೊಡ್ ಕನೆಕ್ಟಿವಿಟಿ, ಚಾಲಕ ಮಾಹಿತಿ ವ್ಯವಸ್ಥೆ, ಮೈಕ್ರೋ ಹೈಬ್ರಿಡ್ ತಂತ್ರಜ್ಞಾನ, ಪೂರ್ಣವಾಗಿ ಸ್ವಯಂಚಾಲಿತ ತಾಪಮಾನ ನಿಯಂತ್ರಣದ ಜೊತೆಗೆ ಡ್ಯುಯಲ್ ಎಚ್‌ವಿಎಸಿ, ಸ್ಟಾಟಿಕ್ ಬೆನ್ಡಿಂಗ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಪಾರ್ಕಿಂಗ್ ಲೈಟ್, ವಾಯ್ಸ್ ಕಮಾಂಡ್, ಸ್ಟೀರಿಂಗ್ ವೀಲ್‌ನಲ್ಲೇ ಕ್ರೂಸ್ ಮತ್ತು ಆಡಿಯೋ ಕಂಟ್ರೋಲ್, ಸ್ಮಾರ್ಟ್ ರೈನ್ ಆಂಡ್ ರೈನ್ ಸೆನ್ಸಾರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ವ್ಯವಸ್ಥೆ ಮತ್ತು ಮಡಚುವ ಹಾಗೂ ಹೊಂದಾಣಿಸಬಹುದಾದ ಔಟ್‌ಸೈಡ್ ರಿಯರ್ ವ್ಯೂ ಮಿರರ್ ಸೌಲಭ್ಯವಿರಲಿದೆ.

    ಸುರಕ್ಷತೆ

    ಸುರಕ್ಷತೆ

    ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ) ಜೊತೆ ರೋಲ್‌ಓವರ್ ಮಿಟಿಗೇಷನ್, 6 ಏರ್‌ಬ್ಯಾಗ್ (ಮುಂಭಾಗ, ಬದಿ ಹಾಗೂ ಕರ್ಟೈನ್) ಎಬಿಎಸ್ ಜೊತೆ ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ವಿತರಣೆ (ಇಬಿಡಿ), ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ವ್ಯವಸ್ಥೆಯಿರಲಿದೆ.

    ಆರಾಮದಾಯಕ ಹಾಗೂ ಅನುಕೂಲ

    ಆರಾಮದಾಯಕ ಹಾಗೂ ಅನುಕೂಲ

    ಐಷಾರಾಮಿ ಲೆಥರ್ ಫ್ಯಾಬ್ರಿಕ್ ಸೀಟು, ಫ್ಲ್ಯಾಟ್ ಮಡಚಬಹುದಾದ ಎರಡನೇ ಹಾಗೂ ಮೂರನೇ ಸಾಲಿನ ಸೀಟುಗಳು, ಎಂಟು ವಿಧದದಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟಿನ ಜೊತೆಗೆ ಸಂಪೂರ್ಣ ಲಂಬರ್ ಸಹಾಯ ಮತ್ತು ಟಿಲ್ಟ್ ಹಾಗೂ ಟೆಲಿಸ್ಕಾಪಿಕ್ ಸ್ಟೀರಿಂಗ್ ಪಡೆದುಕೊಂಡಿರಲಿದೆ.

    ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಸೀಮಿತ ಆವೃತ್ತಿ ಲಾಂಚ್

    ಅಂದ ಹಾಗೆ ಕೇವಲ ಸೀಮಿತ 1000 ಆವೃತ್ತಿಗಳು ಮಾತ್ರ ಲಭ್ಯವಿರಲಿದ್ದು, ಇದರಿಂದಾಗಿ ಆಸಕ್ತ ಗ್ರಾಹಕರು ಮಹೀಂದ್ರ ಕನಸಿನ ಕಾರನ್ನು ತಮ್ಮದಾಗಿಸಿಕೊಳ್ಳಲು ಮಹೀಂದ್ರ ಡೀಲರುಶಿಪ್‌ಗಳನ್ನು ಆದಷ್ಟು ಬೇಗನೇ ಸಂಪರ್ಕಿಸಬಹುದಾಗಿದೆ.

    ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಸೀಮಿತ ಆವೃತ್ತಿ ಲಾಂಚ್

    ಹಾಗೆಯೇ ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಆವೃತ್ತಿಗಾಗಿ ವಿಶೇಷ ವೆಬ್‌ಸೈಟ್ ರೂಪಿಸಲಾಗಿದ್ದು, ಆಸಕ್ತ ಗ್ರಾಹಕರು ಇಲ್ಲಿಗೆ ಭೇಟಿ ಕೊಡಬಹುದಾಗಿದೆ.

More from DriveSpark

Article Published On: Friday, June 6, 2014, 10:01 [IST]
English summary
Mahindra & Mahindra Ltd. (M&M), India’s leading SUV manufacturer, today announced the launch of the limited edition ‘XUV500 Sportz’ built on its W8 model. Priced at Rs. 13.94 Lacs (Ex-showroom Bengaluru), the ‘XUV500 Sportz’ stands out and comes packed with premium features and plush interiors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+