9 ಸೀಟುಗಳ ಮಹೀಂದ್ರ ಕ್ಸೈಲೋ ಲಾಂಚ್
ಈಗ ಏನೇ ಇದ್ದರೂ ಅಣು ಕುಟಂಬದ್ದೇ ದರ್ಬಾರು. ಗಂಡ-ಹೆಂಡತಿ ಒಂದು ಮಗು ಎಂಬುದರಲ್ಲಿ ರೂಢಿಯಾಗಿರುತ್ತಾರೆ. ದೇಶದ ಜನಸಂಖ್ಯೆಯ ದೃಷ್ಟಿಕೋನದಲ್ಲಿ ಇದು ಉತ್ತಮ ಕೂಡಾ ಹೌದು. ಇಂತಹ ಸಮೂಹವನ್ನೇ ಗುರಿ ಮಾಡಿಸಿಕೊಳ್ಳುತ್ತಿರುವ ಅನೇಕ ವಾಹನ ತಯಾರಕ ಸಂಸ್ಥೆಗಳು ಸಣ್ಣ ಕಾರುಗಳನ್ನು ಬಿಡುಗಡೆ ಮಾಡುವತ್ತ ಹೆಚ್ಚು ಗಮನ ಕೇಂದ್ರಿತವಾಗಿರುತ್ತದೆ.
ಹಾಗಿರುವಾಗ ದೊಡ್ಡ ಕುಟುಂಬ ಹೊಂದಿರುವ ಜನರಿಗೆ ಪ್ರಯಾಣವೆಂಬುದು ಕಷ್ಟಕರವೆನಿಸುತ್ತದೆ. ಇಂತಹವರನ್ನು ಪ್ರಮುಖವಾಗಿ ಗುರಿಯಾಗಿರಿಸಿಕೊಂಡಿರುವ ದೇಶದ ದೈತ್ಯ ಕ್ರೀಡಾ ಉತ್ಪಾದಕ ವಾಹನ (ಎಸ್‌ಯುವಿ) ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ, ತನ್ನ ಜನಪ್ರಿಯ ಕ್ಸೈಲೋ ಎಂಪಿವಿ ಆವೃತ್ತಿಯ ಡಿ2 ಮ್ಯಾಕ್ಸ್ (D2 MAXX) ವೆರಿಯಂಟ್ ಲಾಂಚ್ ಮಾಡಿದೆ.
ಇದರ ಪ್ರಮುಖ ವೈಶಿಷ್ಟ್ಯವೆಂದರೆ ಈ ಎಂಪಿವಿಯಲ್ಲಿ ಒಂಬತ್ತು ಜನರಿಗೆ ಆರಾಮವಾಗಿ ಪಯಣಿಸಬಹುದು. ಈ ಮೂಲಕ ದೊಡ್ಡ ಕುಟುಂಬ ಹೊಂದಿದವರು ಸಹ ತಮ್ಮ ಕುಟುಂಬದ ಜತೆ ಪ್ರವಾಸಿ ಇತ್ಯಾದಿ ಮನರಂಜನೆಯ ಸಿಹಿಯನ್ನು ಜತೆಯಾಗಿಯೇ ಅನುಭವಿಸಬಹುದಾಗಿದೆ.
ಮಹೀಂದ್ರ ಕ್ಸೈಲೋ ನೂತನ ಡಿ2 ಮ್ಯಾಕ್ಸ್ ವೆರಿಯಂಟ್ ಬೆಂಗಳೂರು ಎಕ್ಸ್ ಶೋ ರೂಂ ಹಾಗೂ ಇತರ ವೈಶಿಷ್ಟ್ಯಗಳ ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಲು ಮರೆಯದಿರಿ...

ಮಹೀಂದ್ರದಿಂದ ನೂತನವಾಗಿ ಲಾಂಚ್ ಆಗಿರುವ ಕ್ಸೈಲೋ ಡಿ2 ಮ್ಯಾಕ್ಸ್ ವೆರಿಯಂಟ್ ಬೆಂಗಳೂರು ಎಕ್ಸ್ ಶೋ ರೂಂ ದರ 7.34 ಲಕ್ಷ ರು.ಗಳಾಗಿವೆ (BS-III). ಇದು ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಲಿರುವುದು ಇತರ ಪ್ರತಿಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡಲು ನೆರವಾಗಲಿದೆ.

ಶಕ್ತಿಶಾಲಿ ಕ್ಸೈಲೋ ನಿರ್ವಹಣೆ, ಮೈಲೇಜ್, ಆರಾಮದಾಯಕತೆ, ಸ್ಥಳಾವಕಾಶ, ಕಡಿಮೆ ನಿರ್ವಹಣೆಗೆ ವೆಚ್ಚಗೆ ಹೆಸರುವಾಸಿಯಾಗಿದ್ದು, ಡಿ2 ಮ್ಯಾಕ್ಸ್ ವೆರಿಯಂಟ್ ಮೂಲಕವೂ ಇದನ್ನು ಮುಂದುವರಿಸಿಕೊಂಡು ಬರಲಾಗಿದೆ.

ಮೈಲೇಜ್
ಬೆಲೆ ಬಗ್ಗೆ ಮಾಹಿತಿ ಕೊಟ್ಟ ಮೇಲೆ ಭಾರತೀಯ ಗ್ರಾಹಕರ ದೃಷ್ಟಿಕೋನದಲ್ಲಿ ಮೈಲೇಜ್ ಪ್ರಮುಖ ಪಾತ್ರ ವಹಿಸುತ್ತದೆ. ಚಿಂತೆ ಬೇಡ, ಎಆರ್‌ಎಐ ಮಾನ್ಯತೆ ಪ್ರಕಾರ ಮಹೀಂದ್ರ ಕ್ಸೈಲೋ ಪ್ರತಿ ಲೀಟರ್‌ಗೆ 14.95 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ನೂತನ ಮಹೀಂದ್ರ ಕ್ಸೈಲೋ ಡಿ2 ಮ್ಯಾಕ್ಸ್ ವೆರಿಯಂಟ್ 8+1 (ಚಾಲಕ) ಸಿಟ್ಟಿಂಗ್ ವ್ಯವಸ್ಥೆ ಹೊಂದಿರಲಿದೆ. ಅಂದರೆ ಕೊನೆಯ ಸಾಲಿನಲ್ಲಿ (ಹಿಂದುಗಡೆ) ಫೇಸ್ ಟು ಫೇಸ್ ಆಸನ ವ್ಯವಸ್ಥೆ ಲಗತ್ತಿಸಲಾಗಿರುತ್ತದೆ.

ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಕ್ಸೈಲೋ ಡಿ2 ಮ್ಯಾಕ್ಸ್ ವೆರಿಯಂಟ್, 2.5 ಲೀಟರ್ ಎಂಡಿಐ ಸಿಆರ್‌ಡಿಇ (mDI CRDe) ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಹೆಚ್ಚು ಪರಿಸರ ಸ್ನೇಹಿ ಕೂಡಾ ಎನಿಸಿಕೊಳ್ಳಲಿದ್ದು 95 ಪಿಎಸ್ ಪವರ್ (220 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ನೂತನ ಕ್ಸೈಲೋ ಉತ್ತಮ ಹೆಡ್ ರೂಂ ಅಂತೆಯೇ ಲೆಗ್ ರೂಂ ಹೊಂದಿದೆ. ಅಂತೆಯೇ ದೂರ ಪ್ರಯಾಣಕ್ಕೆ ತೆರಳುವುದಕ್ಕಾಗಿ ಉತ್ತಮ ಲಗ್ಗೇಜ್ ಸ್ಪೇಸ್ ಕೂಡಾ ಹೊಂದಿರುತ್ತದೆ.

ಇದು ವಾಣಿಜ್ಯ ವಾಹನದ ದೃಷ್ಟಿಕೋನದಲ್ಲೂ ಉತ್ತಮ ಆಯ್ಕೆಯಾಗಿರಲಿದೆ. ಯಾಕೆಂದರೆ ಇದರ ಫೇಸ್ ಟು ಫೇಸ್ ಸಿಟ್ಟಿಂಗ್ ವ್ಯವಸ್ಥೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಕೊಂಡೊಯ್ಯಲು ಅಥವಾ ಹೆಚ್ಚಿನ ಲಗ್ಗೇಜ್ ಸಾಗಿಸಲು ನೆರವಾಗಲಿದೆ.

ಹೊಸ ಲುಕ್ ಪಡೆದ ಫ್ರಂಟ್ ಗ್ರಿಲ್ ಜತೆಗೆ ಮಹೀಂದ್ರ ಲೊಗೊ, ಹೊಸ ಬಂಪರ್ ಜತೆ ಸ್ಪೋರ್ಟಿ ಏರ್ ಡ್ಯಾಮ್ ಮತ್ತು ವೀಲ್‌ಗಳು ಕ್ಸೈಲೋ ಡಿ2 ಮ್ಯಾಕ್ಸ್ ಆವೃತ್ತಿಯನ್ನು ವಿಶಿಷ್ಟವಾಗಿಸುತ್ತದೆ.

ದರ ಹೋಲಿಕೆ (ದೆಹಲಿ ಎಕ್ಸ್ ಶೋ ರೂಂ)
ನಿಕಟ ಎಂಪಿವಿ ಸ್ಪರ್ಧಾಳುಗಳ ಜತೆ ಮಹೀಂದ್ರ ಕ್ಸೈಲೋ ದರ ಹೋಲಿಕೆ
ಮಹೀಂದ್ರ ಕ್ಸೈಲೋ ಡಿ2 ಮ್ಯಾಕ್ಸ್ - 7.12 ಲಕ್ಷ ರು. (BS-III)
ಟಾಟಾ ಸುಮೋ ಗೋಲ್ಡ್- 5.93 - 6.77 ಲಕ್ಷ ರು. (BS-III)
ಮಾರುತಿ ಎರ್ಟಿಗಾ ಎಲ್‌ಡಿಐ- 7.46 ಲಕ್ಷ ರು. (BS-IV)
ಷೆವರ್ಲೆ ಎಂಜಾಯ್- 6.96 - 8.21 ಲಕ್ಷ ರು. (BS-IV)
ಅಶೋಕ್ ಲೇಲ್ಯಾಂಡ್ ಸ್ಟೈಲ್ ಎಲ್‌ಇ- 7.49 ಲಕ್ಷ ರು.

ಈ ಎಲ್ಲದರ ಮೂಲಕ ಉಪನಗರಗಳ ಪ್ರವಾಸಿ ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ಇನ್ನಷ್ಟು ಬಲಪಡಿಸುವ ಇರಾದೆಯನ್ನು ಮಹೀಂದ್ರ ಹೊಂದಿದೆ.


Click it and Unblock the Notifications








