ಕ್ಯಾಮೆರಾ ರಹಸ್ಯ ಕಣ್ಣುಗಳಲ್ಲಿ ಮಹೀಂದ್ರ ವೆರಿಟೊ
ಮಹೀಂದ್ರದ ಎರಡು ನೂತನ ವರ್ಷನ್‌ಗಳು ಈಗಾಗಲೇ ಕಾರು ಪ್ರಿಯರ ಗಮನ ಸೆಳೆದಿವೆ. ಮಹೀಂದ್ರದ ಈ ಬಹುನಿರೀಕ್ಷಿತ ವೆರಿಟೊ ಹ್ಯಾಚ್‌ಬ್ಯಾಕ್ ಹಾಗೂ ಕಾಂಪಾಕ್ಟ್ ಸೆಡಾನ್ ಕಾರುಗಳು ನಿಜಕ್ಕೂ ಗಮನ ಸೆಳೆಯುತ್ತಿವೆ.
ಅಂದ ಹಾಗೆ ನೀವು ಮಹೀಂದ್ರ ವೆರಿಟೊ ಸ್ಪೈ ಷಾಟ್ಸ್ ನೋಡಿದ್ರಾ? ಆಟೋ ಆಡ್ರೆನ್ಯಾಲಿನ್ ಬಿಡುಗಡೆ ಮಾಡಿರುವ ಸ್ಪೈ ಷಾಟ್ಸ್ ಕೆಳಗಡೆ ಕೊಡಲಾಗಿದೆ. ವೆರಿಟೊ ಹ್ಯಾಚ್‌ಬ್ಯಾಕ್ ಕಾರು ಭಾರತೀಯ ರುಪಾಯಿ ಪ್ರಕಾರ ಐದು ಲಕ್ಷ ಅಸುಪಾಸಿನಲ್ಲಿರಲಿದೆ.
ಮಹೀಂದ್ರ ಕಾಂಪಾಕ್ಟ್ ಸೆಡಾನ್ ಪ್ರಮುಖವಾಗಿಯೂ ದೇಶ ನಂ.1 ಸ್ಥಾನದಲ್ಲಿರುವ ಮಾರುತಿಯ ಸ್ವಿಫ್ಟ್ ಡಿಜೈರ್‌ಗೆ ಪ್ರಮುಖ ಪ್ರತಿಸ್ಪರ್ಧಿಯೆನಿಸಲಿದೆ.
ಹ್ಯಾಚ್‌ಬ್ಯಾಕ್ ಆವೃತ್ತಿ ಮೊದಲೇ ಮಹೀಂದ್ರ ವೆರಿಟೊ ಕಾಂಪಾಕ್ಟ್ ಸೆಡಾನ್ ಗ್ರಾಹಕರ ಕೈಸೇರುವ ನಿರೀಕ್ಷೆಯಿದೆ. ಹಾಗಿದ್ದರೂ ಮಹೀಂದ್ರದ ಹೊಸ ಕಾರುಗಳು ಅದೇ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿದ್ದು, ಈಗಿರುವ ವೆರಿಟೊಗಿಂತ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗುತ್ತಿಲ್ಲ.
2013ನೇ ಮಧ್ಯಂತರ ಅವಧಿಯಲ್ಲಿ ವೆರಿಟೊ ಹ್ಯಾಚ್‌ಬ್ಯಾಕ್ ಬಿಡುಗಡೆಯಾಗಲಿದೆ. ಹಾಗಿದ್ದರೆ ಮಹೀಂದ್ರ ವರಿಟೊ ಆಕರ್ಷಕ ಸ್ಪೈ ಷಾಟ್ಸ್ ಮಜಾ ಸವಿಯೋಣ

ನ್ಯೂ ಲುಕ್ ಮಹೀಂದ್ರ ವೆರಿಟೊ
ಮಹಾರಾಷ್ಟ್ರದ ನಾಸಿಕ್ ಎಂಬಲ್ಲಿ ಟೆಸ್ಟ್ ಡ್ರೈವ್ ಮಾಡಲಾಗುತ್ತಿದ್ದ ಮಹೀಂದ್ರ ವೆರಿಟೊ ಹ್ಯಾಚ್‌ಬ್ಯಾಕ್ ಕಾರಿನ ರಹಸ್ಯ ಚಿತ್ರಣಗಳು ಕ್ಯಾಮೆರಾ ಕಣ್ಣುಗಳಿಗೆ ಬಿದ್ದಿವೆ.
image source: Auto Andrenalin
ನ್ಯೂ ಲುಕ್ ಮಹೀಂದ್ರ ವೆರಿಟೊ
ಮುಂದಿನ ಕೆಲವು ತಿಂಗಳಲ್ಲಿ ವೆರಿಟೊ ಕಾಂಪಾಕ್ಟ್ ಸೆಡಾನ್ ಗ್ರಾಹಕರ ಕೈಸೇರಲಿದೆ.
image source: auto andrenalin
ನ್ಯೂ ಲುಕ್ ಮಹೀಂದ್ರ ವೆರಿಟೊ
2012ರ ಜುಲೈನಲ್ಲಿ ಮಹೀಂದ್ರ ಪರಿಷ್ಕೃತ ಆವೃತ್ತಿ ಬಿಡುಗಡೆಗೊಳಿಸಿತ್ತು. ಹೊಸ ಹ್ಯಾಚ್‌ಬ್ಯಾಕ್ ಹಾಗೂ ಕಾಂಪಾಕ್ಟ್ ಸೆಡಾನ್ ಕಾರುಗಳ ಮುಂಭಾಗದಲ್ಲಿ ನ್ಯೂ ಲುಕ್ ನಿರೀಕ್ಷಿಸಲಾಗುತ್ತಿದೆ.

ನ್ಯೂ ಲುಕ್ ಮಹೀಂದ್ರ ವೆರಿಟೊ
ಹಾಗಿದ್ದರೂ ಮಹೀಂದ್ರ ವೆರಿಟೊ ಇಂಟಿರಿಯರ್ ಭಾಗಗಳಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗುತ್ತಿಲ್ಲ.

ನ್ಯೂ ಲುಕ್ ಮಹೀಂದ್ರ ವೆರಿಟೊ

ನ್ಯೂ ಲುಕ್ ಮಹೀಂದ್ರ ವೆರಿಟೊ

ನ್ಯೂ ಲುಕ್ ಮಹೀಂದ್ರ ವೆರಿಟೊ
ನ್ಯೂ ಲುಕ್ ಮಹೀಂದ್ರ ವೆರಿಟೊ
ವೀಡಿಯೋ ಚಿತ್ರಣ


Click it and Unblock the Notifications








