ಮಹೀಂದ್ರ ವೆರಿಟೊ ಹ್ಯಾಚ್‌ಬ್ಯಾಕ್ 'ವೈಬ್' ಸದ್ಯದಲ್ಲೇ ಲಾಂಚ್

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಮಹೀಂದ್ರ ವೆರಿಟೊ ಹ್ಯಾಚ್‌ಬ್ಯಾಕ್ ಆಗಮನದ ಕುರಿತು ವರದಿ ಮಾಡಿದ್ದೆವು. ಇದೀಗ ಎಲ್ಲ ಅಧಿಕೃತಗೊಂಡಿದ್ದು ನೂತನ ವೆರಿಯಂಟ್ 'ವೈಬ್' (vibe) ಎಂಬ ಹೆಸರಿನಿಂದ ಅರಿಯಲ್ಪಡಲಿದ್ದು, ಮುಂದಿನ ತಿಂಗಳಲ್ಲಿ ಲಾಂಚ್ ಆಗಲಿದೆ.

ಸ್ಪರ್ಧಾತ್ಮಕ ಆರು ಲಕ್ಷ ಅಸುಪಾಸಿನಲ್ಲಿ ಮಾರುಕಟ್ಟೆ ತಲುಪಲಿರುವ ವೆರಿಟೊ ವೈಬ್, ಮಾರುಕಟ್ಟೆಯಲ್ಲಿ ನೆಲೆಯೂರಿರುವ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಹ್ಯುಂಡೈ ಐ20 ಆವೃತ್ತಿಗಳಿಗೆ ಪ್ರಬಲ ಪೈಪೋಟಿ ಆಗಿರಲಿದೆ.

ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಚೆನ್ನೈ ಹಾಗೂ ಪುಣೆ ನಗರಗಳಲ್ಲಿ ಪರೀಕ್ಷಾರ್ಥ ಡ್ರೈವಿಂಗ್ ನಡೆಸಿದ್ದ ಮಹೀಂದ್ರ ವೈಬ್ ಹ್ಯಾಚ್‌ಬ್ಯಾಕ್ ಮಾರುಕಟ್ಟೆಗೆ ಲಗ್ಗೆಯಿಡಲು ಸನ್ನದ್ಧವಾಗಿದೆ.

ವೆರಿಟೊ ಫ್ಲಾಟ್‌ಫಾರ್ಮ್‌ನಡಿಯಲ್ಲಿ ನಿರ್ಮಾಣವಾಗಿರುವ ಮಹೀಂದ್ರ ವೆರಿಟೊ ವೈಬ್, 2013 ಮೇ ತಿಂಗಳಲ್ಲಿ ಎಂಟ್ರಿ ಕೊಡಲಿದೆ. ಇತರ ಮಹೀಂದ್ರ ವೆರಿಟೊದಲ್ಲಿ ಕಾಣಸಿಗುವಂತೆಯೇ ವೆರಿಟೊ ವೈಬ್‌ನಲ್ಲೂ 1.5 ಲೀಟರ್ ರೆನೊ ಡೀಸೆಲ್ ಎಂಜಿನ್ ಆಳವಡಿಕೆಯಾಗಲಿದೆ.

ಮಹೀಂದ್ರ ವೆರಿಟೊ 'ವೈಬ್' ಹ್ಯಾಚ್‌ಬ್ಯಾಕ್ ಮೇ ತಿಂಗಳಲ್ಲಿ ಲಾಂಚ್

ಇನ್ನು ಸಬ್ 4 ಮೀಟರ್ ಉದ್ದ ಮಿತಿಯೊಳಗೆ ಆಗಮನವಾಗಲಿರುವುದರಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಇದು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರಕ್ಕೆ ಪರಿಚಯಿಸಲು ಸಹಕಾರಿಯಾಗಲಿದೆ.

ಮಹೀಂದ್ರ ವೆರಿಟೊ 'ವೈಬ್' ಹ್ಯಾಚ್‌ಬ್ಯಾಕ್ ಮೇ ತಿಂಗಳಲ್ಲಿ ಲಾಂಚ್

2012 ಆಗಸ್ಟ್ ತಿಂಗಳಲ್ಲಿ ಮಹೀಂದ್ರ ವೆರಿಟೊ ಪರಿಷ್ಕೃತ ಆವೃತ್ತಿ ಬಿಡುಗಡೆಗೊಳಿಸಲಾಗಿತ್ತು. ಇದು ಉತ್ತಮ ಮಾರುಕಟ್ಟೆ ಕಾಯ್ದುಕೊಂಡಿದ್ದರಿಂದ ಹ್ಯಾಚ್‌ಬ್ಯಾಕ್ ವರ್ಷನ್ ಬಿಡುಗಡೊಳಿಸಲು ಕಂಪನಿಗೆ ಪ್ರೇರಣೆಯಾಗಿತ್ತು.

ಮಹೀಂದ್ರ ವೆರಿಟೊ 'ವೈಬ್' ಹ್ಯಾಚ್‌ಬ್ಯಾಕ್ ಮೇ ತಿಂಗಳಲ್ಲಿ ಲಾಂಚ್

ಈ ಮೂಲಕ ಹೋಂಡಾ ಬ್ರಿಯೊ ಹಾಗೂ ಅಮೇಜ್, ಮಾರುತಿ ಸ್ವಿಫ್ಟ್ ಹಾಗೂ ಡಿಜೈರ್ ಅಂತೆಯೇ ಮಹೀಂದ್ರ ಕೂಡಾ ವೈಬ್ ಹಾಗೂ ವೆರಿಟೊ ಆವೃತ್ತಿಗಳನ್ನು ಹೊಂದಿದಂತಾಗುತ್ತದೆ.

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

More from DriveSpark

Article Published On: Sunday, April 14, 2013, 8:02 [IST]
English summary
Mahindra has officially announced the new sub 4 meter hatchback will be called Verito Vibe and will be launched in May.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+