ಬೆಂಗ್ಳೂರಿಗೂ ಎಂಟ್ರಿ ಕೊಟ್ಟ ವೈಬ್; ದರ ಎಷ್ಟು ಗೊತ್ತೇ?
ಮುಂಬೈನಲ್ಲಿ ಕಳೆದ ದಿನ ಭರ್ಜರಿ ಲಾಂಚ್ ಕಂಡಿದ್ದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ನೂತನ ವೆರೆಟೊ ವೈಬ್ ಕಾಂಪಾಕ್ಟ್ ಕಾರು ಇದೀಗ ಉದ್ಯಾನ ನಗರಿ ಬೆಂಗಳೂರಿಗೂ ಕಾಲಿಟ್ಟಿದೆ.
ಯಾವುದೇ ನೂತನ ಕಾರು ಲಾಂಚ್ ಆದಾಗ ದರದ ಬಗ್ಗೆ ತಿಳಿದುಕೊಳ್ಳುವುದು ಗ್ರಾಹಕರ ಕುತೂಹಲವಾಗಿರುತ್ತದೆ. ಇದರಂತೆ ವೆರಿಟೊ ವೈಬ್ ದರಗಳನ್ನು ನಾವಿಂದು ಬಹಿರಂಗಪಡಿಸಲಿದ್ದು, ಬೇಸ್ ಡಿ2 ಮಾದರಿಗೆ ಬೆಂಗಳೂರು ಎಕ್ಸ್ ಶೋ ರೂಂ ದರ 5.68 ಲಕ್ಷ ರು. ಹಾಗೂ ಟಾಪ್ ಎಂಡ್ ಡಿ6 ಮಾಡೆಲ್‌ನ ಎಕ್ಸ್ ಶೋ ರೂಂ ದರ 6.54 ಲಕ್ಷ ರು.ಗಳಾಗಿವೆ.
ಕಳೆದ ದಿನದ ಲೇಖನದಲ್ಲೇ ನಾವು ಮಹೀಂದ್ರ ವೈಬ್ ವೈಶಿಷ್ಟ್ಯಗಳ ಬಗ್ಗೆ ವಿವರಣೆ ಕೊಟ್ಟಿದ್ದೆವು. ಇದಕ್ಕಾಗಿ ಇಲ್ಲಿ ಕ್ಲಿಕ್ಕಿಸಿರಿ. ಸ್ಪರ್ಧಾತ್ಮಕ ದರಗಳಲ್ಲಿ ಆಗಮನವಾಗಿರುವುದು ಮಾರುಕಟ್ಟೆಯಲ್ಲಿ ಇತರ ಬ್ರಾಂಡ್‌ಗಳೊಂದಿಗೆ ಪೈಪೋಟಿ ನೀಡುವಲ್ಲಿ ಮಹೀಂದ್ರಗೆ ನೆರವಾಗಲಿದೆ.
ಮಹೀಂದ್ರ ವೆರಿಟೊ ವೈಬ್ ರೆನೊದ 1.5 ಲೀಟರ್ ಡಿಸಿಐ ಡೀಸೆಲ್ ಎಂಜಿನ್ (dCi diesel engine) ನಿಯಂತ್ರಿಸಲ್ಪಟ್ಟಿದ್ದು, ಎಆರ್‌ಎಐ ಮಾನ್ಯತೆ ಪ್ರಕಾರ ಪ್ರತಿ ಲೀಟರ್‌ಗೆ 20.8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸಬ್ ಫೋರ್ ಮೀಟರ್‌ನಲ್ಲಿ ಆಗಮನವಾಗಲಿರುವುದರಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.

ಇನ್ನು ಮಹೀಂದ್ರದಲ್ಲಿ ಚಾಲಕ ಮಾಹಿತಿ ವ್ಯವಸ್ಥೆ (Driver Information System) ಸೌಲಭ್ಯವಿದ್ದು, ಇದರ ನೆರವಿನಿಂದ ರಿಯಲ್ ಟೈಮ್‌ನಲ್ಲೇ ಮೈಲೇಜ್, ತಾಪಮಾನ, ದೂರ ಮುಂತಾದ ಅಗತ್ಯ ಮಾಹಿತಿಗಳು ಲಭಿಸಲಿದೆ.

ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಕಾರ್ಯನಿರ್ವಾಹಕ ಮುಖ್ಯಸ್ಥ ಪರ್ವಿನ್ ಸಿಂಗ್, ಮಹೀಂದ್ರ ವೈಬ್ ಭಾರತೀಯ ರಸ್ತೆಗಳಿಗೆ ಹೇಳಿಮಾಡಿಸಿದಂತಹ ಕಾರಾಗಿದ್ದು, ಗರಿಷ್ಠ ನಿರ್ವಹಣೆ, ಇಂಧನ ದಕ್ಷತೆ, ಸುರಕ್ಷತೆ, ಸ್ಥಳಾವಕಾಶ ಹಾಗೂ ಶೈಲಿಯನ್ನು ಹೊಂದಿದೆ ಎಂದಿದ್ದಾರೆ.

ವೆರಿಯಂಟ್ ಹಾಗೂ ಕಲರ್
ಒಟ್ಟು ಏಳು ಕಲರ್ ವೆರಿಯಂಟ್‌ಗಳಲ್ಲಿ ನೂತನ ವೆರಿಟೊ ವೈಬ್ ಆಗಮನವಾಗಿದೆ.
ವೆರಿಯಂಟ್ ಇಂತಿದೆ: D2, D4 ಹಾಗೂ D6

ವೆರಿಟೊ ವೈಬ್ ಒಳಗಡೆ ಹೆಚ್ಚಿನ ಸ್ಥಳಾವಕಾಶವಿದ್ದು ಹಿಂದುಗಡೆ ಸಾಲಿನಲ್ಲಿ ಮೂವರಿಗೆ ಆರಾಮದಾಯಕವಾಗಿ ಸಂಚರಿಸಬಹುದಾಗಿದೆ. ಸೀಟಿಗೆ ತಕ್ಕಂತೆ ಹೆಡ್ ರೆಸ್ಟ್ ಕೂಡಾ ಹೊಂದಾಣಿಸಬಹುದಾಗಿದೆ. ಹಾಗೆಯೇ 330 ಲೀಟರ್ ಬೂಟ್ ಸ್ಪೇಸ್ (ಲಗ್ಗೇಜ್) ಹೊಂದಿದೆ.

ಇನ್ನು ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್ ಜತೆ ಇಬಿಡಿ, ಎಂಜಿನ್ ಇಮ್‌ಮೊಬಿಲೈಜರ್, ಬದಿಗಳಲ್ಲಿ ಪ್ರಭಾವಿ ಬೀಮ್, ಎಲ್ಲ ಸೀಟುಗಳಿಗೂ ಹೊಂದಾಣಿಸಬಹುದಾದ ಹೆಡ್ ರೈಸ್ಟ್ ಹಾಗೂ ಡ್ರೈವರ್ ಏರ್ ಬ್ಯಾಗ್‌ಗಳಂತಹ ಫೀಚರ್‌ಗಳನ್ನು ಹೊಂದಿದೆ.

ಇದರ ಜತೆ ಹೊಸ ಫಾಗ್ ಲ್ಯಾಂಪ್, ರೂಫ್ ರೈಲ್, ಅಡ್ಡ ಲೋಹಲೇಪನ, ರಿಯರ್ ಕ್ರೋಮ್ ಅಪ್ಲಿಕ್ಯೂ, ಹೆಡ್ ಲ್ಯಾಂಪ್ ಹಾಗೂ ರಿಯರ್ ಸ್ಪಾಯ್ಲರ್‌ಗಳೊಂದಿಗೆ ವೈಶಿಷ್ಟ್ಯಗಳೊಂದಿಗೆ ಆಗಮನವಾಗಿದೆ.

ಮಹೀಂದ್ರ ವೆರಿಟೊ ವೈಬ್ ಸಂಪೂರ್ಣ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಈ ಲಿಂಕ್ ಕ್ಲಿಕ್ಕಿಸಿರಿ

Mahindra Verito Vibe Launched In Bangalore

Mahindra Verito Vibe Launched In Bangalore

Mahindra Verito Vibe Launched In Bangalore

Mahindra Verito Vibe Launched In Bangalore

Mahindra Verito Vibe Launched In Bangalore

ಬೆಂಗಳೂರಿನಲ್ಲೂ ಮಹೀಂದ್ರ ವೆರಿಟೊ ವೈಬ್ ಲಾಂಚ್

Click it and Unblock the Notifications