ಮಾರುತಿ ಸಿಯಾಝ್ ವೆರಿಯಂಟ್‌ಗಳೆಷ್ಟು? ಸೌಲಭ್ಯಗಳೇನು?
ದೀಪಾವಳಿ ಹಬ್ಬದ ಆವೃತ್ತಿಯ ಸಂಭ್ರಮದ ಅಂಗವಾಗಿ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ತನ್ನ ಜನಪ್ರಿಯ ಮಾದರಿಗಳನ್ನು ಪರಿಚಯಿಸಿರುವಂತೆಯೇ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಎಲ್ಲ ಹೊಸತನದಿಂದ ಕೂಡಿರುವ ಸಿಯಾಝ್ ಸೆಡಾನ್ ಕಾರಿನ ಪ್ರವೇಶವನ್ನು ವಾಹನ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮೈಲೇಜ್ (ಪ್ರತಿ ಲೀಟರ್‌ಗೆ)
ಪೆಟ್ರೋಲ್ - 20.7 ಕೀ.ಮೀ.
ಡೀಸೆಲ್ - 26.2 ಕೀ.ಮೀ.
ನಿರ್ಮಾಣ ಸ್ಥಗತಿಗೊಂಡಿರುವ ಎಸ್‌ಎಕ್ಸ್4 ಉತ್ತರಾಧಿಕಾರಿಯಾಗಿರುವ ಮಾರುತಿ ಸಿಯಾಝ್, ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಇದರಂತೆ ಈ ಮಿಡ್ ಸೈಜ್ ಕಾರು ಎಷ್ಟು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ ಹಾಗೂ ಅವುಗಳಲ್ಲಿರುವ ಸೌಲಭ್ಯಗಳ ಬಗ್ಗೆ ನಾವೀಗ ಚರ್ಚಿಸೋಣವೇ...

ನೂತನ ಮಾರುತಿ ಸಿಯಾಝ್ ಪೆಟ್ರೋಲ್ ಹಾಗೂ ಡೀಸೆಲ್‌ಗಳಲ್ಲಿ ತಲಾ ನಾಲ್ಕು ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ.

ವೆರಿಯಂಟ್
ಪೆಟ್ರೋಲ್ ವೆರಿಯಂಟ್ - ವಿಎಕ್ಸ್‌ಐ, ವಿಎಕ್ಸ್‌ಐ ಪ್ಲಸ್, ಝಡ್‌ಎಕ್ಸ್‌ಐ, ಝಡ್‌ಎಕ್ಸ್‌ಐ ಪ್ಲಸ್
ಡೀಸೆಲ್ ವೆರಿಯಂಟ್ - ವಿಡಿಐ, ವಿಡಿಐ ಪ್ಲಸ್, ಝಡ್‌ಡಿಐ, ಝಡ್‌ಡಿಐ ಪ್ಲಸ್

ಎಂಟ್ರಿ ಲೆವೆಲ್ ಸಿಯಾಝ್ ವಿಎಕ್ಸ್‌ಐ ಮತ್ತು ವಿಡಿಐ ವೆರಿಯಂಟ್
ಪ್ರೊಜೆಕ್ಟರ್ ಹೆಡ್‌ಲ್ಯಾಂಪ್,
ಕಿಲೆಸ್ ಎಂಟ್ರಿ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್‌ಸೈಡ್ ರಿಯರ್ ವ್ಯೂ ಮಿರರ್,
ವಿಂಗ್ ಮಿರರ್‌ನಲ್ಲಿ ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್, ಮ್ಯೂಸಿಕ್ ಪ್ಲೇಯರ್,
ಯುಎಸ್‌ಬಿ,
ಆಕ್ಸ್-ಇನ್,
ಕಾರ್ಡ್ ರೀಡರ್,
ಫ್ರಂಟ್ ಆಂಡ್ ರಿಯರ್ ಸೆಂಟರ್ ಆರ್ಮ್ ರೆಸ್ಟ್,
ಫ್ಯಾಬ್ರಿಕ್ ಅಪ್‌ಹೋಲ್‌ಸ್ಟ್ರೆ

ಮಿಡ್ ಲೆವೆಲ್ ಸಿಯಾಝ್ ವಿಎಕ್ಸ್‌ಐ ಪ್ಲಸ್ ಮತ್ತು ವಿಡಿಐ ಪ್ಲಸ್
ಚಾಲಕ ಬದಿಯ ಏರ್ ಬ್ಯಾಗ್,
ಎಬಿಎಸ್ ಜೊತೆ ಇಬಿಡಿ,
ಆಡಿಯೋ ಪ್ಲೇಯರ್ ಜೊತೆ ಬ್ಲೂಟತ್ ಕನೆಕ್ಟಿವಿಟಿ,
ಸ್ಟೀರಿಂಗ್ ಮೌಂಟೆಡ್ ಸ್ಟೀರಿಯೊ ಕಂಟ್ರೋಲ್,
ಎಸಿ ಜೊತೆ ಕ್ಲೈಮೇಟ್ ಕಂಟ್ರೋಲ್,
ರಿವರ್ಸ್/ಪಾರ್ಕಿಂಗ್ ಸೆನ್ಸಾರ್,
ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು

ಹೈಯರ್ ವೆರಿಯಂಟ್ - ಝಡ್‌ಎಕ್ಸ್‌ಐ ಮತ್ತು ಝಡ್‌ಡಿಐ
15 ಇಂಚಿನ ಅಲಾಯ್ ವೀಲ್,
ರಿಯರ್ ಸನ್‌ಶೇಡ್,
ಎಲೆಕ್ಟ್ರಿಕ್ ಔಟ್‌ಸೈಡ್ ಮಿರರ್,
ರಿವರ್ಸ್ ಕ್ಯಾಮೆರಾ,
ಕೀಲೆಸ್ ಎಂಟ್ರಿ ಆಂಡ್ ಗೊ,
ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ (ಚಾಲಕ ಮತ್ತು ಪ್ರಯಾಣಿಕರಿಗೆ),
ಫ್ಯಾಬ್ರಿಕ್ ಆಂಡ್ ಲೆಥರ್ ಅಪ್‌ಹೋಲ್‌ಸ್ಟ್ರೆ

ಟಾಪ್ ಎಂಡ್ ಝಡ್‌ಎಕ್ಸ್‌ಐ ಪ್ಲಸ್ ಮತ್ತು ಝಡ್‌ಡಿಐ ಪ್ಲಸ್
16 ಇಂಚಿನ ಅಲಾಯ್ ವೀಲ್,
ಸ್ಮಾರ್ಟ್ ಪ್ಲೇ ಮಾಹಿತಿ ಮನರಂಜನಾ ಸಿಸ್ಟಂ,
ಲೆಥರ್ ಅಪ್‌ಹೋಲ್‌ಸ್ಟ್ರೆ
ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್.

ಅಂದ ಹಾಗೆ ಮಾರುತಿ ಸಿಯಾಝ್, ಜನಪ್ರಿಯ ಎರ್ಟಿಗಾದಲ್ಲಿರುವುದಕ್ಕೆ ಸಮಾನವಾದ 1.4 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 91 ಬಿಎಚ್‌ಪಿ ಉತ್ಪಾದಿಸಲಿದೆ. ಅದೇ ರೀತಿ ಫಿಯೆಟ್‌ನಿಂದ ಆಮದು ಮಾಡಲಾದ 1.3 ಲೀಟರ್ ಡೀಸೆಲ್ ಎಂಜಿನ್ 89 ಅಶ್ವಶಕ್ತಿ ಉತ್ಪಾದಿಸಲಿದೆ. ಈ ಪೈಕಿ ಪೆಟ್ರೋಲ್ ಮೋಟಾರು, 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಅಂತೆಯೇ ಡೀಸೆಲ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

7ರಿಂದ 10 ಲಕ್ಷ ರು.ಗಳ ದರ ರೇಂಜ್‌ಗಳಲ್ಲಿ ಬಿಡುಗಯಾಗುವ ನಿರೀಕ್ಷೆಯನ್ನಿಟ್ಟುಕೊಂಡಿರುವ ಸಿಯಾಂದ್ ಪ್ರಮುಖವಾಗಿ ಹೋಂಡಾ ಸಿಟಿ, ಹ್ಯುಂಡೈ ವರ್ನಾ ಮತ್ತು ಈಗಷ್ಟೇ ಬಿಡುಗಡೆಯಾಗಿರುವ ಸ್ಕೋಡಾ ರಾಪಿಡ್ ಮತ್ತು ಫೋಕ್ಸ್‌ವ್ಯಾಗನ್ ವಂಟೊ ಪರಿಷ್ಕೃತ ಮಾದರಿಗಳಿಗೆ ಪ್ರತಿಸ್ಪರ್ಧೆಯಾಗಿರಲಿದೆ.


Click it and Unblock the Notifications








