ಮಾರುತಿ ಎರ್ಟಿಗಾ ಫೆಲಿಜ್ ವಿಶೇಷ ಆವೃತ್ತಿಯ ಜಲಕ್
ಮಾರುತಿ ಎರ್ಟಿಗಾ ಒಂದನೇ ವರ್ಷದ ಸಂಭ್ರಮದಲ್ಲಿರುವ ದೇಶದ ನಂ. 1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಮಾರುತಿ ಎರ್ಟಿಗಾ ಫೆಲಿಜ್ ವಿಶೇಷ ಆವೃತ್ತಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಈ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಇದೀಗ ಬಹಿರಂಗಪಡಿಸಲಾಗಿದೆ.
ಮಲ್ಟಿ ಪರ್ಪಸ್ ವೆಹಿಕಲ್ ಸೆಗ್ಮೆಂಟ್‌ನಲ್ಲಿ ಹೆಚ್ಚಿನ ಗಮನ ಸೆಳೆದಿದ್ದ ಎರ್ಟಿಗಾ, ಫಿಲಿಜ್ ಆವೃತ್ತಿ ಮೂಖಾಂತರ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಇರಾದೆಯಲ್ಲಿದೆ. VXi ಪೆಟ್ರೋಲ್ ಹಾಗೂ VDi ಡೀಸೆಲ್ ಆವೃತ್ತಿಗಳಲ್ಲಿ ನೂತನ ಫೆಲಿಜ್ ವಿಶೇಷ ಆವೃತ್ತಿ ಮಾರುಕಟ್ಟೆ ಪ್ರವೇಶಸಿದ್ದು ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಡೆ ಕೊಡಲಾಗಿದೆ.
- ಸಿಲ್ವರ್ ಫ್ರಂಟ್ ಗ್ರಿಲ್
- ಡೋರ್‌ಗಳಿಗೆ ಬಾಡಿ ಗ್ರಾಫಿಕ್ಸ್
- ಫಾಗ್ ಲ್ಯಾಂಪ್‌ಗಳಿಗೆ ಹಾಗೂ ಮಿರರ್‌ಗೆ ಸಿಲ್ವರ್ ಟಚ್
- ರಿಯರ್ ಸ್ಪಾಯ್ಲರ್
- ಇಂಟಿರಿಯರ್ ಸ್ಟೈಲಿಂಗ್ ಕಿಟ್
- ಬ್ಯಾಕ್ ಸೀಟ್ ಪಾಕೆಟ್
- ಸ್ಟೀರಿಂಗ್ ವೀಲ್ ಕವರ್
- ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಡಿಜಿಟಲ್ ಡಿಸ್‌ಪ್ಲೇ
- ನ್ಯೂ ಸೀಟ್ ಕವರ್, ಫೆಲಿಜ್ ಬ್ರಾಡಿಂಗ್
- ನ್ಯೂ ಡೋರ್ ಸಿಲ್ ಗಾರ್ಡ್
- ನ್ಯೂ ಫ್ಲೋರ್ ಮ್ಯಾಟ್

ಮಾರುಕಟ್ಟೆಯಲ್ಲಿ ನಿಕಟ ಪ್ರತಿಸ್ಪರ್ಧಿಗಳಿಂದ ಕಠಿಣ ಪೈಪೋಟಿ ಎದುರಾಗಿರುವುದರಿಂದಲೇ ಮಾರುತಿ ಎರ್ಟಿಗಾ ಫೆಲಿಜ್ ಲಾಂಚ್ ಮಾಡಲು ಮಾರುತಿ ಸುಜುಕಿ ನಿರ್ಧರಿಸಿತ್ತು.

ಇದೀಗಷ್ಟೇ ಲಾಂಚ್ ಆಗಿರುವ ಷೆವರ್ಲೆ ಎಂಜಾಯ್ ಹಾಗೂ ಮಹೀಂದ್ರ ಕ್ಸೈಲೋ ಎಚ್-ಸಿರೀಸ್ ಮಾರುತಿ ಎರ್ಟಿಗಾಗೆ ಸ್ಪರ್ಧೆ ಒಡ್ಡುತ್ತಿವೆ.

ಖಂಡಿತವಾಗಿಯೂ ನೂತನ ವಿಶೇಷ ಆವೃತ್ತಿ ಮೂಲಕ ಉತ್ತಮ ಮಾರಾಟ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಹೆಚ್ಚುವರಿ ಆಕರ್ಷಕ ಫೋಟೊಗಳಿಗಾಗಿ ಮುಂದಿನ ಬಟನ್ ಕ್ಲಿಕ್ಕಿಸುತ್ತಾ ಮುಂದಕ್ಕೆ ಸಾಗಿರಿ...

Maruti Ertiga Feliz special edition

Maruti Ertiga Feliz special edition

Maruti Ertiga Feliz special edition

Maruti Ertiga Feliz special edition

Maruti Ertiga Feliz special edition

Maruti Ertiga Feliz special edition



Click it and Unblock the Notifications








