ಮಾರುತಿ ಓಮ್ನಿ ಕೆಫೆ; ನಿಮ್ಮ ಫಾಸ್ಟ್ ಫುಡ್ ಎಂಜಾಯ್ ಮಾಡಿ!
ವಾಣಿಜ್ಯ ಹಾಗೂ ಪ್ರಯಾಣಿಕ ಅಗತ್ಯಗಳಿಗಾಗಿ ಏಕಕಾಲದಲ್ಲಿ ಬಳಕೆ ಮಾಡಬಹುದಾದ ವಾಹನವೆಂದರೆ ಅದುವೇ ಮಾರುತಿ ಓಮ್ನಿ. ಇದು ಸಣ್ಣ ಪುಟ್ಟ ವ್ಯಾಪಾರ ವಹಿವಾಟುಗಳಿಂದಾಗಿ ಜೀವನ ಸಾಗಿಸುವವರ ಜೀವಾನೋಪಾಯದ ಮಾರ್ಗವು ಆಗಿತ್ತು.
2014 ಆಟೋ ಎಕ್ಸ್ ಪೋ
ಅಷ್ಟೇ ಯಾಕೆ ಜೀವ ರಕ್ಷಕನಾಗಿಯೂ ಮಾರುತಿ ಓಮ್ನಿ 'ಆಂಬುಲೆನ್ಸ್' ರೂಪದಲ್ಲಿಯೂ ಕೆಲಸ ಮಾಡುತ್ತಿದೆ. ಹೀಗೆ ಹತ್ತು ಹಲವಾರು ರೂಪದಲ್ಲಿ ಜನಸಾಮಾನ್ಯರ ಕಾರೆನಿಸಿಕೊಂಡಿರುವ ಮಾರುತಿ ಓಮ್ನಿ ಇದೀಗ ಹೊಸ ರೂಪ ಪಡೆದುಕೊಳ್ಳುತ್ತಿದೆ.

ಭವಿಷ್ಯದಲ್ಲಿ ಮಾರುತಿ ಓಮ್ನಿ ಕೆಫೆ ನಿರ್ಣಾಯಕವೆನಿಸಲಿದೆ. ಇದೀಗ ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಪ್ರಸ್ತುತ ಕಾರು ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಹಾಗಿದ್ದರೂ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಮಾರುತಿ ಓಮ್ನಿ ಕಾರನ್ನು ಉತ್ಪಾದನೆಗೆ ತರುವ ಯಾವುದೇ ಯೋಜನೆಯನ್ನು ಮಾರುತಿ ಹೊಂದಿಲ್ಲ. ಪ್ರಸ್ತುತ ಸ್ಟ್ರೀಟ್ ಫುಡ್ ವ್ಯಾನ್ ಕಾನ್ಸೆಪ್ಟ್ ರೂಪದಲ್ಲಿ ಮಾರುತಿ ಓಮ್ನಿಯನ್ನು ಪರಿಚಯಿಸಲಾಗಿದೆ. ಇದು ನಿಮ್ಮ ಫಾಸ್ಟ್ ಫುಡ್ ಬಯಕೆಯನ್ನು ಈಡೇರಿಸಲಿದೆ.

ಹಾಗೊಂದು ವೇಳೆ ನೀವು ಸ್ವಂತ ವೆಚ್ಚದಲ್ಲಿ ಫಾಸ್ಟ್ ಫುಡ್ ಸೆಂಟರ್ ವ್ಯಾಪಾರ ಆರಂಭಿಸಲು ಯೋಜನೆಯಿದ್ದಲ್ಲಿ ಓಮ್ನಿ ಖರೀದಿಸಿ. ಚಿತ್ರದಲ್ಲಿ ತೋರಿಸಿರುವಂತೆಯೇ ಮೇಲೆ ಗ್ಯಾಸ್ ಸ್ಟೋವ್ ಹಾಗೆಯೇ ಕೆಳಗಡೆ ರೆಫ್ರಿಜರೇಟರ್ ಇಡಲು ವ್ಯವಸ್ಥೆ ಮಾಡಲಾಗಿದೆ.

ಇಲ್ಲಿ ಯಾವುದೇ ಮಾಲಿನ್ಯದ ದೋಷ ಕಾಡುವುದಿಲ್ಲ. ಯಾಕೆಂದರೆ ಎಲ್‌ಪಿಜಿ ಬದಲು ಎಲೆಕ್ಟ್ರಿಕ್ ಸ್ಟೋವ್ ಬಳಕೆ ಮಾಡಲಾಗುವುದು. ಇದರ ಹಿಂದುಗಡೆ ರಿಯರ್ ವಿಂಡೋ ವ್ಯವಸ್ಥೆಯಿರಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡಲು ಸಹಕಾರಿಯಾಗಲಿದೆ.


Click it and Unblock the Notifications








