ಬಹುನಿರೀಕ್ಷಿತ ಮಾರುತಿ ಸಿಯಾಝ್ ಭರ್ಜರಿ ಬಿಡುಗಡೆ
ಕಾರು ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ಮಾರುತಿ ಸಿಯಾಝ್, ಇಂದು (ಸೋಮವಾರ, ಅಕ್ಟೋಬರ್ 05, 2014) ದೇಶದ ಮಾರುಕಟ್ಟೆಗೆ ಅಧಿಕೃತ ಪ್ರವೇಶ ಪಡೆದಿದೆ.
ದೇಶದ ನಂ.1 ಕಾರು ತಯಾರಿಕ ಸಂಸ್ಥೆಯಿಂದ ಬಿಡುಗಡೆಯಾಗಿರುವ ಮಾರುತಿ ಸಿಯಾಝ್ ಮಿಡ್ ಸೈಜ್ ಸೆಡಾನ್ ಕಾರಿನ ಪ್ರಾರಂಭಿಕ ಬೆಲೆ 7.35 ಲಕ್ಷ ರು.ಗಳಾಗಿರಲಿದ್ದು, ಟಾಪ್ ಎಂಡ್ ವೆರಿಯಂಟ್ 10.21 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ (ಎಕ್ಸ್ ಶೋ ರೂಂ ಬೆಂಗಳೂರು) . ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಾರಂಭಿಕ ಬೆಲೆ 6.99 ಲಕ್ಷ ರು.ಗಳಾಗಿರಲಿದೆ.

ನಿರ್ಮಾಣ ಸ್ಥಗಿತಗೊಂಡಿರುವ ಎಸ್‌ಎಕ್ಸ್4 ಉತ್ತರಾಧಿಯಾಗಿಯಾಗಲಿರುವ ಹೊಸ ಸಿಯಾಝ್, ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಹೋಂಡಾ ಸಿಟಿ ಹಾಗೂ ಹ್ಯುಂಡೈ ವರ್ನಾ ಮಾದರಿಗಳ ಸ್ಪರ್ಧೆಯನ್ನು ಎದುರಿಸಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
ಪೆಟ್ರೋಲ್:
ವಿ - 7.35 ಲಕ್ಷ ರು.
ವಿ ಪ್ಲಸ್ - 7.92 ಲಕ್ಷ ರು.
ಝಡ್ - 8.62 ಲಕ್ಷ ರು.
ಝಡ್ (ಒ) - 8.98 ಲಕ್ಷ ರು.
ವಿ ಪ್ಲಸ್ ಆಟೋಮ್ಯಾಟಿಕ್ - 9.04 ಲಕ್ಷ ರು.
ಝಡ್ ಆಟೋಮ್ಯಾಟಿಕ್ - 9.74 ಲಕ್ಷ ರು.
ಡೀಸೆಲ್:
ವಿ - 8.42 ಲಕ್ಷ ರು.
ವಿ ಪ್ಲಸ್ - 9.02 ಲಕ್ಷ ರು.
ಝಡ್ - 9.85 ಲಕ್ಷ ರು.
ಝಡ್ (ಒ) - 10.21 ಲಕ್ಷ ರು.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಹೊಸ ಸಿಯಾಝ್ ಅನುಕ್ರಮವಾಗಿ ಪ್ರತಿ ಲೀಟರ್‌ಗೆ 20.7 ಹಾಗೂ 26.2 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಿರುವ ಹೊಸ ಸಿಯಾಝ್, ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪೆಟ್ರೋಲ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಇದು 1.4 ಲೀಟರ್ ಪೆಟ್ರೋಲ್ (91 ಅಶ್ವಶಕ್ತಿ) ಹಾಗೂ 1.3 ಲೀಟರ್ ಡೀಸೆಲ್ (89 ಅಶ್ವಶಕ್ತಿ) ಎಂಜಿನ್ ಪಡೆದುಕೊಂಡಿದೆ.


Click it and Unblock the Notifications








