ಹೋಂಡಾ ಸಿಟಿಗೆ ಸ್ಪರ್ಧೆ ಒಡ್ಡುವುದೇ ಮಾರುತಿ ಸಿಯಾಝ್?

By Nagaraja

ದೇಶದ ವಾಹನ ಪ್ರೇಮಿಗಳು ಕಾದು ಕುಳಿತಿರುವ ಆ ಕ್ಷಣ ಇನ್ನು ಕೆಲವೇ ದಿನಗಳಲ್ಲಿ ನನಸಾಗಲಿದೆ. ಹೌದು, ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸದ್ಯದಲ್ಲೇ ಸಿಯಾಝ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲಿದೆ.

ಇವನ್ನೂ ಓದಿ: ಮೈಲೇಜ್ ರಾಜ ಹೋಂಡಾ ಸಿಟಿ

ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ 2014 ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ. ಪ್ರಮುಖವಾಗಿಯೂ ಎಸ್‌ಎಕ್ಸ್4 ಸ್ಥಾನವನ್ನು ತುಂಬಲಿರುವ ಸಿಯಾಝ್ ಸೆಡಾನ್ ಕಾರು ಹಲವಾರು ಕಾರಣಗಳಿಂದಾಗಿ ಸಿಟಿಗೆ ನೇರ ಪ್ರತಿಸ್ಪರ್ಧೆ ಒಡ್ಡಲಿದೆ ಎಂಬುದು ತಜ್ಞರ ನಿರೀಕ್ಷೆ. ಈ ಎಲ್ಲ ನಿರೀಕ್ಷೆಗಳನ್ನು ಉಳಿಸಿಕೊಳ್ಳುವಲ್ಲಿ ದೇಶದ ಅತಿ ದೊಡ್ಡ ಕಾರು ಸಂಸ್ಥೆ ಯಶಸ್ವಿಯಾಗಲಿದೆಯೇ ಎಂಬುದು ಕುತೂಹಲದ ವಿಷಯ.

ಹೋಂಡಾ ಸಿಟಿಗೆ ಸ್ಪರ್ಧೆ ಒಡ್ಡುವುದೇ ಮಾರುತಿ ಸಿಯಾಝ್?

ಮುಂಭಾಗದಿಂದ ನೋಡಿದಾಗ ಶುಭ್ರವಾದ ನೋಟ ವಾಹನ ಪ್ರೇಮಿಗಳನ್ನು ಸಿಯಾಝ್ ಕೈಬೀಸಿ ತನ್ನತ್ತ ಕರೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಸಿಯಾಝ್ ಸೆಡಾನ್ ಕಾರು ತಲಾ ಮೂರು ಪೆಟ್ರೋಲ್ ಹಾಗೂ ಡೀಸೆಲ್ ಸೇರಿದಂತೆ ಆರು ವೆರಿಯಂಟ್‌ಗಳಲ್ಲಿ ಲಾಂಚ್ ಆಗಲಿದೆ. ಅವುಗಳೆಂದರೆ

ಪೆಟ್ರೋಲ್ - ವಿಎಕ್ಸ್‌ಐ, ವಿಎಕ್ಸ್‌ಐ ಪ್ಲಸ್ ಮತ್ತು ಝಡ್‌ಎಕ್ಸ್‌ಐ

ಡೀಸೆಲ್ - ವಿಡಿಐ, ವಿಡಿಐ ಪ್ಲಸ್ ಮತ್ತು ಝಡ್‌ಡಿಐ.

ಹೋಂಡಾ ಸಿಟಿಗೆ ಸ್ಪರ್ಧೆ ಒಡ್ಡುವುದೇ ಮಾರುತಿ ಸಿಯಾಝ್?

'ಸುಜುಕಿ ಆಂಥೇಟಿಕ್ಸ್ ಕಾನ್ಸೆಪ್ಟ್‌'ನಿಂದ ಸ್ಪೂರ್ತಿ ಪಡೆದು ಸಿಯಾಝ್ ವಿನ್ಯಾಸ ರಚಿಸಲಾಗಿದೆ. ಇದನ್ನು ಮೊದಲ ಬಾರಿಗೆ 2013 ಶಾಂಘೈ ಮೋಟಾರು ಶೋದಲ್ಲಿ ಪ್ರದರ್ಶಿಸಲಾಗಿತ್ತು.

ಹೋಂಡಾ ಸಿಟಿಗೆ ಸ್ಪರ್ಧೆ ಒಡ್ಡುವುದೇ ಮಾರುತಿ ಸಿಯಾಝ್?

ಹಿಂದಿನ ಎಸ್‌ಎಕ್ಸ್4 ಮಾದರಿಗೆ ಹೋಲಿಸಿದರೆ ಸಂಪೂರ್ಣ ನಾವೀನ್ಯತೆಯ ವಿನ್ಯಾಸವನ್ನು ಸಿಯಾಝ್ ಪಡೆದುಕೊಂಡಿದೆ. ಇದರ ಮೊನಾಚಾದ ರೇಖೆಯು ಸಮಕಾಲೀನ ಕಾರುಗಳೊಂದಿಗೆ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ.

ಹೋಂಡಾ ಸಿಟಿಗೆ ಸ್ಪರ್ಧೆ ಒಡ್ಡುವುದೇ ಮಾರುತಿ ಸಿಯಾಝ್?

ವರದಿಗಳ ಪ್ರಕಾರ ಮಾರುತಿ ಸಿಯಾಝ್ ಎಲ್ಲ ವೆರಿಯಂಟ್‌ಗಳಲ್ಲೂ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಸ್ಟಾಂಡರ್ಡ್ ವೈಶಿಷ್ಟ್ಯವಾಗಿ ಲಭ್ಯವಾಗಲಿದೆ.

ಹೋಂಡಾ ಸಿಟಿಗೆ ಸ್ಪರ್ಧೆ ಒಡ್ಡುವುದೇ ಮಾರುತಿ ಸಿಯಾಝ್?

ಇನ್ನು ಬೇಸ್ ವೆರಿಯಂಟ್‌ನಲ್ಲೇ ಎಸಿ ವೆಂಟ್ಸ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸೈಡ್ ವ್ಯೂ ಮಿರರ್, ಮ್ಯೂಸಿಕ್ ಸಿಸ್ಟಂ ಮತ್ತು ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಲಭ್ಯವಾಗಲಿದೆ.

ಹೋಂಡಾ ಸಿಟಿಗೆ ಸ್ಪರ್ಧೆ ಒಡ್ಡುವುದೇ ಮಾರುತಿ ಸಿಯಾಝ್?

ಅದೇ ರೀತಿ ಮಿಡ್ ವೆರಿಯಂಟ್, ಬೇಸ್ ವೆರಿಯಂಟ್ ಜೊತೆಗೆ ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ರಿವರ್ಸ್ ಪಾರ್ಕಿಂಕ್ ಸೆನ್ಸಾರ್ ಮತ್ತು ಎಬಿಎಸ್ ಸೌಲಭ್ಯಗಳನ್ನು ಪಡೆಯಲಿದೆ.

ಹೋಂಡಾ ಸಿಟಿಗೆ ಸ್ಪರ್ಧೆ ಒಡ್ಡುವುದೇ ಮಾರುತಿ ಸಿಯಾಝ್?

ಅಂತೆಯೇ ಟಾಪ್ ಎಂಡ್ ವೆರಿಯಂಟ್‌, ಡ್ಯುಯಲ್ ಏರ್ ಬ್ಯಾಗ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, 16 ಇಂಚಿನ ಅಲಾಯ್ ವೀಲ್, 5 ಇಂಚಿನ್ ಮಾಹಿತಿ ಮನರಂಜನಾ ಸಿಸ್ಟಂ ಮತ್ತು ಆಟೋಮ್ಯಾಟಿಕ್ ಡೇ/ನೈಟ್ ರಿಯರ್ ವ್ಯೂ ಮಿರರ್ ಪಡೆದುಕೊಳ್ಳಲಿದೆ.

ಹೋಂಡಾ ಸಿಟಿಗೆ ಸ್ಪರ್ಧೆ ಒಡ್ಡುವುದೇ ಮಾರುತಿ ಸಿಯಾಝ್?

ಅಂದ ಹಾಗೆ ಹೊಸ ಸಿಯಾಝ್‌ನಲ್ಲಿ 1.4 ಲೀಟರ್ ಕೆ14ಬಿ ಪೆಟ್ರೋಲ್ (94 ಬಿಎಚ್‌ಪಿ, 130 ಎನ್‌ಎಂ ಟಾರ್ಕ್) ಮತ್ತು 1.3 ಲೀಟರ್ ಡಿಡಿಐಎಸ್ ಡೀಸೆಲ್ (89 ಬಿಎಚ್‌ಪಿ, 200 ಎನ್‌ಎಂ ಟಾರ್ಕ್) ಹೊಂದಿರಲಿದೆ.

More from DriveSpark

Article Published On: Wednesday, September 3, 2014, 7:00 [IST]
English summary
Country's largest car maker Maruti has released the first set of images of the Ciaz sedan car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+