ಎರ್ಟಿಗಾ ವಾರ್ಷಿಕ ಆವೃತ್ತಿಯಲ್ಲಿ ಏನೆಲ್ಲ ವಿಶೇಷ ಇರಲಿದೆ?
ವರ್ಷಾಚರಣೆಯ ಸಂಭ್ರಮದಲ್ಲಿರುವ ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ ಸದ್ಯದಲ್ಲೇ ಆಗಮನವಾಗಲಿದೆ ಎಂಬುದರ ಬಗ್ಗೆ ನಾವು ಈಗಾಗಲೇ ವರದಿಯೊಂದನ್ನು ಪ್ರಕಟಿಸಿದ್ದೆವು. ಇದಕ್ಕೆ ಪೂರಕವೆಂಬಂತೆ ಹೊಸ ಆವೃತ್ತಿಯ ಹೆಚ್ಚಿನ ವಿವರವನ್ನು ನಾವೀಗ ನಿಮ್ಮ ಮುಂದಿಡಲಿದ್ದೇವೆ.
ಎರ್ಟಿಗಾ ಮಾಡೆಲ್ ಒಂದನೇ ವಸಂತದ ಸಂಭ್ರಮದಲ್ಲಿರುವ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ನೂತನ ಎರ್ಟಿಗಾ ಫೆಲಿಜ್ (Feliz) ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಈ ಮೂಖಾಂತರ ಲೈಫ್ ಯುಟಿಲಿಟಿ ವಾಹನವನ್ನು ಇನ್ನಷ್ಟು ಪ್ರೋತ್ಸಾಹಿಸುವ ಇರಾದೆಯನ್ನು ಕಂಪನಿ ಹೊಂದಿದೆ. ಹಾಗಿದ್ದರೂ ಕಾರಿನ ವೈಶಿಷ್ಟ್ಯಗಳ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರ ಬಂದಿಲ್ಲವಾದರೂ ನಿಕಟ ಮೂಲಗಳು ಈ ವಿಶೇಷ ವರದಿಯನ್ನು ನಿಮಗಾಗಿ ಹೊರತಂದಿದೆ.

ಮಾರುತಿ ಎರ್ಟಿಗಾ ಫೆಲಿಜ್
ಸಿಲ್ವರ್ ಕಲರ್ ಗ್ರಿಲ್, ಫಾಗ್ ಲ್ಯಾಂಪ್, ರಿಯರ್ ವ್ಯೂ ಮಿರರ್, ವಿಶೇಷ ಬಾಡಿ ಗ್ರಾಫಿಕ್ಸ್ ನೂತನ ಎರ್ಟಿಗಾ ಫೆಲಿಜ್ ಆಕರ್ಷಣೆಗೆ ಕಾರಣವಾಗಲಿದೆ.

ಮಾರುತಿ ಎರ್ಟಿಗಾ ಫೆಲಿಜ್
ಇನ್ನು ಕಾರಿನ ಆಂತರಿಕ ಭಾಗದಲ್ಲಿ ಸ್ಟೈಲಿಂಗ್ ಕಿಟ್ , ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಡಿಜಿಟಲ್ ಡಿಸ್‌ಪ್ಲೇ, ಸೀಟ್ ಕವರ್, ಕಾರು ಪಿಲ್ಲೋ, ಫಿಲಿಜ್ ಬ್ರಾಡಿಂಗ್, ಬ್ಯಾಕ್ ಪಾಕೆಟ್, ಸ್ಟೀರಿಂಗ್ ವೀಲ್ ಕವರ್, ಡೋರ್ ಸಿಲ್ ಗಾರ್ಡ್ ಹಾಗೂ ಫ್ಲೋರ್ ಮ್ಯಾಟ್ ಹೆಚ್ಚಿನ ಅಂದತೆ ಒದಗಿಸಲಿದೆ.

ಮಾರುತಿ ಎರ್ಟಿಗಾ ಫೆಲಿಜ್
ಹಾಗಿದ್ದರೂ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಕೆ ಸಿರೀಸ್ 1.4 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಟರ್ಬೊ ಡೀಸೆಲ್ ಯುನಿಟ್ ಹೊಂದಿರಲಿದೆ.

ಮಾರುತಿ ಎರ್ಟಿಗಾ ಫೆಲಿಜ್
ಅಂತೆಯೇ ಕಂಪನಿಯು ದರದ ವಿಚಾರವನ್ನು ಗೌಪ್ಯವಾಗಿರಿಸಿದೆ. ಮೂಲಗಳ ಪ್ರಕಾರ ಸಾಮಾನ್ಯ ಎರ್ಟಿಗಾ ವಿಎಕ್ಸ್‌ಐ ಆವೃತ್ತಿಗಿಂತಲೂ 15ರಿಂದ 20 ಸಾವಿರದಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಸದ್ಯ ಎರ್ಟಿಗಾ ವಿಎಕ್ಸ್‌ಐ ದೆಹಲಿ ಎಕ್ಸ್ ಶೋ ರೂಂ ದರ 6.70 ಲಕ್ಷ ರು.ಗಳಾಗಿವೆ.

ಮಾರುತಿ ಎರ್ಟಿಗಾ ಫೆಲಿಜ್
ಕಳೆದ ವರ್ಷ ಎಪ್ರಿಲ್‌ನಲ್ಲಿ ಮಾರುಕಟ್ಟೆಗೆ ಅಪ್ಪಳಿಸಿದ್ದ ಎರ್ಟಿಗಾ ಪ್ರತಿ ತಿಂಗಳು ಐದರಿಂದ ಆರುವರೆ ಸಾವಿರದಷ್ಟು ಯುನಿಟ್ ಮಾರಾಟ ಗಿಟ್ಟಿಸಿಕೊಳ್ಳುವ ಮೂಲಕ ಜನಪ್ರಿಯತೆ ಕಾಪಾಡಿಕೊಂಡಿದೆ. ಹಾಗೆಯೇ 2012-13ನೇ ಸಾಲಿನಲ್ಲಿ ಒಟ್ಟು 79,192 ಯುನಿಟ್‌ಗಳ ಮಾರಾಟ ಕಂಡಿದೆ.


Click it and Unblock the Notifications