ಇನ್ನಿಲ್ಲ ಮಾರುತಿ 800; ಐಕಾನಿಕ್ ಕಾರಿನ ಯುಗಾಂತ್ಯ
ಜನಸಾಮಾನ್ಯರ ಕಾರೇ ಎಂದೇ ಪ್ರಸಿದ್ಧಿ ಪಡೆದಿರುವ ಮಾರುತಿ 800 ಇನ್ನು ಮುಂದೆ ಖರೀದಿಗೆ ಸಿಗಲಾಗದು. ಹೌದು, ಈ ಐಕಾನಿಕ್ ಕಾರಿನ ಉತ್ಪಾದನೆಯನ್ನು ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಕೊನೆಗೊಳಿಸಿದೆ.
ದೇಶದ ಮಧ್ಯಮ ವರ್ಗದ ಕಾರು ಕನಸನ್ನು ನನಸಾಗಿದ್ದ ಮಾರುತಿ 800 ಬಿಡುಗಡೆಯಾದ ಕೆಲವೇ ವರ್ಷಗಳಲ್ಲೇ ಅತೀವ ಜನಪ್ರಿಯವಾಗಿತ್ತು. ಇದು ಭಾರತೀಯ ರಸ್ತೆ ಪರಿಸ್ಥಿತಿ ಹೊಂದಿಕೆಯಾದ ಅಪ್ಪಟ ಮಿಡಲ್ ಕ್ಲಾಸ್ ಕಾರಾಗಿತ್ತು.

ಇದೀಗ ಮಾರುತಿ 800 ಉತ್ಪಾದನೆಗೆ ತೆರೆ ಎಳೆದಿರುವ ಸಂಸ್ಥೆಯು, ದೇಶದ ಮಿಲಿಯನ್‌ಗಳಷ್ಟು ಕುಟುಂಬಗಳಿಗೆ ನೆಚ್ಚಿನ ಕಾರೆನಿಸಿಕೊಂಡಿತ್ತು.

ಹಾಗಿದ್ದರೂ ಮುಂದಿನ ಎಂಟು ಹತ್ತು ವರ್ಷಗಳ ವರೆಗೆ ಮಾರುತಿ 800 ಬಿಡಿಭಾಗಗಳು ಮಾರುಕಟ್ಟೆಯಲ್ಲಿ ದೊರಕಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾರುತಿ ಸಂಸ್ಥೆಯು, ಜನವರಿ 18ರಿಂದ ಮಾರುತಿ 800 ಉತ್ಪಾದನೆ ಸ್ಥಗಿತಗೊಂಡಿದೆ. ಆದರೆ ಗ್ರಾಹಕರ ಬೇಡಿಕೆಗಳಿನುಸಾರವಾಗಿ ಬಿಡಿಭಾಗಗಳನ್ನು ಪೂರೈಕೆ ಮಾಡಲಾಗುವುದು. ಇದು ನಮ್ಮ ಕರ್ತವ್ಯವೂ ಕೂಡಾ ಆಗಿದೆ ಎಂದಿದೆ.

1980ರ ದಶಕದ ಆರಂಭದಲ್ಲಿ ಲಾಂಚ್ ಆಗಿದ್ದ ಮಾರುತಿ 800 ದರವು 50,000 ರು.ಗಳಿಷ್ಟಿತ್ತು. ಹಾಗೆಯೇ ಇತ್ತೀಚಿನ ವರೆಗೂ ರು. 2.35 ರು.ಗಳಿಷ್ಟಿತ್ತು.

ಭಾರತದ ವಾಹನೋದ್ಯಮದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ಮಾರುತಿ 800 ಉತ್ಪಾದನೆ ಬೆಂಗಳೂರು, ಹೈದರಾಬಾದ್, ಪುಣೆ ಸೇರಿದಂತೆ 13 ನಗರಗಳಲ್ಲಿ ಸ್ಥಗಿತಗೊಂಡಿದೆ.

ದೇಶದ ಅತ್ಯಂತ ಜನಪ್ರಿಯ ಸಣ್ಣ ಕಾರುಗಳ ಪೈಕಿ ಮಾರುತಿ ಆಲ್ಟೊ 800 ಅಲ್ಲದೆ, ಟಾಟಾ ನ್ಯಾನೋ, ಫೋರ್ಡ್ ಫಿಗೊ ಹಾಗೂ ಹ್ಯುಂಡೈ ಐ10 ಕಾಣಿಸಿಕೊಂಡಿದೆ.


Click it and Unblock the Notifications








