ಎಲ್‌ಇಡಿ ಬೆಳಕು ಇಲ್ಲದ ಪರಿಷ್ಕೃತ ಮಾರುತಿ ಸ್ವಿಫ್ಟ್ ರಸ್ತೆಗೆ

By Nagaraja

ನಿರೀಕ್ಷೆಯಂತೆಯೇ ಬಹುನಿರೀಕ್ಷಿತ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಮಾದರಿಯು ದೇಶದ ರಸ್ತೆಗೆ ಪರಿಚಯವಾಗಿದೆ. ಆದರೆ ಎಲ್ಲ ವಾಹನ ಪ್ರೇಮಿಗಳು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್‌ನ ಕೊರತೆಯು ಹೊಸ ಸ್ವಿಫ್ಟ್ ಕಾರನ್ನು ಕಾಡುತ್ತಿದೆ.

ನಮ್ಮ ಹಿಂದಿನ ಸುದ್ದಿಗಳಲ್ಲಿ ಸ್ವಿಫ್ಟ್ ಎಲ್‌ಇಡಿ ಡೇ ಟೈಮ್ ಲೈಟ್ಸ್ ಪ್ರಮುಖ ಚರ್ಚಾ ವಿಷಯವಾಗಿತ್ತು. ದೇಶದ ಗ್ರಾಹಕರು ಸಹ ಪರಿಷ್ಕೃತ ಸ್ವಿಫ್ಟ್ ಕಾರಲ್ಲಿ ಇಂತಹದೊಂದು ವಿಶಿಷ್ಟತೆಯನ್ನು ನಿರೀಕ್ಷೆ ಮಾಡಿದ್ದರು. ಆದರೆ ಹೊಸ ಸ್ವಿಫ್ಟ್ ಕಾರಲ್ಲಿ ದೇಶದ ಅತ್ಯಂತ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯು ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಸೌಲಭ್ಯ ನೀಡದಿರುವುದು ನಿರಾಸೆಗೆ ಕಾರಣವಾಗಿದೆ.

ಹೊಸತೇನಿದೆ?

ಹೊಸತೇನಿದೆ?

ಅತ್ಯುತ್ತಮ ಇಂಧನ ಕ್ಷಮತೆಗಾಗಿ ಪರಿಷ್ಕೃತ ಸ್ವಿಫ್ಟ್ ಕಾರಿನ ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ.

ಪೆಟ್ರೋಲ್

1.2 ಲೀಟರ್ ಎಂಜಿನ್ ಹಿಂದಿಗಿಂತಲೂ ಕಡಿಮೆ ಶಕ್ತಿಶಾಲಿ (85.8 ಬಿಎಚ್‌ಪಿ ಬದಲು 83.1 ಬಿಎಚ್‌ಪಿ) ಎನಿಸಿದರೂ ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಬದ್ಧವಾಗಿದೆ. ಇದು ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾಹಿತಿ ಪ್ರಕಾರ ಪ್ರತಿ ಲೀಟರ್‌ಗೆ 20.4 ಕೀ.ಮೀ. ಮೈಲೇಜ್ (ಹಿಂದೆ 18.6 kmpl) ನೀಡಲಿದೆ.

ಡೀಸೆಲ್

ಡೀಸೆಲ್

ಇದರ 1.3 ಲೀಟರ್ ಡೀಸೆಲ್ ಎಂಜಿನ್ ಹಿಂದಿನ ಆವೃತ್ತಿಗೆ ಸಮಾನವಾದ ಅಶ್ವಶಕ್ತಿ (74 ಪಿಎಸ್) ಉತ್ಪಾದಿಸಲಿದೆ. ಹಾಗಿದ್ದರೂ ಘರ್ಷಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಂಜಿನ್ ಕಂಟ್ರೋಲ್ ಯುನಿಟ್‌ನಲ್ಲಿ (ಇಸಿಯು) ಗಮನಾರ್ಹ ಬದಲಾವಣೆ ತರಲಾಗಿದ್ದು, ಇದು ಶೇಕಡಾ 10ರಷ್ಟು ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಸಕ್ಷಮವಾಗಲಿದೆ. ಅಂದರೆ ಎಆರ್‌ಎಐ ಮಾನ್ಯತೆ ಪ್ರಕಾರ ಪ್ರತಿ ಲೀಟರ್‌ಗೆ 25.2 ಕೀ.ಮೀ. (ಹಿಂದಿನದು 22.9 kmpl) ಮೈಲೇಜ್ ನೀಡಲಿದೆ.

ಹೊರಮೈ

ಹೊರಮೈ

ಮುಂಭಾಗದಲ್ಲಿ ಪರಿಷ್ಕೃತ ಬಂಪರ್,

ದೊಡ್ಡದಾದ ಏರ್ ಡ್ಯಾಮ್, ಸಿಲ್ವರ್ ಅಸೆಂಟ್, ಫಾಗ್ ಲ್ಯಾಂಪ್ ಹೌಸಿಂಗ್,

ಹೊಸತಾದ ಹನಿಕಾಂಬ್ ಫ್ರಂಟ್ ಗ್ರಿಲ್,

ಹೊಸ ವಿನ್ಯಾಸದ ಅಲಾಯ್ ವೀಲ್ (ಟಾಪ್ ಎಂಡ್ ವೆರಿಯಂಟ್), ವೀಲ್ ಕ್ಯಾಪ್ (ಬೇಸ್ ಮತ್ತು ಮಿಡ್ ವೆರಿಯಂಟ್),

ಮೂರು ಹೊಸ ಬಣ್ಣಗಳು - ವೈಲಟ್, ರೆಡ್ ಮತ್ತು ಗ್ರೇ.

ವಿಶಿಷ್ಟತೆಗಳು

ವಿಶಿಷ್ಟತೆಗಳು

ಎಲ್‌ಎಕ್ಸ್‌ಐ, ಎಲ್‌ಡಿಐ ವೆರಿಯಂಟ್ - ಹೊಂದಾಣಿಸಬಹುದಾದ ಹೆಡ್ ರೆಸ್ಟ್, ಹಿಂದುಗಡೆ 60:40 ವಿಭಜಿತ ಸೀಟು,

ಹೊಸತಾಗಿ ಸೇರ್ಪಡೆಯಾದ ಎಲ್‌ಎಕ್ಸ್‌ಐ ಪ್ಲಸ್ ವೆರಿಯಂಟ್‌ನಲ್ಲೂ ಫ್ರಂಟ್ ಪವರ್ ವಿಂಡೋ ಮತ್ತು ರಿಮೋಟ್ ಲಾಕಿಂಗ್ ಸೌಲಭ್ಯ.

ವಿಎಕ್ಸ್‌ಐ, ವಿಡಿಐ - ಆಡಿಯೋ ಪ್ಲೇಯರ್, ವಿದ್ಯುನ್ಮಾನವಾಗಿ ಮಡಚಬಹುದಾದ ವಿಂಗ್ ಮಿರರ್ ಮತ್ತು ಎಬಿಎಸ್ (ವಿಡಿಐಗೆ ಮಾತ್ರ)

ಟಾಪ್ ಎಂಡ್ ಝಡ್‌ಎಕ್ಸ್‌ಐ, ಝಡ್‌ಡಿಐ ವೆರಿಯಂಟ್‌ಗಳಲ್ಲಿ ರಿಮೋಟ್ ಲಾಕಿಂಗ್, ಪುಶ್ ಬಟನ್ ಸ್ಟಾರ್ಟ್, ಬ್ಲೂಟೂತ್, ಆಡಿಯೋ ಪ್ಲೇಯರ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯ.

ದರ ಮಾಹಿತಿ (ಎಕ್ಸ್‌ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್‌ ಶೋ ರೂಂ ದೆಹಲಿ)

ವೆರಿಯಂಟ್ (ಬೆಲೆ ಲಕ್ಷ ರು.ಗಳಲ್ಲಿ)

ಎಲ್‌ಎಕ್ಸ್‌ಐ - 4.42

ಎಲ್‌ಎಕ್ಸ್‌ಐ (ಒ) - 4.49

ವಿಎಕ್ಸ್‌ಐ - 5.08

ಝಡ್‌ಎಕ್ಸ್‌ಐ - 5.90

ಎಲ್‌ಡಿಐ - 5.56

ವಿಡಿಐ - 6

ಝಡ್‌ಡಿಐ - 6.95

More from DriveSpark

Article Published On: Tuesday, October 28, 2014, 17:50 [IST]
English summary
Maruti Suzuki India has silently launched the facelift version of its popular Swift hatchback at a starting price of Rs. 4.42 lakh (ex-showroom, Delhi). The new 2014 Maruti Suzuki Swift gets some minor cosmetic, feature and mechanical updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+