ಹೊಸ ಡೀಸೆಲ್ ಎಂಜಿನ್‌ನೊಂದಿಗೆ ಸ್ವಿಫ್ಟ್ ಮರು ಎಂಟ್ರಿ
ಪ್ರತಿ ಬಾರಿವೂ ದೇಶದ ಅತ್ಯಂತ ಜನಪ್ರಿಯ ಕಾರಾದ ಸ್ವಿಫ್ಟ್ ಬಗ್ಗೆ ಮಾತನಾಡುವಾಗ ಗ್ರಾಹಕರು ಅದನ್ನು ಕುತೂಹಲದಿಂದ ಎದುರು ನೋಡುತ್ತಾರೆ. ಹೌದು, ಇತ್ತೀಚೆಗಷ್ಟೇ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿದ್ದ ಸ್ವಿಫ್ಟ್ ಫೇಸ್‌ಲಿಫ್ಟ್ ಶೀಘ್ರದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವುದು ಭಾರಿ ಸುದ್ದಿಯಾಗಿತ್ತು.
ಇದರ ಬೆನ್ನಲ್ಲೇ ನೂತನ ಸ್ವಿಫ್ಟ್‌ನಲ್ಲಿ ಆಳವಡಿಕೆಯಾಗಲಿರುವ ಹೊಸ ವೈಶಿಷ್ಟ್ಯಗಳ ಹಾಗೂ ನೂತನ ಎಂಜಿನ್ ಬಗ್ಗೆ ಮಾಹಿತಿಗಳು ಬಂದಿವೆ. ಇದು ಸ್ವಿಫ್ಟ್ ಬಗೆಗಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿವೆ.
ಬಿ ಪ್ಲಸ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟಗೊಂಡಿರುವ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಿಫ್ಟ್, ಪ್ರತಿ ತಿಂಗಳು 15,000 ಯುನಿಟ್‌ಗಳಷ್ಟು ಸರಾಸರಿ ಮಾರಾಟವನ್ನು ಕಂಡುಕೊಳ್ಳುತ್ತಿದೆ.

ನೂತನ ಎಂಜಿನ್
ವಾಹನೋದ್ಯಮ ಮೂಲಗಳ ಪ್ರಕಾರ ನೂತನ ಡೀಸೆಲ್ ಎಂಜಿನ್ ಅಭಿವೃದ್ಧಿಯಲ್ಲಿ ತೊಡಗಿರುವ ಕಂಪನಿಯು, ಸ್ವಿಫ್ಟ್‌ನಲ್ಲಿ 1.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಳವಡಿಸಲಿದೆ.

ಫಿಯೆಟ್ ಎಂಜಿನ್ ಗುಡ್ ಬೈ
ಈ ಮೂಲಕ ಕಳೆದ ಹಲವಾರು ವರ್ಷಗಳಿಂದ ಫಿಯೆಟ್‌ನಿಂದ ಆಮದು ಮಾಡಿಕೊಂಡು ಬರುತ್ತಿದ್ದ ಮಲ್ಟಿಜೆಟ್ ಡೀಸೆಲ್ ಎಂಜಿನ್‌ಗೆ ಗುಡ್ ಬೈ ಹೇಳಲು ಮಾರುತಿ ಬಯಸುತ್ತಿದೆ.

ನೂತನ ಎಂಜಿನ್ ಕಾರ್ಯಕ್ಷಮತೆ
ಹೆಚ್ಚು ಶಕ್ತಿಶಾಲಿ ಜತೆಗೆ ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ನೂತನ ಎಂಜಿನ್ ಸಕ್ಷಮವೆನಿಸಲಿದೆ. ಹಾಗೆಯೇ 1.2, 1.4 ಹಾಗೂ 1.6 ಲೀಟರುಗಳಲ್ಲಿ ನೂತನ ಟರ್ಬೊ ಡೀಸೆಲ್ ಎಂಜಿನ್ ಆಗಮನವಾಗಲಿದೆ.

ವೈಶಿಷ್ಟ್ಯಗಳೇನು?
ಇದರ ಜತೆಗೆ ಸ್ವಿಫ್ಟ್ ಹೊಸ ಆವೃತ್ತಿಯು ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಜತೆಗೆ ಫುಶ್ ಬಟನ್ ಸ್ಟಾರ್ಟ್‌ಗಳಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಮೇಲೆ ತಿಳಿಸಿದ ಬದಲಾವಣೆಗಳ್ನು ಸ್ವಿಫ್ಟ್ ಜಾಗತಿಕ ಎಡಿಷನ್ ಈಗಾಗಲೇ ಪಡೆದುಕೊಂಡಿದೆ. ಹಾಗಾಗಿ ಸದ್ಯದಲ್ಲೇ ಭಾರತ ವರ್ಷನ್ ಸಹ ಹೆಚ್ಚು ಗ್ರಾಹಕ ಸ್ನೇಹಿ ಎನಿಸಿಕೊಳ್ಳಲಿದೆ.

ಇತರ ವೈಶಿಷ್ಟ್ಯ
ಇದರ ಜತೆಗೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳಂತಹ ಫೀಚರ್‌ಗಳನ್ನು ಪಡೆದುಕೊಳ್ಳಲಿದೆ. ಈ ಎಲ್ಲ ಬದಲಾವಣೆಗಳು ಸ್ವಿಫ್ಟ್ ಕಾರನ್ನು ನೂತನ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.


Click it and Unblock the Notifications








