ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

By Nagaraja

ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಸ್ವಿಫ್ಟ್ ಮಾದರಿಯ ವಿಶೇಷ ಆವೃತ್ತಿಯೊಂದನ್ನು ಲಾಂಚ್ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಸ್ವಿಫ್ಟ್ ಎಕ್ಸ್‌ಡಿಐ ಸ್ಪೆಷಲ್ ಎಡಿಷನ್ ರಾಜಸ್ತಾನ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರಲಿದೆ. ಇದು ಕಾರು ಪ್ರಿಯರ ನಿರಾಸೆಗೆ ಕಾರಣವಾಗಿದ್ದರೂ ನಿಕಟ ಭವಿಷ್ಯದಲ್ಲೇ ದೇಶದ ಇತರ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಎಲ್‌ಎಕ್ಸ್‌ಐ ಮತ್ತು ಎಲ್‌ಡಿಐ ವೆರಿಯಂಟ್ ತಲಹದಿಯಲ್ಲಿ ವಿಶೇಷ ಎಕ್ಸ್‌ಡಿಐ ವೆರಿಯಂಟ್ ರೂಪಿಸಲಾಗಿದ್ದು ಇದು ಅನೇಕ ವಿನೂತನ ಫೀಚರುಗಳನ್ನು ಹೊಂದಿರಲಿದೆ. ನೂತನ ಎಕ್ಸ್‌ಡಿಐ ವಿಶೇಷ ಆವೃತ್ತಿಯು ಫ್ರಂಟ್ ಫಾಗ್ ಲೈಟ್ ಜತೆಗೆ ವಿಂಗ್ ಮಿರರ್‌ನಲ್ಲಿ ಸಂಯೋಜಿತ ಟರ್ನ್ ಇಂಡಿಕೇಟರ್ ಪಡೆದುಕೊಂಡಿದೆ. ಹಾಗೆಯೇ ಈ ಪ್ಯಾಕೇಜ್‌ನ ಭಾಗವಾಗಿ ಸಂಪೂರ್ಣ ವೀಲ್ ಕವರ್ ಸಹ ಆಫರ್ ಮಾಡಲಾಗುತ್ತಿದೆ.

ಕಾರಿನ ಒಳಗಡೆ 2 ಸ್ಪೀಕರ್ ಜತೆಗೆ 2 ಡಿನ್ ಮ್ಯೂಸಿಕ್ ಸಿಸ್ಟಂ, ಲೆಥರ್ ಸೀಟು ಕವರ್, ಸೆಂಟ್ರಲ್ ಲಾಕಿಂಗ್ ಮತ್ತು ಕೀಲೆಸ್ ಎಂಟ್ರಿ, ಫ್ರಂಟ್ ಪವರ್ ವಿಂಡೋ, ರಿಯರ್ ಪಾರ್ಕಿಂಗ್ ಸೆನ್ಸಾರ್, ಡೋರ್ ಸಿಲ್ ಗಾರ್ಡ್ ಜತೆಗೆ ಸ್ವಿಫ್ಟ್ ಲೊಗೊಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ನೀವು ರು. 40,000 ಹೆಚ್ಚು ಪಾವತಿಸಲು ತಯಾರಾಗಿದ್ದರೆ ಫಾಗ್ ಲೈಟ್, ಸೆಂಟ್ರಲ್ ಲಾಕಿಂಗ್ ಮತ್ತು ಫ್ರಂಟ್ ವೀಲ್ ವಿಂಡೋ ವೈಶಿಷ್ಟ್ಯಗಳ ಸೌಲಭ್ಯವನ್ನು ಪಡೆಯಬಹುದಾಗಿದೆ. ಸಾಮಾನ್ಯ ಎಲ್‌ಎಕ್ಸ್‌ಐ ದರ 5.06 ಲಕ್ಷ ರು.ಗಳಾಗಿವೆ. ಹಾಗೆಯೇ ಸ್ವಿಫ್ಟ್ ಡೀಸೆಲ್ ಎಲ್‌ಡಿಐ ದರ 6.26 ಲಕ್ಷ ರು.ಗಳಾಗಿವೆ.

ದರ ಮಾಹಿತಿ

ದರ ಮಾಹಿತಿ

  • ಎಕ್‌ಡಿಐ ಪೆಟ್ರೋಲ್: 5.44 ಲಕ್ಷ ರು.
  • ಎಕ್‌ಡಿಐ ಡೀಸೆಲ್: 6.67 ಲಕ್ಷ ರು.
  • ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ಡಬಲ್ ಡಿನ್ ಮ್ಯೂಸಿಕ್ ಸಿಸ್ಟಂ

    ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ಲೆಥರ್ ಆರ್ಟ್ ಸೀಟ್ ಕವರ್

    ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ಸೆಂಟ್ರಲ್ ಲಾಕಿಂಗ್ ಜತೆ ಕೀಲೆಸ್ ಎಂಟ್ರಿ

    ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ಹೊಂದಾಣಿಸಬಹುದಾದ ಸ್ಟೀರಿಂಗ್ ವೀಲ್

    ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ಒಆರ್‌ವಿಎಂ ಜತೆ ಸೈಡ್ ಇಂಡಿಕೇಟರ್

    ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ಫುಲ್ ವೀಲ್ ಕ್ಯಾಪ್

    ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ಫ್ರಂಟ್ 2 ಡೋರ್ ಪವರ್ ವಿಂಡೋಸ್

    ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ರಿವರ್ಸ್ ಪಾರ್ಕಿಂಗ್ ಅಸಿಸ್ಟ್

    ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ಫ್ರಂಟ್ ಫಾಗ್ ಲ್ಯಾಂಪ್

    ಜನಪ್ರಿಯ ಮಾರುತಿ ಸ್ವಿಫ್ಟ್ ವಿಶೇಷ ಆವೃತ್ತಿ ಲಾಂಚ್

    ಡೋರ್ ಸಿಲ್ ಗಾರ್ಡ್ ಜತೆ ಇಲ್ಯೂಮಿನೇಷನ್

    ಇತರ ವೈಶಿಷ್ಟ್ಯಗಳು

    ಇತರ ವೈಶಿಷ್ಟ್ಯಗಳು

    • ಪಾರ್ಸೆಲ್ ಟ್ರೇ
    • ಹೆಡ್ ಲೈಟ್ - ಆನ್ ರಿಮೈಂಡರ್
    • ಪವರ್ ಸ್ಟೀರಿಂಗ್
    • ಬಾಡಿ ಸೈಡ್ ಮೋಲ್ಡಿಂಗ್
    • ಟು ಸ್ಪೀಕರ್
    • ರಿಯರ್ ಆಂಟೆನಾ ಇತ್ಯಾದಿ...

More from DriveSpark

Article Published On: Thursday, September 19, 2013, 12:52 [IST]
English summary
The Maruti Swift XDi Edition has been launched. Do take note that this special edition seems to have been launched only in Rajasthan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+