ಮಿಟ್ಸುಬಿಸಿ ಪಜೆರೊ ಎಸ್‌ಯುವಿ ವಾರ್ಷಿಕ ಎಡಿಷನ್ ಎಂಟ್ರಿ
ನಿಮ್ಮಲ್ಲಿ ಎಷ್ಟು ಮಂದಿಗೆ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಎಸ್‌ಯುವಿ ಕಾರಿನ ಬಗ್ಗೆ ಗೊತ್ತು?. ಈ ಕ್ರೀಡಾ ಬಳಕೆಯ ವಾಹನ ಭಾರತದಲ್ಲಿ ಒಂದು ಯಶಸ್ವಿ ವರ್ಷವನ್ನು ಪೂರ್ಣಗೊಳಿಸಿದೆ.
ಈ ಯಶಸ್ಸನ್ನು ಸಂಭ್ರಮಿಸಲು ಜಪಾನ್ ವಾಹನ ತಯಾರಕ ಕಂಪನಿಯಾದ ಮಿಟ್ಸುಬಿಸಿ ವಾರ್ಷಿಕ ಎಡಿಷನ್‌ವೊಂದನ್ನು ಬಿಡುಗಡೆಗೊಳಿಸಿದೆ. ನೂತನ ಪಜೆರೊ ಸ್ಪೋರ್ಟ್ ವಾರ್ಷಿಕ ಎಡಿಷನ್ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಆಗಮನವಾಗಿದೆ. ಗ್ರಾಹಕರಿಂದ ದೊರಕಿರುವ ಉತ್ತಮ ಪ್ರತಿಕ್ರಿಯೆಯ ಭಾಗವಾಗಿ ಪಜೆರೊ ಕ್ರೀಡಾ ಎಡಿಷನ್ ಲಾಂಚ್ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರಮುಖ ವೈಶಿಷ್ಟ್ಯಗಳು
ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ
ಜಿಪಿಎಸ್ ನೇವಿಗೇಷನ್
ರಿಯರ್ ವ್ಯೂ ಕ್ಯಾಮೆರಾ

ಪ್ರಮುಖ ವೈಶಿಷ್ಟ್ಯಗಳು
ಸ್ಪೋರ್ಟಿ ರಿಯರ್ ಸ್ಪಾಯ್ಲರ್
ಬಾಡಿ ಕಲರ್ ಬಂಪರ್
ಮಡ್ ಗಾರ್ಡ್
ವಿಶೇಷವಾದ ವಾರ್ಷಿಕ ಎಡಿಷನ್ ಲೊಗೊ

ಎಂಜಿನ್
2.5 ಲೀಟರ್ ಎಂಜಿನ್ 175 ಅಶ್ವಶಕ್ತಿ ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಚೆನ್ನೈನಲ್ಲಿ ನೆಲೆಗೊಂಡಿರುವ ಹಿಂದೂಸ್ತಾನ್ ಮೋಟಾರ್ಸ್ ಘಟಕದಲ್ಲಿ ಪಜೆರೊ ಸ್ಪೋರ್ಟ್ ತಯಾರಿಯಾಗಲಿದೆ.

ದರ ಮಾಹಿತಿ
ಪಜೆರೊ ಸ್ಪೋರ್ಟ್ ವಾರ್ಷಿಕ ಎಡಿಷನ್ ದೆಹಲಿ ಎಕ್ಸ್ ಶೋ ರೂಂ ದರ 23.56 ಲಕ್ಷ ರು.


Click it and Unblock the Notifications








