ನಿಸ್ಸಾನ್ ಟೆರನೊ ವೆರಿಯಂಟ್ ವಿವರ ಸೋರಿಕೆ
ಈ ಮೊದಲು ತಿಳಿಸಿರುವಂತೆಯೇ ನಿಸ್ಸಾನ್ ಟೆರನೊ ಅಧಿಕೃತ ಬುಕ್ಕಿಂಗ್ ಸೆಪ್ಟೆಂಬರ್ 1ರಿಂದ ಆರಂಭವಾಗಿದೆ. ಈಗಾಗಲೇ ಅದ್ಧೂರಿಯಾಗಿ ಅನವಾರಣಗೊಂಡಿರುವ ರೆನೊ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡಿರುವ ಈ ಕಾಂಪಾಕ್ಟ್ ಎಸ್‌ಯುವಿ ಕಾರು ಮುಂದಿನ ತಿಂಗಳಾರಂಭದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಲಿದ್ದು, ಇದರಂತೆ ವೆರಿಯಂಟ್ ಜತೆಗೆ ಇತರ ಮಹತ್ವದ ವಿವರಗಳು ಹೊರಬಂದಿವೆ.
ಫೋರ್ ವೀಲ್ ಡ್ರೈವ್.. ?
ವಾಹನ ಪ್ರಿಯರು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದ ನಿಸ್ಸಾನ್ ಫೋರ್ ವೀಲ್ ಡ್ರೈವ್ ಆಪ್ಷನ್ ಸದ್ಯಕ್ಕೆ ಅಲಭ್ಯವಾಗಿದೆ. ಇದು ಗ್ರಾಹಕರನ್ನು ನಿರಾಸೆಗೊಳಪಡಿಸಿದೆ. ಹಾಗಿದ್ದರೂ ಮುಂದಿನ ದಿನಗಳಲ್ಲಿ ಕಂಪನಿ ಇದಕ್ಕೆ ಫೋರ್ ವೀಲ್ ಡ್ರೈವ್ ಪರಿಚಯಿಸಿದ್ದಲ್ಲಿ ಅಚ್ಚರಿಯೇನಿಲ್ಲ.
ಡಸ್ಟರ್‌ಗೆ ಸಮಾನವಾದ ವೆರಿಯಂಟ್...
ನಿರೀಕ್ಷೆಯಂತೆಯೇ ನಿಸ್ಸಾನ್ ಟೆರನೊದಲ್ಲೂ ಡಸ್ಟರ್‌ಗೆ ಸಮಾನವಾದ ವೆರಿಯಂಟ್‌ಗಳು ಪರಿಚಯವಾಗಿದೆ. ಹಾಗಿದ್ದರೂ ಡಸ್ಟರ್‌ನಲ್ಲಿರುವ 8 ವೆರಿಯಂಟ್‌ಗಳಿಗೆ ಬದಲಿಯಾಗಿ ಇಲ್ಲಿ ಕೇವಲ 7 ವೆರಿಯಂಟ್‌ಗಳು ಮಾತ್ರ ಕಾಣಸಿಗಲಿದೆ. ಅಂದರೆ ಡಸ್ಟರ್ ಬೇಸ್ ಪೆಟ್ರೋಲ್ ವೆರಿಯಂಟ್ ಟೆರನೊದಲ್ಲಿ ಲಭ್ಯವಾಗಿರಲ್ಲ.

ಅತ್ಯುತ್ತಮ ವೈಶಿಷ್ಟ್ಯ...
ಇನ್ನು ಡಸ್ಟರ್‌ಗೆ ಹೋಲಿಸಿದರೆ ಟೆರನೊದ ಎಲ್ಲ ವೆರಿಯಂಟ್‌ಗಳು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಎಲ್ಲ ವೆರಿಯಂಟ್‌ಗಳ ಸಂಪೂರ್ಣ ವಿವರಗಳಿಗಾಗಿ ಮುಂದಿನ ಸ್ಲೈಡರ್‌ನತ್ತ ಮುಂದುವರಿಯಿರಿ...

ದರ ಮಾಹಿತಿ...
ಇನ್ನು ದರದ ಬಗ್ಗೆ ಮಾತನಾಡುವುದಾದರೆ ನೂತನ ಟೆರನೊ ಡಸ್ಟರ್‌ಗಿಂತಲೂ 50,000 ರು.ಗಳಷ್ಟು ದುಬಾರಿಯಾಗಲಿದೆ. ಅಂದರೆ ಎಂಟು ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಸದ್ಯ ಟೆರನೊ ಪೆಟ್ರೋಲ್‌ನಲ್ಲಿ ಏಕಮಾತ್ರ ವೆರಿಯಂಟ್ ಲಭ್ಯವಿರಲಿದೆ.

ಎಂಜಿನ್ ಮಾಹಿತಿ
1.5 ಲೀಟರ್ ಕೆ9ಕೆ ಟರ್ಬೊ ಡೀಸೆಲ್ ಎಂಜಿನ್ (85 ಪಿಎಸ್ ಪವರ್, 200 ಎನ್‌ಎಂ ಟಾರ್ಕ್, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಮತ್ತು (110 ಪಿಎಸ್ ಪವರ್, 248 ಎನ್‌ಎಂ ಟಾರ್ಕ್, 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್)

ಡೀಸೆಲ್ ವೆರಿಯಂಟ್ಸ್
ಒಟ್ಟು ಆರು ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯ- ಎಕ್ಸ್‌ಇ, ಎಕ್ಸ್‌ಎಲ್, ಎಕ್ಸ್‌ಎಲ್ (6 ಸ್ಪೀಡ್), ಎಕ್ಸ್‌ಎಲ್ ಪ್ಲಸ್, ಎಕ್ಸ್‌ವಿ (6 ಸ್ಪೀಡ್) ಮತ್ತು ಎಕ್ಸ್ ಪ್ರೀಮಿಯಂ (6 ಸ್ಪೀಡ್)

1.5 ಲೀಟರ್ ಪೆಟ್ರೋಲ್ ಎಂಜಿನ್
104 ಪಿಎಸ್ ಪವರ್ ಮತ್ತು 140 ಎನ್‌ಎಂ ಟಾರ್ಕ್
ಪೆಟ್ರೋಲ್ ವೆರಿಯಂಟ್- ಎಕ್ಸ್‌ಎಲ್ (5 ಸ್ಪೀಡ್)

ಎಕ್ಸ್‌ಇ ಡೀಸೆಲ್ (ಬೇಸ್ ವೆರಿಯಂಟ್)
ಡ್ರೈವರ್ ಏರ್‌ಬ್ಯಾಗ್, ಫ್ರಂಟ್ ಮತ್ತು ರಿಯರ್ ಪವರ್ ವಿಂಡೋಸ್ ಮತ್ತು ಬಹು ಮಾಹಿತಿ ಪರದೆ.

ಎಕ್ಸ್‌ಎಲ್ ಡೀಸೆಲ್
ಎಬಿಎಸ್, ಇಬಿಡಿ, ಬಿಎ, 2 ಡಿನ್ ಆಡಿಯೋ ಸಿಸ್ಟಂ ಜತೆ ಸಿಡಿ/ಎಂಪಿ3, ಯುಎಸ್‌ಬಿ ಮತ್ತು ಬ್ಲೂಟೂತ್, ಫ್ರಂಟ್ ಫಾಗ್ ಲ್ಯಾಂಪ್, ಪಿಯಾನೊ ಬ್ಲ್ಯಾಕ್ ಫ್ರಂಟ್ ಕನ್ಸೋಲ್ ಫಿನಿಶ್.

ಎಕ್ಸ್‌ಎಲ್ ಪೆಟ್ರೋಲ್
ಎಬಿಎಸ್, ಇಬಿಡಿ, ಬಿಎ, ಪಿಯಾನೊ ಬ್ಲ್ಯಾಕ್ ಫ್ರಂಟ್ ಕನ್ಸೋಲ್ ಫಿನಿಶ್, ಫ್ರಂಟ್ ಫಾಗ್ ಲ್ಯಾಂಪ್, ಆಡಿಯೋ ಸಿಸ್ಟಂ ಜತೆ ಸಿಡಿ/ಎಂಪಿ3, ಯುಎಸ್‌ಬಿ ಮತ್ತು ಬ್ಲೂಟೂತ್.

ಎಕ್ಸ್‌ಎಲ್ ಡೀಸೆಲ್ (6-ಸ್ಪೀಡ್)
ಡೀಸೆಲ್ ಎಕ್ಸ್‌ಎಲ್ ಆವೃತ್ತಿಗೆ ಸಮಾನವಾಗಿರುವ ಫೀಚರ್ಸ್ ಜತೆಗೆ 6 ಸ್ಪೀಡನ್ ಮ್ಯಾನುವಲ್ ಟ್ರಾನ್ಸ್‌ಮಿಷನ್.

ಎಕ್ಸ್‌ಎಲ್ ಪ್ಲಸ್ ಡೀಸೆಲ್
ಟ್ವಿನ್ ಏರ್ ಬ್ಯಾಗ್ ಮತ್ತು 16 ಇಂಚಿನ ಯಂತ್ರದ ಮಿಶ್ರಲೋಹದ ಚಕ್ರಗಳು

ಎಕ್ಸ್‌ವಿ ಡೀಸೆಲ್ (6-ಸ್ಪೀಡ್)
ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಲೆಥರ್ ಹೋದಿಕೆಯ ಸ್ಟೀರಿಂಗ್, ಗಿಯರ್ ಶಿಫ್ಟ್ ಸ್ಟಿಕ್ ಮತ್ತು ರಿಯರ್ ಎಸಿ ವೆಂಟ್ಸ್.

ಎಕ್ಸ್‌ವಿ ಪ್ರೀಮಿಯಂ ಡೀಸೆಲ್ (6 ಸ್ಪೀಡ್)
ಲೆಥರ್ ಸೀಟು, ಮುಂಭಾಗದಲ್ಲಿ ಜಿಬ್ರಾ ಮಾದರಿಯ ವುಡ್ ಫಿನಿಶ್, ರಿಯರ್ ಆರ್ಮ್ ರೆಸ್ಟ್ ಮತ್ತು ಡೋರ್ ಟ್ರಿಮ್ ಸ್ಟ್ರಿಪ್.


Click it and Unblock the Notifications