ನಿಸ್ಸಾನ್ ಪಲ್ಸರ್ ಹ್ಯಾಚ್‌ಬ್ಯಾಕ್ ಭರ್ಜರಿ ಅನಾವರಣ

Written By:

ನಿರೀಕ್ಷೆಯಂತೆಯೇ ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಬಹುನಿರೀಕ್ಷಿತ ಪಲ್ಸರ್ ಹ್ಯಾಚ್‌ಬ್ಯಾಕ್ ಕಾರನ್ನು ಅನಾವರಣಗೊಳಿಸಿದೆ. ಆದರೆ ಇದು ಭವಿಷ್ಯದಲ್ಲಿ ಭಾರತ ಮಾರುಕಟ್ಟೆಗೆ ಪ್ರವೇಶಿಸಲಿದೆಯೇ ಎಂಬುದಕ್ಕೆ ಸಂಸ್ಥೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಲಿಲ್ಲ.

ಸದ್ಯ ಯುರೋಪ್ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಈ ನಾಲ್ಕು ಬಾಗಿಲುಗಳ ಹ್ಯಾಚ್‌ಬ್ಯಾಕ್ ಕಾರು ಪ್ರಮುಖವಾಗಿ ಫೋಕ್ಸ್‌ವ್ಯಾಗನ್ ಗಾಲ್ಫ್ ಹಾಗೂ ಫೋರ್ಡ್ ಫೋಕಸ್ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ನಿಸ್ಸಾನ್ ಪಲ್ಸರ್ ಹ್ಯಾಚ್‌ಬ್ಯಾಕ್ ಭರ್ಜರಿ ಅನಾವರಣ

ನಿಮ್ಮ ಮಾಹಿತಿಗಾಗಿ, ಪಲ್ಸರ್ ಎಂಬ ಬ್ರಾಂಡ್ ನಿಸ್ಸಾನ್‌ಗೆ ಹೊಸತೇನಲ್ಲ. ಈ ಹಿಂದೆ 1970ರ ದಶಕದಲ್ಲಿ ಇದೇ ಹೆಸರಿನಲ್ಲಿ ಕಾರು ಲಾಂಚ್ ಮಾಡಿತ್ತು. ಅಷ್ಟೇ ಅಲ್ಲದೆ ಕಳೆದ ವರ್ಷದಲ್ಲಿ ಆಸ್ಟ್ರೇಲಿಯಾ ಮಾರುಕಟ್ಟೆಗೆ ಸೆಡಾನ್ ವರ್ಷನ್ ಪರಿಚಯವಾಗಿತ್ತು.

ನಿಸ್ಸಾನ್ ಪಲ್ಸರ್ ಹ್ಯಾಚ್‌ಬ್ಯಾಕ್ ಭರ್ಜರಿ ಅನಾವರಣ

2014 ಪಲ್ಸರ್ ಸಂಪೂರ್ಣ ಪರಿಷ್ಕೃತ ಶೈಲಿಯನ್ನು ಪಡೆದುಕೊಳ್ಳಲಿದೆ. ಇದು ನಿಸ್ಸಾನ್‌ನ ಜ್ಯೂಕ್ ಹಾಗೂ ಟೈಡಾ ಜೊತೆ ಫ್ಲ್ಯಾಟ್‌ಫಾರ್ಮ್ ಹಂಚಿಕೊಂಡಿದೆ.

ನಿಸ್ಸಾನ್ ಪಲ್ಸರ್ ಹ್ಯಾಚ್‌ಬ್ಯಾಕ್ ಭರ್ಜರಿ ಅನಾವರಣ

ಅತ್ಯಾಧುನಿಕ ತಂತ್ರಜ್ಞಾನಗಳನ್ನು ನೂತನ ಪಲ್ಸರ್‌ನಲ್ಲಿ ಆಳವಡಿಸಲಾಗುವುದು. ಇದರಲ್ಲಿ ಫಾರ್ವರ್ಡ್ ಎಮರ್ಜನ್ಸಿ ಬ್ರೇಕಿಂಗ್, ಮೂವಿಂಗ್ ಒಬ್ಜೆಕ್ಟ್ ಡೆಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್ ಆಂಡ್ ಬ್ಲೈಂಡ್ ಸ್ಪಾಟ್ ವಾರ್ನಿಂಗ್ ವ್ಯವಸ್ಥೆಯಿರಲಿದೆ. ಎಲ್‌ಇಡಿ ಹೆಡ್‌ಲ್ಯಾಂಪ್ ಪಲ್ಸರ್ ಆವೃತ್ತಿಯ ಮಗದೊಂದು ಆಕರ್ಷಣೆಯಾಗಿರಲಿದೆ.

ನಿಸ್ಸಾನ್ ಪಲ್ಸರ್ ಹ್ಯಾಚ್‌ಬ್ಯಾಕ್ ಭರ್ಜರಿ ಅನಾವರಣ

ಅಂದ ಹಾಗೆ ಹೊಸ ಪಲ್ಸರ್ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಪೈಕಿ 1.2 ಲೀಟರ್ ಡಿಐಜಿ ಟಿ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 115 ಪಿಎಸ್ ಪವರ್ (110 ಪಿಎಸ್, 260 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 1.5 ಲೀಟರ್ ಡಿಸಿಐ ಡೀಸೆಲ್ ಹಾಗೂ 1.6 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ (190 ಪಿಎಸ್) ಎಂಜಿನ್ ಲಭ್ಯವಾಗಲಿದೆ.

ನಿಸ್ಸಾನ್ ಪಲ್ಸರ್ ಹ್ಯಾಚ್‌ಬ್ಯಾಕ್ ಭರ್ಜರಿ ಅನಾವರಣ

ಸದ್ಯ ಯುರೋಪ್ ಮಾರುಕಟ್ಟೆಗಳಿಗೆ ಸೀಮಿತವಾಗಿದ್ದರೂ ಪಲ್ಸರ್ ಭಾರತೀಯರ ಪಾಲಿಗೂ ಮಹತ್ವದೆನಿಸುತ್ತದೆ. ಯಾಕೆಂದರೆ ಮುಂಬರುವ ದಿನಗಳಲ್ಲಿ ಪಲ್ಸರ್ ಹ್ಯಾಚ್‌ಬ್ಯಾಕ್ ಅಥವಾ ಸೆಡಾನ್ ವರ್ಷನ್ ಭಾರತ ಮಾರುಕಟ್ಟೆ ಪ್ರವೇಶಿಸಿದರೆ ಅಚ್ಚರಿಯೇನಿಲ್ಲ. ಆದರೆ ಸ್ಮರ್ಧಾತ್ಮಕ ದರಗಳಲ್ಲಿ ಪರಿಚಯಿಸಬೇಕಾಗಿರುವುದು ಅಷ್ಟೇ ಅಗತ್ಯವೆನಿಸಿದೆ.

Story first published: Thursday, May 22, 2014, 16:42 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark