ದಕ್ಷಿಣ vs ಉತ್ತರ; ಯಾರು ಪ್ರಜ್ಞಾವಂತ ಖರೀದಿಗಾರರು?
ಪ್ರಾರಂಭಿಕ ಗುಣಮಟ್ಟದ ಸಮೀಕ್ಷೆ (ಐಕ್ಯೂಎಸ್) ರೇಟಿಂಗ್‌ಗೆ ಪ್ರಸಿದ್ಧಿ ಪಡಿದಿರುವ ದೇಶದ ಮಾರುಕಟ್ಟೆ ಅಧ್ಯಯನ ಸಂಸ್ಥೆಯಾಗಿರುವ ಜೆ.ಡಿ. ಪವರ್, 'ನೂತನ ಇಂಡಿಯಾ ಎಸ್ಕೇಪ್ಡ್ ಕಾರ್ ಶೋಪರ್ಸ್ ಸ್ಟಡಿ' ಎಂಬ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ದಕ್ಷಿಣ ಹಾಗೂ ಉತ್ತರ ಭಾರತೀಯರು ಕಾರು ಖರೀದಿಯಲ್ಲಿ ಏನೆಲ್ಲ ಮಾನದಂಡಗಳನ್ನು ಅನುಸರಿಸುತ್ತಾರೆ ಎಂಬುದನ್ನು ತುಲನೆ ಮಾಡಲಾಗಿದೆ.
ಬೆಳೆದು ಬರುತ್ತಿರುವ ದೇಶದ ದೃಷ್ಟಿಕೋನದಲ್ಲಿ ಕಾರುಗಳ ಸಂಖ್ಯೆಗಳ ವರ್ಧಿಸುತ್ತಿರುವುದು ಆರ್ಥಿಕ ಸ್ಥಿತಿ ಏರುಗತಿಯ ಸಂಕೇತವಾಗಿದೆ. ಇದರಂತೆ ಕಾರಿನ ಮಾರಾಟ ಅಂಕಿಅಂಶದಿಂದಲೇ ಇಡಿ ದೇಶದ ವೃದ್ಧಿದರವನ್ನು ಪತ್ತೆಹಚ್ಚಬಹುದಾಗಿದೆ. ಇಲ್ಲಿ ಅಧಿಕ ಕಾರು ಮಾರಾಟವು ಆರ್ಥಿಕ ಬೆಳವಣಿಗೆಯ ಸಂಕೇತವಾದರೆ ಕಳಪೆ ಮಾರಾಟವು ಕೆಟ್ಟ ಬೆಳವಣಿಗೆಯನ್ನು ಸಾರುತ್ತದೆ.
ಅಷ್ಟಕ್ಕೂ ದಕ್ಷಿಣ ಹಾಗೂ ಉತ್ತರ ವಲಯದಲ್ಲಿ ಯಾರು ಹೆಚ್ಚು ಪ್ರಜ್ಞಾವಂತ ಕಾರು ಖರೀದಿಗಾರರು ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ಮೊದಲ ಬಾರಿಗೆ ಪಶ್ಚಿಮ ಜಯಭೇರಿ
ಇನ್ನು ಭಾರತದಲ್ಲಿ ಪಶ್ಚಿಮ ವಲಯದ ಶೇಕಡಾ 70ರಷ್ಟು ಹಾಗೂ ಪೂರ್ವ ವಲಯದ ಶೇಕಡಾ 57ರಷ್ಟು ಮಂದಿ ಮೊದಲ ಬಾರಿ ಹೊಸ ಕಾರು ಖರೀದಿಸಲು ಬಯಸುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ. ಈ ಮೂಲಕ ಮೊದಲ ಬಾರಿಗೆ ಪಶ್ಚಿಮ ವಲಯ ಜಯಭೇರಿ ಮೊಳಗಿಸಿದೆ.

ಪ್ರತಿಷ್ಠೆಯ ಸಂಕೇತ
ದೇಶದ ಮನೆಮಂದಿ ಮನೆ ಬಳಿಕ ಖರೀದಿಸುವ ಎರಡನೇ ಅತಿದೊಡ್ಡ ಖರೀದಿಯಾಗಿ ಕಾರು ಪರಿಗಣಿಸಲ್ಪಟ್ಟಿದೆ. ವ್ಯಕ್ತಿಯೊಬ್ಬ ಕಾರು ಖರೀದಿಸಿದರೆ ಅದು ಆತನ ಅಭಿವೃದ್ಧಿಯನ್ನು ಸೂಚಿಸುತ್ತದೆ. ಹಾಗಿದ್ದರೂ ವಿದೇಶಗಳಿಗೆ ಪರಿಗಣಿಸಿದಾಗ ಕಾರು ಭಾರತೀಯ ಜನರ ಪ್ರತಿಷ್ಠೆಯ ಸಂಕೇತವಾಗಿದೆ. ಇನ್ನೊಂದೆಡೆ ವಿದೇಶಿಗರು ಕಾರು ಸಾರಿಗೆಗಾಗಿ ಬಳಸುತ್ತಾರೆ.

ಉತ್ತರದಲ್ಲಿ ವಿನ್ಯಾಸ, ದಕ್ಷಿಣದಲ್ಲಿ ಇಂಧನ ಕ್ಷಮತೆ
ಉತ್ತರ ವಲಯದಲ್ಲಿ ಕಾರು ಖರೀದಿ ವೇಳೆ ವಿನ್ಯಾಸವನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಅದೇ ಹೊತ್ತಿಗೆ ದಕ್ಷಿಣ ವಲಯದ ಜನರು ಹೆಚ್ಚು ಇಂಧನ ಕ್ಷಮತೆಯ ಕಾರುಗಳನ್ನು ಆಯ್ಕೆ ಮಾಡುತ್ತಾರೆ.

ಕ್ರಮಬದ್ಧವಾದ ಆಯ್ಕೆ
ಇನ್ನು ಉತ್ತರ ವಲಯಕ್ಕೆ ಹೋಲಿಸಿದರೆ ದಕ್ಷಿಣ ವಲಯದ ಕಾರು ಖರೀದಿ ಗ್ರಾಹಕರು ಹೆಚ್ಚು ಕ್ರಮಬದ್ಧವಾಗಿ ತಮ್ಮ ಕಾರು ಆಯ್ಕೆ ಮಾಡುತ್ತಾರೆ. ಅದೇಗೆ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ಸ್ಲೈಡರ್‌ನತ್ತ ಮುಂದುವರಿಯಿರಿ.

ಅಂತರ್ಜಾಲದಲ್ಲಿ ಶೋಧನೆ
ಅಂತರ್ಜಾಲದಲ್ಲಿ ದಕ್ಷಿಣ ಭಾರತದ ವಾಹನ ಖರೀದಿ ಸಂಶೋಧನೆಯು ಶೇಕಡಾ 42ರಷ್ಟು ಹೆಚ್ಚಾಗಿದೆ. 2009ನೇ ಸಾಲಿನಲ್ಲಿದ್ದು ಶೇಕಡಾ 21ರಷ್ಟಿತ್ತು. ಇನ್ನೊಂದೆಡೆ ಉತ್ತರ ಭಾರತೀಯರು ಸ್ನೇಹಿತರು ಹಾಗೂ ಸಂಬಂಧಿಕರ ಮಾತುಗಳಿಗೆ ಪ್ರೇರಿತರಾಗುತ್ತಾರೆ.

ದಕ್ಷಿಣ ವಲಯವೇ ಮುಂದು
ಅಂತರ್ಜಾಲದಲ್ಲಿ ಕಾರು ದರ, ವೈಶಿಷ್ಟ್ಯ, ವಿಮಾ ಸೌಲಭ್ಯ, ಟೆಸ್ಟ್ ಡ್ರೈವ್ ಸೇರಿದಂತೆ ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಲು ಬಯಸುವ ದಕ್ಷಿಣದ ಗ್ರಾಹಕರು ಹೆಚ್ಚು ಚಾಣತಣದಿಂದ ಕಾರು ಖರೀದಿಯಲ್ಲಿ ತೊಡಗುತ್ತಾರೆ.

ದೊಡ್ಡದಾದ ಕಾರು
ಉತ್ತರ ಭಾರತದ ಗ್ರಾಹಕರು ದೊಡ್ಡ ಗಾತ್ರದ ಕಾರುಗಳನ್ನು ಖರೀದಿಸಲು ಬಯಸುತ್ತಾರೆ. ಇದು ಸಹ ಸಣ್ಣ ಕಾರು ಮಾರುಕಟ್ಟೆ ಬೇಡಿಕೆ ಕುಸಿಯಲು ಕಾರಣವಾಗುತ್ತಿದೆ. ಒಟ್ಟಿನಲ್ಲಿ ಉತ್ತರಕ್ಕೆ ಹೋಲಿಸಿದಾಗ ಕಾರು ಖರೀದಿಯಲ್ಲಿ ದಕ್ಷಿಣ ಭಾರತೀಯರೇ ಹೆಚ್ಚು ಪ್ರಜ್ಞಾವಂತರಾಗಿದ್ದಾರೆ ಎಂದು ಜೆ.ಡಿ ವರದಿ ತಿಳಿಸುತ್ತದೆ.


Click it and Unblock the Notifications








