ಪ್ಲೇ ಬಾಯ್ 'ವರ್ಷದ ಕಾರು 2014' - ಜಾಗ್ವಾರ್ ಎಫ್ ಟೈಪ್
ಅಮೆರಿಕದ ಪುರುಷ ನಿಯತಕಾಲಿಕವಾಗಿರುವ ಪ್ಲೇ ಬಾಯ್ 'ವರ್ಷದ ಕಾರು 2014' ಗೌರವಕ್ಕೆ ಜಾಗ್ವಾರ್ ಎಫ್ ಟೈಪ್ ಪಾತ್ರವಾಗಿದೆ. ಹಲವು ವಿಭಾಗಗಳಲ್ಲಾಗಿ ಪ್ಲೇ ಬಾಯ್ ಸಂಪಾದಕರು ವರ್ಷದ ಕಾರನ್ನು ಆಯ್ಕೆ ಮಾಡಿದ್ದಾರೆ.
ಈ ಪೈಕಿ ಒಟ್ಟಾರೆ ಪ್ರಶಸ್ತಿ ಬಾಚಿಕೊಳ್ಳುವಲ್ಲಿ ಜಾಗ್ವಾರ್ ಎಫ್ ಟೈಪ್ ಯಶಸ್ವಿಯಾಗಿದೆ. ವರ್ಷದ ಕಾರು ಜತೆಗೆ ಶ್ರೇಷ್ಠ ಸ್ಪೋರ್ಟ್ಸ್ ಕಾರು, ಸೆಡಾನ್, ಗ್ರೀನ್ ಮತ್ತು ಎಸ್‌ಯುವಿ ಕಾರನ್ನು ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿ ಪಟ್ಟಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ನಿಮ್ಮ ಮಾಹಿತಿಗಾಗಿ, ವರ್ಷದ ಕಾರು 2014 ಪ್ರಶಸ್ತಿಗೆ ಭಾಜನವಾಗಿರುವ ಜಾಗ್ವಾರ್ ಎಫ್ ಟೈಪ್, ಕೂಪೆ ಹಾಗೂ ಕನ್ವರ್ಟಿಬಲ್ ಮಾದರಿಗಳಲ್ಲಿ ದೊರಕುತ್ತಿದ್ದು, ಹಲವು ಎಂಜಿನ್ ಆಯ್ಕೆಗಳಿವೆ. ಇದು ಅತ್ಯಂತ ಶಕ್ತಿಶಾಲಿ 495 ಅಶ್ವಶಕ್ತಿ ಉತ್ಪಾದಿಸಬಲ್ಲ 5.0 ಲೀಟರ್ ಸೂಪರ್ ಚಾರ್ಜ್ಡ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಸ್ಪೋರ್ಟ್ಸ್ ಕಾರು
ಅದೇ ಹೊತ್ತಿಗೆ ವರ್ಷದ ಸ್ಪೋರ್ಟ್ಸ್ ಕಾರು ಗೌರವಕ್ಕೆ 2014 ಷೆವರ್ಲೆ ಕೊವರ್ಟೆ ಸ್ಟ್ರಿಂಗ್ರೇ ಪಾತ್ರವಾಗಿದೆ. ಈ ವಿಭಾಗದಲ್ಲಿ ಸ್ವಲ್ಪದರಲ್ಲೇ 2015 ಆಸ್ಟನ್ ಮಾರ್ಟಿ, 2014 ಎಸ್‌ಆರ್‌ಟಿ ವೈಪರ್ ಮತ್ತು 2014 ಪೋರ್ಷೆ ಕೇಮ್ಯಾನ್ ಪ್ರಶಸ್ತಿ ವಂಚಿತವಾಗಿದೆ.

ಸೆಡಾನ್
ಇನ್ನು ಸೆಡಾನ್ ವಿಭಾಗದಲ್ಲಿ 2014 ಮರ್ಸಿಡಿಸ್ ಬೆಂಝ್ ಸಿಎಲ್‌ಇ250 ಮನ್ನಣೆಗೆ ಪಾತ್ರವಾಗಿದೆ. ಈ ವಿಭಾಗದಲ್ಲಿ 2014 ಕ್ಯಾಡಿಲಾಕ್ ಸಿಟಿಎಸ್, 2014 ಆಡಿ ಆರ್‌ಎಸ್ 7 ಮತ್ತು 2014 ಮಾಜ್ದಾ 3ರಿಂದ ಕಠಿಣ ಪೈಪೋಟಿ ಎದುರಾಗಿತ್ತು.

ಹಸಿರು ಕಾರುಗಳು
ಅದೇ ರೀತಿ ಗ್ರೀನ್ ಕಾರು ಪಟ್ಟವನ್ನು 2014 ಹೋಂಡಾ ಅಕಾರ್ಡ್ ಹೈಬ್ರಿಡ್ ಕಟ್ಟಿಕೊಂಡಿದೆ. ನಿಮ್ಮೆಲ್ಲರ ಅರಿವಿಗಾಗಿ, ಹೋಂಡಾ ಅಕಾರ್ಡ್ ಹೈಬ್ರಿಡ್ ಕಾರು ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇಲ್ಲಿ 2014 ಬಿಎಂಡಬ್ಲ್ಯು ಐ3, 2014 ಟೆಸ್ಲಾ ಮಾಡೆಲ್ ಎಸ್ ಮತ್ತು 2014 ಷೆವರ್ಲೆ ಕ್ರೂಜ್ ಡೀಸೆಲ್ ಸವಾಲು ಎದುರಿಸುವಲ್ಲಿ ಹೋಂಡಾ ಅಕಾರ್ಡ್ ಹೈಬ್ರಿಡ್ ಯಶಸ್ವಿಯಾಗಿದೆ.

ಎಸ್‌ಯುವಿ/ಕ್ರಾಸೋವರ್
ಅಂತಿಮವಾಗಿ ಎಸ್‌ಯುವಿ/ಕ್ರಾಸೋವರ್ ವಿಭಾಗದಲ್ಲಿ 2014 ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ಸ್ ವರ್ಷದ ಕಾರು ಪ್ರಶಸ್ತಿಗೆ ಪಾತ್ರವಾಗಿದೆ. ಹಾಗಿದ್ದರೂ ಬಿಎಂಡಬ್ಲ್ಯು ಎಕ್ಸ್5, 2015 ಸುಬರು ಫಾರೆಸ್ಟರ್‌ನಿಂದ ನಿಕಟ ಪೈಪೋಟಿ ಎದುರಾಗಿತ್ತು.


Click it and Unblock the Notifications








