1 ಲಕ್ಷ ಮೈಲುಗಲ್ಲು; ರೆನೊ ಡಸ್ಟರ್ ಸೀಮಿತ ಆವೃತ್ತಿ ಲಾಂಚ್
ಬಿಡುಗಡೆಯಾದ ಎರಡು ವರ್ಷದೊಳಗೆ ಒಂದು ಲಕ್ಷ ಯುನಿಟ್‌ಗಳ ಮಾರಾಟದ ಮೈಲುಗಲ್ಲು ತಲುಪಿರುವ ದೇಶದ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿರುವ ಡಸ್ಟರ್ ಯಶಸ್ಸನ್ನು ಆಚರಿಸಲು ಮುಂದಾಗಿರುವ ರೆನೊ ಇಂಡಿಯಾ ಸಂಸ್ಥೆಯು, ಆಕರ್ಷಕ ಸೀಮಿತ ಆವೃತ್ತಿಯನ್ನು ಲಾಂಚ್ ಮಾಡಿದೆ.
2012ನೇ ಸಾಲಿನ ಜುಲೈ ತಿಂಗಳಲ್ಲಿ ಲಾಂಚ್ ಆಗಿದ್ದ ಡಸ್ಟರ್ ಈಗಾಗಲೇ ಒಂದು ಲಕ್ಷ ಯುನಿಟ್ ಅಮೋಘ ಮಾರಾಟದ ಸಾಧನೆ ಮಾಡಿದೆ. ಇದರಂತೆ ಈ ಸಂತೋಷವನ್ನು ಗ್ರಾಹಕರ ಜೊತೆ ಹಂಚಿಕೊಳ್ಳಲು ಮುಂದಾಗಿರುವ ಫ್ರಾನ್ಸ್ ಮೂಲದ ವಾಹನ ತಯಾರಕ ಸಂಸ್ಥೆಯು ಡಸ್ಟರ್ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

85 ಅಶ್ವಶಕ್ತಿ ಉತ್ಪಾದಿಸುವ ಆರ್‌ಎಕ್ಸ್‌ಎಲ್ ಪ್ಲಸ್ ಮೂಲ ಮಾದರಿಯಲ್ಲಿ ಡಸ್ಟರ್ ಒಂದು ಲಕ್ಷದ ಸೀಮಿತ ಆವೃತ್ತಿ ಲಾಂಚ್ ಆಗಿದೆ.

ಇದು ಆಕರ್ಷಕ ಒಳಮೈ ಹಾಗೂ ಎಬಿಎಸ್ ಮತ್ತು ಫ್ರಂಟ್ ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದುಕೊಂಡಿವೆ.

ಪ್ರಸಕ್ತ ತಿಂಗಳಿನಿಂದಲೇ ರೆನೊ ಡಸ್ಟರ್ ಲಿಮಿಟೆಡ್ ಎಡಿಷನ್ ಮಾರಾಟಕ್ಕೆ ಲಭ್ಯವಾಗಲಿದೆ. ಇದು ಎಕ್ಸ್ ಶೋ ರೂಂ ದರ 9.99 ಲಕ್ಷ ರು.ಗಳಾಗಿರಲಿದೆ.

ಜಾಗತಿಕವಾಗಿ ಡಸ್ಟರ್ ಪಾಲಿಗೆ ಟಾಪ್ ಫೈವ್ ಮಾರಾಟದಲ್ಲಿ ಗುರುತಿಸಿಕೊಂಡಿರುವ ಡಸ್ಟರ್ 100ಕ್ಕೂ ದೇಶಗಳಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ ಇತ್ತೀಚೆಗಷ್ಟೇ ಜಾಗತಿಕವಾಗಿ 10 ಲಕ್ಷ ಮಾರಾಟವನ್ನು ದಾಖಲಿಸಿತ್ತು.

ಅಷ್ಟೇ ಅಲ್ಲದೆ 'ಇಂಡಿಯನ್ ಕಾರ್ ಆಫ್ ದಿ ಇಯರ್ 2012' ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಡಸ್ಟರ್ ಬಾಚಿಕೊಂಡಿದೆ. ವರದಿಗಳ ಪ್ರಕಾರ ಡಸ್ಟರ್ 4X4 ಅಡ್ವೆಂಚರ್ ಎಡಿಷನ್ ಸಹ ಪ್ರಸಕ್ತ ಸಾಲಿನಲ್ಲೇ ಆಗಮನವಾಗಲಿದೆ.


Click it and Unblock the Notifications








