ಹೊಸ ವರ್ಷದಲ್ಲೇ ಡಸ್ಟರ್ ಫೇಸ್‌ಲಿಸ್ಟ್ ಲಾಂಚ್ ಖಚಿತ
ಒಂದೆಡೆ ಮಾರುಕಟ್ಟೆಯಲ್ಲಿ ಇಕೊಸ್ಪೋರ್ಟ್, ಟೆರನೊ ಕಾರುಗಳು ಸದ್ದು ಮಾಡುತ್ತಿರುವ ಕಳೆಗುಂದಿರುವ ಡಸ್ಟರ್ ಹೊಸ ಸ್ವರೂಪ ಪಡೆದುಕೊಳ್ಳಲು ತಯಾರಾಗುತ್ತಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಮಿನಿ ಎಸ್‌ಯುವಿ ಎಂದೇ ಖ್ಯಾತಿ ಪಡೆದಿರುವ ಇಂತಹ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಲು ಕಾರಣವಾಗಿದೆ. ಬಲ್ಲ ಮೂಲಗಳ ಪ್ರಕಾರ ರೆನೊ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್ ಹೊಸ ವರ್ಷದಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ. ಇದನ್ನು ಹೋಂಡಾ ಹಾಗೂ ಹ್ಯುಂಡೈ ಎಸ್‌ಯುವಿ ಕಾರುಗಳು ಹಿಂಬಾಲಿಸಲಿದೆ.

ಇದೀಗ ಬಂದಿರುವ ವರದಿಗಳ ಪ್ರಕಾರ 2014 ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಇಂಡಿಯನ್ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿರುವ ರೆನೊ ಡಸ್ಟರ್ ಫೇಸ್‌ಲಿಫ್ಟ್ ಬೆನ್ನಲ್ಲೇ ಲಾಂಚ್ ಆಗಲಿದೆ.

ಅಷ್ಟೇ ಅಲ್ಲದೆ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಒಂದೆರಡು ಹೊಸ ವೆರಿಯಂಟ್‌ಗಳನ್ನು ಸೇರ್ಪಡಿಸುವ ಎಲ್ಲ ಸಾಧ್ಯತೆಗಳು ಎದ್ದು ಕಾಣಿಸುತ್ತಿದೆ.

ಏತನ್ಮಧ್ಯೆ ರೆನೊ ಡಸ್ಟರ್ ಆಟೋಮ್ಯಾಟಿಕ್ ಹಾಗೂ 4X4 ವರ್ಷನ್ ಸಹ ಇದೇ ಸಂದರ್ಭದಲ್ಲಿ ಬಿಡುಗಡೆಯಾಗುವ ಬಗ್ಗೆ ನಿರೀಕ್ಷಿಸಲಾಗಿದೆ.

ಅಂದ ಹಾಗೆ ಡಸ್ಟರ್‌ನ ಹೊಸ ವೆರಿಯಂಟ್ 1.2 ಲೀಟರ್ ಟಿಸಿಇ (TCe) ಟರ್ಬೊಚಾರ್ಜ್ಡ್ ಪೆಟ್ರೋಲ್ ಮಿಲ್ ಎಂಜಿನ್‌ನಿಂದ ನಿಯಂತ್ರಿಲಸ್ಪಡಲಿದೆ. ಅಲ್ಲದೆ ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಇದು ಫೋರ್ಡ್‌ನ ಜನಪ್ರಿಯ 1 ಲೀಟರ್ ಇಕೊಬೂಸ್ಟ್ ಎಂಜಿನ್‌ಗೆ ಪ್ರತಿಸ್ಪರ್ಧೆ ಒಡ್ಡಲು ಡಸ್ಟರ್‌ಗೆ ನೆರವಾಗಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಬೇಡಿಕೆ ಎಷ್ಟರ ಮಟ್ಟಿಗೆ ಬೆಳೆದಿದೆ ಅಂದರೆ ಹ್ಯಾಚ್‌ಬ್ಯಾಕ್ ವಿಭಾಗದ ಮಾರಾಟವನ್ನೇ ಮೀರಿಸುವಂತಿದೆ. ಕಾರು ಮಾರುಕಟ್ಟೆ ಕುಸಿಯುತ್ತಿರುವ ನಡೆವೆಯೂ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಕಾಂಪಾಕ್ಟ್ ಎಸ್‌ಯುವಿ ಯಶಸ್ವಿಯಾಗಿದೆ.

ಡ್ಯುಯಲ್ ಟೋನ್ ಕ್ರೋಮ್ ಗ್ರಿಲ್, ಪರಿಷ್ಕೃತ ಹೆಡ್‌ಲೈಟ್, ಹೊಸ ಟೈಲ್ ಲ್ಯಾಂಪ್ ಕ್ಲಸ್ಟರ್, ಕ್ರೋಮ್ ಲೈನ್ ಎಕ್ಸಾಸ್ಟ್ ಮತ್ತು ಡೇ ಟೈಮ್ ರನ್ನಿಂಗ್ ಎಲ್‌ಇಡಿಗಳು 2014 ಫೇಸ್‌ಲಿಫ್ಟ್ ಡಸ್ಟರ್‌ನ ಪ್ರಮುಖ ಆಕರ್ಷಣೆಯಾಗಿರಲಿದೆ.

ಇವೆಲ್ಲದರ ಜತೆ ಸ್ಫೋರ್ಟಿ ಅಲಾಯ್ ವೀಲ್ ಸಹ ಎಂಟ್ರಿ ಕೊಡುವ ಸಾಧ್ಯತೆಯಿದೆ. ಇನ್ನು ಇಂಟಿರಿಯರ್ ಭಾಗಗಳಲ್ಲೂ ಕೆಲವೊಂದು ಬದಲಾವಣೆ ಕಂಡುಬರಲಿದೆ.


Click it and Unblock the Notifications








