ಯಶಸ್ಸನ್ನು ಹುಡುಕುತ್ತಾ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್
ಇದೀಗಲೇ ಪ್ರಖ್ಯಾತ 2013 ಫ್ರಾಂಕ್‌ಫರ್ಟ್ ಮೋಟಾರ್ ಶೋ ಆರಂಭವಾಗಿರುವಂತೆಯೇ ಜನಪ್ರಿಯ ರೆನೊ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್ ಅನಾವರಣಗೊಂಡಿದೆ.
ಕಳೆದ ತಿಂಗಳಲ್ಲಿ ಡಸ್ಟರ್ ಕ್ರೀಡಾ ಬಳಕೆಯ ವಾಹನದ ಸ್ಟುಡಿಯೋ ಚಿತ್ರಗಳನ್ನು ಬಿಡುಗಡೆಗೊಳಿಸಿದ್ದ ರೆನೊ, ಇದೀಗ ಇಂಟಿರಿಯರ್ ಸೇರಿದಂತೆ ಸಕತ್ ಸ್ಟೈಲಿಷ್ ಫೋಟೋಸ್‌ಗಳನ್ನು ಬಿಡುಗಡೆಗೊಳಿಸಿದೆ. ಜಾಗತಿಕವಾಗಿ 2013ನೇ ಸಾಲಿನಲ್ಲಿ ರೆನೊ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದಿತ್ತಿರುವ ಡಸ್ಟರ್, ಮಾರಾಟದಲ್ಲೂ ಅತ್ಯಂತ ಹೆಚ್ಚು ಪ್ರಗತಿಯನ್ನು ಸಾಧಿಸಿದೆ.
ನೂತನ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ಡಸ್ಟರ್ ಫೇಸ್‌ಲಿಫ್ಟ್
2010ರಲ್ಲಿ ಮೊದಲ ಬಾರಿಗೆ ಡ್ಯಾಸಿಯಾ ಲೊಗೊ ಪಡೆದುಕೊಂಡಿದ್ದ ಡಸ್ಟರ್ ಆ ಬಳಿಕ ವಿಶ್ವದ್ಯಾಂತ ಅತ್ಯುತ್ತಮ ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ವಿನ್ಯಾಸ
ಪರಿಷ್ಕೃತ ಫ್ರಂಟ್ ಗ್ರಿಲ್ ಮತ್ತು ಹೆಡ್‌ಲೈಟ್ ನೂತನ ಫೇಸ್‌ಲಿಫ್ಟ್ ವರ್ಷನ್‌ನ ಪ್ರಮುಖ ಆಕರ್ಷಣೆಯಾಗಿದೆ.

ಆಫ್ ರೋಡಿಂಗ್
ಇನ್ನು ಆಫ್ ರೋಡ್ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಕಾರಿಗೆ 16 ಇಂಚು ಅಲಾಯ್ ವೀಲ್‌ಗಳನ್ನು ಒದಗಿಸಲಾಗಿದೆ.

ರಿಯರ್ ವ್ಯೂ
ಹಿಂದುಗಡೆ ವಿನ್ಯಾಸವನ್ನು ಸಹ ಪರಿಷ್ಕೃತಗೊಳಿಸಲಾಗಿದ್ದು, 4X4 ಬ್ಯಾಡ್ಜ್ ಹಾಗೂ ಪರಿಷ್ಕೃತ ಟೈಲ್ ಲ್ಯಾಂಪ್‌ಗಳು ಪ್ರಮುಖ ಆಕರ್ಷಣೆಯಾಗಿದೆ.

ಇಂಟಿರಿಯರ್
ಕಾರಿನ ಒಳಗಡೆ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಪರಿಷ್ಕೃತ ಡ್ಯಾಶ್ ಬೋರ್ಡ್, ಹ್ಯಾಂಡಲ್ ಬಾರ್‌ನಲ್ಲಿ ಕ್ರೋಮ್ ಹೋದಿಕೆ, ಟಚ್ ಸ್ಕ್ರೀನ್ ಮಾಹಿತಿ ಸಿಸ್ಟಂಗಳಂತಹ ಫೀಚರ್‌ಗಳಿವೆ.

ಎಂಜಿನ್
ಹಾಗಿದ್ದರೂ ಯಾವ ಎಂಜಿನ್ ಮಾನದಂಡಗಳಲ್ಲಿ ಲಭ್ಯವಾಗಲಿದೆ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಮಾಹಿತಿಗಳು ಬಂದಿಲ್ಲ.


Click it and Unblock the Notifications








