ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ಡಸ್ಟರ್ ಹೊಸ ಸ್ವರೂಪ
ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ರೆನೊ ಡಸ್ಟರ್ ಹೊಸ ಸ್ವರೂಪ ಪಡೆಯುತ್ತಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಪ್ರಸ್ತುತ ಕಾರು ಮುಂದಿನ ವರ್ಷ ದೇಶದ ರಸ್ತೆಯನ್ನು ಪ್ರವೇಶಿಸಲಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ನೀವೆಲ್ಲರೂ ಕಾತರದಿಂದ ಕುಳಿತುಕೊಂಡಿರುವ ಫೇಸ್‌ಲಿಫ್ಟ್ ಡಸ್ಟರ್‌ನ ಅಧಿಕೃತ ಚಿತ್ರಗಳು ಈಗಾಗಲೇ ಬಿಡುಗಡೆಗೊಂಡಿವೆ. ಇದು ಕಾರು ಪ್ರಿಯರ ಕುತೂಹಲವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.
ಭಾರತಕ್ಕೆ ಆಗಮಿಸಲಿರುವ ನೂತನ ಕಾರು, ಡ್ಯಾಸಿಯಾ ಡಸ್ಟರ್ ಫೇಸ್‌ಲಫ್ಟ್ ವರ್ಷನ್‌ಗೆ ಸಮಾನವಾದ ಸ್ವರೂಪ ಪಡೆದುಕೊಂಡಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿದ್ದ ಪ್ರಸ್ತುತ ಕಾರು ರೆನೊ ಬ್ಯಾಡ್ಜ್ ಪಡೆದುಕೊಂಡು ಭಾರತ ಮಾರುಕಟ್ಟೆ ಪ್ರವೇಶಿಸಲಿದೆ.

ಮುಖಭಂಗಿ
ರೆನೊ ಡಸ್ಟರ್ ಪ್ರಮುಖ ವಿಭಿನ್ನತೆ ಕಂಡುಬರುತ್ತಿರುವುದು ಇದರ ಮುಖಭಂಗಿಯಲ್ಲಿ. ನೀವು ಡಸ್ಟರ್ ಪ್ರೇಮಿಯಾದ್ದಲ್ಲಿ ಮೊದಲ ನೋಟಕ್ಕೆ ವ್ಯತ್ಯಾಸವನ್ನು ಗಮನಿಸಬಹುದು. ಯಾಕೆಂದರೆ ಆಲ್ ನ್ಯೂ ರೆನೊ ಡಸ್ಟರ್ ಹೊಸತಾದ ಫ್ರಂಟ್ ಗ್ರಿಲ್ ಪಡೆದುಕೊಂಡಿದೆ.

ಇದರ ಜತೆಗೆ ಹೆಡ್ ಲ್ಯಾಂಪ್ ಮತ್ತು ಡೇಟೈಮ್ ರನ್ನಿಂಗ್ ಲೈಟ್ಸ್ ಸಹ ಹೊಸ ಸ್ವರೂಪ ಪಡೆದುಕೊಳ್ಳಲಿದೆ.

ಇನ್ನು ಹಿಂದುಗಡೆ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಹಾಗಿದ್ದರೂ ಪರಿಷ್ಕೃತ ಲ್ಯಾಂಪ್ ಕ್ಲಸ್ಟರ್ ಮತ್ತು ಲೈಸನ್ಸ್ ಪ್ಲೇಟ್‌ನ ಮೇಲ್ಗಡೆಯ ಪ್ಲಾಸ್ಟಿಕ್ ಹೋದಿಕೆ ಹೆಚ್ಚಿನ ಅಂದತೆಗೆ ಕಾರಣವಾಗಲಿದೆ.

ಉಳಿದಂತೆ ಕಾರಿನ ಹೊರಮೈಯಲ್ಲಿ ವಿಶೇಷವಾದ ಡಸ್ಟರ್ ಬ್ರಾಂಡ್ ಮೇಲ್ಛಾವಣಿ ಹಾಗೂ 16 ಇಂಚಿನ ಅಲಾಯ್ ವೀಲ್ ವಿಭಿನ್ನವಾಗಿಸಲಿದೆ.

ಇನ್ನು ಕಾರಿನ ಒಳಗಡೆ ಗಮನಿಸಿದಾಗ ಸ್ಟೀರಿಂಗ್, ಮಾಹಿತಿ ಸಿಸ್ಟಂ ಎಲ್ಲವೂ ಹೊಸತಾಗಿರಲಿದೆ.

ಅಂತಿಮವಾಗಿ ರೆನೊ ಡಸ್ಟರ್ ಹೊಸತಾದ ಇನ್ಸ್ಟ್ರಮೆಂಟ್ ಕ್ಲಸ್ಟರ್ ಮತ್ತು ಪರಿಷ್ಕೃತ ಸೆಂಟರ್ ಕನ್ಸೋಲ್ ಪಡೆಯಲಿದೆ.

ಇಷ್ಟೆಲ್ಲ ಆದರೂ ಎಂಜಿನ್ ತಾಂತ್ರಿಕತೆಯಲ್ಲಿ ಬದಲಾವಣೆಯುಂಟಾಗಲಿದೆಯೇ ಎಂಬುದಕ್ಕೆ ಸ್ಪಷ್ಟ ಮಾಹಿತಿ ಬಂದಿಲ್ಲ. ಹಾಗೆಯೇ ದರ ಮಂತಾದ ವಿಚಾರಗಳಿಗೆ ಲಾಂಚ್ ವೇಳೆಯಷ್ಟೇ ಮಾಹಿತಿ ಸಿಗಲಿದೆ.


Click it and Unblock the Notifications








