ನೀವು ನೋಡಿರದ ದೇಶದ ವಿಂಟೇಜ್ ಕಾರು ಕಲೆಕ್ಷನ್

Posted By:

ಭಾರತದಲ್ಲಿ ವಿಂಟೇಜ್ ಕಾರುಗಳಿಗೆ ಬಹುದೊಡ್ಡ ಇತಿಹಾಸವಿದೆ. ಹಿಂದೆ ರಾಜರ ಕಾಲಘಟ್ಟದಿಂದ ಹಿಡಿದು ಸ್ವಾತಂತ್ರ್ಯ ಪೂರ್ವ ಬ್ರಿಟಿಷರ ಆಳ್ವಿಕೆ ಕಾಲದಲ್ಲೂ ವಿಂಟೇಜ್ ಕಾರುಗಳು ತನ್ನದೇ ಆದ ಮಹತ್ವವನ್ನು ಪಡೆದಿದೆ.

ಹಿಂದೆಲ್ಲ ವಿಂಟೇಜ್ ಕಾರುಗಳು ಪ್ರತಿಷ್ಠೆಯ ವಿಷಯವಾಗಿತ್ತು. ಪ್ರಸ್ತುತ ಇಂತಹ ಕಾರುಗಳು ಸಂಗ್ರಹಾಲಯಗಳಲ್ಲಿ ಮಾತ್ರ ಕಾಣ ಸಿಗುತ್ತವೆ. ಅವುಗಳಲ್ಲಿ ನಮ್ಮ ಧರ್ಮಸ್ಥಳದಲ್ಲಿರುವ ಮಂಜುಶಾ ಮ್ಯೂಸಿಯಂ ಪ್ರಮುಖವಾಗಿದೆ. ಹಾಗೆಯೇ ಮೈಸೂರು ಮಹಾರಾಜರ ಬಳಿಯೂ ವಿಂಟೇಜ್ ಕಾರುಗಳಿದ್ದವು.

ಇಂದಿನ ಈ ಲೇಖನದಲ್ಲಿ ದೇಶದ ಸಮೃದ್ಧಿಯನ್ನು ಎತ್ತಿ ಹಿಡಿದಿರುವ ಹಳೆಯ ಕಾರುಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಪ್ರಮುಖವಾಗಿಯೂ 1900ರ ಕಾಲಘಟ್ಟದಲ್ಲಿ ವಿಂಟೇಜ್ ಕಾರುಗಳು ಅತಿ ಹೆಚ್ಚು ಗಮನ ಸೆಳೆದಿದ್ದವು.

1927 Ford Grain Truck

1927 Ford Grain Truck

ಸರ್ಪೋಪಯೋಗಿ ವಾಹನವಾಗಿರುವ ಇದನ್ನು ಪ್ರಮುಖವಾಗಿಯೂ ರೈತರ ಉಪಯೋಗಕ್ಕಾಗಿ ಬಳಸಲಾಗಿತ್ತು. 86 ವರ್ಷ ಹರೆಯದ ಈ ವಿಂಟೇಜ್ ಕಾರು 2.9 ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಫೋರ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. ರಿಯರ್ ವೀಲ್ ಡ್ರೈವ್ ಆಗಿರುವ ಫೋರ್ಡ್ ಗ್ರೈನ್ ಟ್ರಕ್ 28 ಲೀಟರ್ ಫ್ಯೂಯಲ್ ಟ್ಯಾಂಕ್ ಹೊಂದಿದೆ.

1935 Ford V8

1935 Ford V8

ಅಮೆರಿಕದಲ್ಲಿ ಅಂದಿನ ಪ್ರಮುಖ ಬ್ರಾಂಡ್ ಆಗಿದ್ದ ಷೆವರ್ಲೆಯನ್ನು ಹಿಮ್ಮೆಟ್ಟಿಸಲು ಫೋರ್ಡ್‌ನ ಈ ವಿ8 ವಿಂಟೇಜ್ ಕಾರು ನೆರವಾಗಿತ್ತು. ಅಂದಿನ ಕಾಲಘಟ್ಟದಲ್ಲಿ ಹಲವಾರು ಹೊಸ ಸೌಲಭ್ಯಗಳೊಂದಿಗೆ ಆಗಮಿಸಿದ್ದ ಫೋರ್ಡ್ ವಿ8 ಆಧುನಿಕ ಕಾರು ಎನಿಸಿಕೊಂಡಿತ್ತು. ಅಲ್ಲದೆ ರೇಡಿಯೋ ಆಯ್ಕೆ ಕೂಡಾ ಲಭ್ಯವಿರುವುದು ಅತಿ ವಿಶೇಷವೆನಿಸಿತ್ತು.

1937 Adler

1937 Adler

ಆಡ್ಲೆರ್ 1900ರಿಂದ 1957 ಕಾಲಘಟ್ಟದಲ್ಲಿದ್ದ ಜರ್ಮನ್ ಕಾರು ಬ್ರಾಂಡ್ ಆಗಿದೆ. 1937ರ ಈ ಮಾಡೆಲ್ ಪ್ರೀಮಿಯಂ ಸೆಲೂನ್ ಎಂದು ಪರಿಗಣಿಸಲ್ಪಟ್ಟಿತ್ತು. ಇದು 3 ಲೀಟರ್ ಆರು ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಖರೀದಿಗಾರರಿಗೆ ನಾಲ್ಕು ಅಥವಾ ಆರು ಸೀಟಿನ ಆಯ್ಕೆ ಲಭ್ಯವಿತ್ತು.

1946 Wolseley 8 Saloon

1946 Wolseley 8 Saloon

1946ನೇ ಇಸವಿಯಲ್ಲಿ Wolseley 8 Saloon ಲಾಂಚ್ ಆಗಿತ್ತು. ಎರಡನೇ ಮಹಾಯುದ್ಧ ಬಳಿಕ ಬಿಡುಗಡೆಗೊಂಡಿರುವ ಈ ಕಾರು 918 ಸಿಸಿ ಫೋರ್ ಸಿಲಿಂಡರ್ ಎಂಜಿನ್‌ನಿಂದ ತಯಾರಿಸಲ್ಪಟ್ಟಿದೆ. ಲಾಂಚ್ ವೇಳೆ ಇದರ ದರ 35,000 ಆಗಿತ್ತು.

1948 Chevrolet Fleet Master

1948 Chevrolet Fleet Master

1948ನೇ ಇಸವಿಯ ಷೆವರ್ಲೆ ಫ್ಲೀಟ್ ಮಾಸ್ಟರ್ 2.8 ಲೀಟರ್ ಆರು ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಐದು ಜನರಿಗೆ ಆರಾಮವಾಗಿ ಕುಳಿತುಕೊಳ್ಳುವ ವ್ಯವಸ್ಥೆಯಿರುವ ಈ ಕಾರು ಉತ್ತಮ ನಿರ್ವಹಣೆ ಕೂಡಾ ಹೊಂದಿದೆ.

1956 Jaguar Mark VII

1956 Jaguar Mark VII

1956ನೇ ಇಸವಿಯ ಜಾಗ್ವಾರ್ ಮಾರ್ಕ್ VII ಅತಿ ವಿರಳವಾಗಿರುವ ವಿಂಟೇಜ್ ಕಾರಾಗಿದೆ. ಲಂಡನ್ ಮೋಟಾರ್ ಶೋದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ಇದು 3.4 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದು 190 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ವೇಗತೆಗೆ ಹೆಸರುವಾಸಿಯಾಗಿರುವ ಆ ಜಾಗ್ವಾರ್ ಪ್ರತಿ ಗಂಟೆಗೆ 167 ಕೀ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿತ್ತು.

1961 VW Beetle

1961 VW Beetle

1961ರ ದಶಕದಲ್ಲಿ ಫೋಕ್ಸ್‌ವ್ಯಾಗನ್ ಬೀಟ್ಲ್ ಜನಪ್ರಿಯ ಪಡೆದಿತ್ತು. ಹಲವು ವರ್ಷಗಳ ತನಕ ಅತಿ ಹೆಚ್ಚು ಮಾರಾಟಗೊಂಡ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೀಟ್ಲ್ ನೈಜ ವಿನ್ಯಾಸ ಪಡೆದುಕೊಂಡಿತ್ತು. ಇದು 1.2 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.

1962 Standard Herald

1962 Standard Herald

ಮದ್ರಾಸ್ (ಚೆನ್ನೈ) ತಲಹದಿಯ ಭಾರತೀಯ ವಾಹನ ತಯಾರಕ ಸಂಸ್ಥೆ ಸ್ಟಾಂಡರ್ಡ್ ಉತ್ಪನ್ನವಾಗಿದೆ ಸ್ಟಾಂಡರ್ಡ್ ಹೇರಾಲ್ಡ್. ಆರಂಭದಲ್ಲಿ ಬ್ರಿಟನ್ ಬಿಡಿಭಾಗ ಜೋಡಣೆಯೊಂದಿಗೆ ಕಾರು ಬಿಡುಯಾಡೆಯಾಗುತ್ತಿತ್ತು. ಕ್ರಮೇಣ ಬ್ರಿಟಿಷ್ ಅವಲಂಬನೆ ತಗ್ಗಿಸುವಲ್ಲಿ ಯಶಸ್ವಿಯಾಗಿತ್ತು.

ನಿಮ್ಮ ಬಳಿಯೂ ವಿಂಟೇಜ್ ಕಾರುಗಳ ಮಾಹಿತಿಯಿದ್ದರೆ ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ.

ಇವನ್ನೂ ಓದಿ: ಧರ್ಮಸ್ಥಳದ ವಿಂಟೇಜ್ ಕಾರು ಸಂಗ್ರಹಾಲಯ ನೋಡಿದ್ರಾ?

English summary
Auto shows across India have a special section for vintage cars and vintage bikes. We have come across several vintage cars during our visits to automobile events. Some of these vintage cars have been cared for and maintained in pristine condition.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark